Advertisement

ಮುಖ್ಯಮಂತ್ರಿ ಸ್ಥಾನ ಸುಖದ ಸುಪ್ಪತ್ತಿಗೆಯಲ್ಲ, ಮಹತ್ವದ ಜವಾಬ್ದಾರಿ ಇದೆ : ಉಗ್ರಪ್ಪ

12:29 PM Aug 03, 2021 | Team Udayavani |

ಮೈಸೂರು : ಮುಖ್ಯಮಂತ್ರಿ ಸ್ಥಾನ ಸುಖದ ಸುಪ್ಪತ್ತಿಗೆಯಲ್ಲ. ಗುರುತರವಾದ ಮಹತ್ವದ ಜವಾಬ್ದಾರಿ. ಎಸ್.ಆರ್.ಬೊಮ್ಮಾಯಿ ರಾಯಿಸ್ಟ್ ಐಡಿಯಾಲಜಿವುಳ್ಳವರು. ಜನರ ಬದುಕಿಗೆ ಆದ್ಯತೆಯನ್ನ ಕೊಡಬೇಕು. ರಾಜ್ಯದ 11 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಜನರು ಸಂಕಷ್ಟದಲ್ಲಿದ್ದರೂ ಸರ್ಕಾರ ಜೀವಂತವಾಗಿದೆ ಅಂತ ಕಾಣಿಸ್ತಿಲ್ಲ ಎಂದು ಮೈಸೂರಿನಲ್ಲಿ ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಹೇಳಿಕೆ ನೀಡಿದ್ದಾರೆ.

Advertisement

ಉತ್ತರ ಕನ್ನಡ ನೆರೆ ಹಾವಳಿ ಜನರಿಗೆ ಸೂರು ವ್ಯವಸ್ಥೆ ಕಲ್ಪಿಸಿಲ್ಲ. ಗುಜರಾತ್‌ ರಾಜ್ಯದಲ್ಲಿ ನೆರೆ ಪೀಡಿತರಿಗೆ ಒಂದು ಸಾವಿರ ಕೋಟಿ ಪರಿಹಾರ ಘೋಷಿಸಿದ್ದಾರೆ. ರಾಜ್ಯಕ್ಕೆ ಯಾವುದೇ ಪರಿಹಾರ ಘೋಷಣೆ ಮಾಡಿಲ್ಲ‌. ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. 2019 ರಲ್ಲಿ 38 ಸಾವಿರ ಕೋಟಿಗೂ ಹೆಚ್ಚು, 2020 ರಲ್ಲಿ 15 ಸಾವಿರ ಕೋಟಿಗೂ ಹೆಚ್ಚು ನಷ್ಟವಾಗಿದೆ. ಆದರೆ ಕೇಂದ್ರದಿಂದ 1280 ಕೋಟಿ ಅಷ್ಟೇ ಬಿಡುಗಡೆ ಮಾಡಿದೆ ಎಂದು ಕೇಂದ್ರ ಸರ್ಕಾರದ ವಿರುದ್ದ ವಿ.ಎಸ್.ಉಗ್ರಪ್ಪ ವಾಗ್ದಾಳಿ ನಡೆಸಿದರು.

ಗುಜರಾತ್‌ ಗೆ ಕೊಡುವ ಆದ್ಯತೆಯನ್ನ ರಾಜ್ಯಕ್ಕೆ ಕೊಡುತ್ತಿಲ್ಲ. ಅಧಿಕಾರ ಶಾಶ್ವತವಲ್ಲ, ಜನಪರ ಆಡಳಿತ ಕೊಡುವುದು ನಾಯಕರು, ಪಕ್ಷಗಳ ಜವಾಬ್ದಾರಿ. ಸಂಸತ್ ಅಧಿವೇಶನದಲ್ಲಿ‌ ಈ ಬಗ್ಗೆ ಮಾಹಿತಿ ಪಡೆಯುವ ಅವಕಾಶ ಇತ್ತು. ಆದರೂ ಚಕಾರ ಎತ್ತಲಿಲ್ಲ,  ಕನಿಷ್ಟ ಕ್ಷೇತ್ರದಲ್ಲೂ ಇಲ್ಲದೆ ಬೆಂಗಳೂರು, ದೆಹಲಿಯಲ್ಲಿ ಕುಳಿತಿದ್ದಾರೆ. ನೆರೆ ನಿರ್ವಹಣೆ ಮಾಡದೆ‌ ಅಧಿಕಾರಕ್ಕಾಗಿ ಸರ್ಕಸ್ ಮಾಡ್ತಿದ್ದಾರೆ. ಕೋವಿಡ್ ಮೂರನೇ‌ ಅಲೆ ಪರಿಣಾಮಕಾರಿಯಾಗಿ ಎದುರಿಸಲು ಪೂರ್ವ ಸಿದ್ದತೆ ಮಾಡಿಕೊಂಡಂತೆ ಕಾಣಿಸ್ತಿಲ್ಲ ಎಂದು ಕೇಂದ್ರ, ರಾಜ್ಯ ಸರ್ಕಾರವನ್ನು ಟೀಕಿಸಿದರು.

ಬೊಮ್ಮಾಯಿ ಸರ್ಕಾರ ಬೀಳಲು ಬಿಡಲ್ಲ ಎಂಬ ಹೆಚ್.ಡಿ.ದೇವೆಗೌಡ ಹೇಳಿಕೆ ಹಿನ್ನೆಲೆ ಪ್ರತಿಕ್ರಿಯೆ ನೀಡಿದ ಉಗ್ರಪ್ಪ, ಎಸ್.ಆರ್.ಬೊಮ್ಮಾಯಿ ಸರ್ಕಾರ ಬೀಳೋಕೆ ಕಾರಣ ಯಾರು ಅನ್ನೋದನ್ನ ಮೊದಲು ಹೇಳಲಿ‌. ಜೆಡಿಎಸ್‌ ಗೆ ಅಸ್ಥಿರತೆಯಿಂದ ಬಿಜೆಪಿ ಪರ ಹೇಳಿಕೆ ಕೊಡುತ್ತಿದೆಯೋ. ಇಲ್ಲವೇ ಅನಿವಾರ್ಯವಾಗಿ ಬಿಜೆಪಿ ಪರ‌ ಹೇಳಿಕೆ ಕೊಡುತ್ತಿದೆಯೋ ಗೊತ್ತಿಲ್ಲ ಎಂದು ಹೇಳುವ ಮೂಲಕ ಜೆಡಿಎಸ್‌ ವಿರುದ್ದ ವಿ.ಎಸ್.ಉಗ್ರಪ್ಪ ಲೇವಡಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next