Advertisement

ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಈ ಎರಡು ಸೇವೆಗಳನ್ನು ಸ್ಥಗಿತಗೊಳಿಸಿದ ಯುಐಡಿಎಐ

06:08 PM Jul 06, 2021 | Team Udayavani |

ನವ ದೆಹಲಿ :  ಯೂನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (UIDAI) ಕಾಲಕಾಲಕ್ಕೆ ಆಧಾರ್‌ಗೆ ಸಂಬಂಧಿಸಿದ ಎಲ್ಲಾ ರೀತಿಯ ನವೀಕರಣಗಳನ್ನು ನೀಡುತ್ತಲೇ ಇರುತ್ತದೆ. ಏತನ್ಮಧ್ಯೆ, ಯುಐಡಿಎಐ ಇತ್ತೀಚೆಗೆ ಆಧಾರ್ಗೆ ಸಂಬಂಧಿಸಿದ ಎರಡು ಪ್ರಮುಖ ಸೇವೆಗಳನ್ನು ಅನಿರ್ದಿಷ್ಟ ಅವಧಿಗೆ ಸ್ಥಗಿತಗೊಳಿಸಿದೆ.

Advertisement

ಮುಂದಿನ ಆದೇಶದವರೆಗೆ ವಿಳಾಸ ಮೌಲ್ಯಮಾಪನ ಪತ್ರದ ಮೂಲಕ ಆಧಾರ್ ಕಾರ್ಡ್‌ ನಲ್ಲಿ ವಿಳಾಸವನ್ನು ನವೀಕರಿಸುವ ಸೌಲಭ್ಯವನ್ನು ಯುಐಡಿಎಐ ಸ್ಥಗಿತಗೊಳಿಸಿದೆ. ಯುಐಡಿಎಐ (UIDAI) ಪ್ರಕಾರ, ‘ಮುಂದಿನ ಆದೇಶದವರೆಗೆ ವಿಳಾಸ ಮೌಲ್ಯಮಾಪನ ಪತ್ರದ ಸೌಲಭ್ಯವನ್ನು ನಿಲ್ಲಿಸಲಾಗಿದೆ.

ಇದನ್ನೂ  ಓದಿ  : ಕೇರಳ ಆರೋಗ್ಯ ವಿಜ್ಞಾನ ವಿವಿ ಮಂಡಳಿ ಸದಸ್ಯರಾಗಿ ಡಾ.ಶಹಾಪುರ ನೇಮಕ

ಯುಐಡಿಎಐ (UIDAI)ನ ಈ ನಿರ್ಧಾರದಿಂದ, ವಿಶೇಷವಾಗಿ ಬಾಡಿಗೆ ಮನೆಯಲ್ಲಿ ವಾಸಿಸುವ ಅಥವಾ ದೀರ್ಘಕಾಲದವರೆಗೆ ಉದ್ಯೋಗಗಳನ್ನು ಬದಲಾಯಿಸುತ್ತಿರುವ ಜನರಿಗೆ ಇದರಿಂದ ಆಧಾರ್‌ ನಲ್ಲಿ ವಿಳಾಸವನ್ನು ನವೀಕರಿಸಲು ಕಷ್ಟಸಾಧ್ಯವಾಗಲಿದೆ.

ಇನ್ನು, ಆಧಾರ್ ಕಾರ್ಡ್ ಹಳೆಯ ಶೈಲಿಯಲ್ಲಿ ಮುದ್ರಣದ ಸೇವೆಯನ್ನು ಯುಐಡಿಎಐ ಸ್ಥಗಿತಗೊಳಿಸಿದೆ. ಈಗ ಹಳೆಯ ಕಾರ್ಡ್‌ ಗೆ ಬದಲಾಗಿ, ಯುಐಡಿಎಐ ಪ್ಲಾಸ್ಟಿಕ್ ಪಿವಿಸಿ ಕಾರ್ಡ್‌ಗಳನ್ನು ನೀಡುತ್ತದೆ. ಇದು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ತೆರಳುವಾಗ ಆಧಾರ್ ಕಾರ್ಡ್ ನನ್ನು ಜೊತೆಗೆ ಕೊಂಡೊಯ್ಯಲು ಸುಲಭವಾಗಿದೆ.

Advertisement

ಇದನ್ನೂ  ಓದಿ  : ಖಾಲಿ ಪಾತ್ರೆಗಳು ಬಹಳ ಶಬ್ದ ಮಾಡುತ್ತವೆ : ಯೋಗೀಶ್ವರ್-ಯತ್ನಾಳ್ ಗೆ ಡಿಕೆಶಿ ಟಾಂಗ್

Advertisement

Udayavani is now on Telegram. Click here to join our channel and stay updated with the latest news.

Next