Advertisement
ಯುಐಡಿಎಐ(UIDAI) ಆಧಾರ್ ಗೆ ಸಂಬಂಧಿಸಿದ ಕೆಲವು ಹೊಸ ಸೇವೆಗಳನ್ನು ಪ್ರಾರಂಭಿಸಿದ್ದು, ನಿಮ್ಮ ಮೊಬೈಲ್ ಎಸ್ ಎಂ ಎಸ್ ಮೂಲಕ ಪಡೆಯಬಹುದಾಗಿದೆ.
Related Articles
Advertisement
ವರ್ಚುವಲ್ ಐಡಿಯನ್ನು ಕ್ರಿಯೇಟ್ ಮಾಡಲು, ಮೊಬೈಲ್‌ನ ಮೆಸೇಜ್ ಬಾಕ್ಸ್ ಗೆ ಹೋಗಿ GVID (Space) ಮತ್ತು ನಿಮ್ಮ ಆಧಾರ್ ನಂಬರ್ ನ ಕೊನೆಯ 4 ಸಂಖ್ಯೆಗಳನ್ನು ನಮೂದಿಸಿ ಹಾಗೂ ಅದನ್ನು 1947 ಸಂಖ್ಯೆಗೆ ಎಸ್ ಎಮ್ ಎಸ್ ಮಾಡಿ.
– ವಿಐಡಿ ಪಡೆಯಲು RVID (ಸ್ಪೇಸ್) ಎಂದು ಟೈಪ್ ಮಾಡಿ ಮತ್ತು ನಿಮ್ಮ ಆಧಾರ್ ನ ಕೊನೆಯ ನಾಲ್ಕು ಸಂಖ್ಯೆಗಳನ್ನ ನಮೂದಿಸಿ.
– ಒಟಿಪಿಯನ್ನು ಎರಡು ರೀತಿಯಲ್ಲಿ ಪಡೆಯಬಹುದು. ಒಂದು ನಿಮ್ಮ ಆಧಾರ್ ಸಂಖ್ಯೆಯ ಮೂಲಕ, ಎರಡನೆಯದು ನಿಮ್ಮ ವಿಐಡಿ ಮೂಲಕ.
– ಆಧಾರ್ ನಿಂದ ಒಟಿಪಿ ಪ್ರಕಾರ – GETOTP (ಸ್ಪೇಸ್) ಮತ್ತು ನಿಮ್ಮ ಆಧಾರ್‌ನ ಕೊನೆಯ ನಾಲ್ಕು ಸಂಖ್ಯೆಗಳನ್ನ ನಮೂದಿಸಿ.
– ವಿಐಡಿ ಟು ಒಟಿಪಿ ಪ್ರಕಾರಕ್ಕಾಗಿ – GETOTP (ಸ್ಪೇಸ್) ಮತ್ತು ನಿಮ್ಮ ಅಧಿಕೃತ ವರ್ಚುವಲ್ ಐಡಿಯ ಕೊನೆಯ 6 ಸಂಖ್ಯೆಗಳನ್ನ SMS ನಲ್ಲಿ ನಮೂದಿಸಿ
ಇನ್ನು, ಈ ಸೌಲಭ್ಯದ ಮೂಲಕ ಆಧಾರ್ ಕಾರ್ಡ್ ನನ್ನು ಲಾಕ್ ಹಾಗೂ ಅನ್ ಲಾಕ್ ಕೂಡ ಮಾಡಬಹುದಾಗಿದೆ.
ಇದನ್ನೂ ಓದಿ : ಕಂಬಳದ `ಉಸೇನ್ ಬೋಲ್ಟ್ ‘ ಶ್ರೀನಿವಾಸ ಗೌಡರ ನಿಂದನೆಗೆ ವ್ಯಾಪಕ ಖಂಡನೆ