Advertisement

ಬಿಎಸ್ ವೈ ಆಸ್ತಿ ಈಗ ಎಷ್ಟಿದೆ ಅಂತ ತನಿಖೆಯಾಗ್ಲಿ; ಉಗ್ರಪ್ಪ ಕಿಡಿ

06:58 PM Feb 21, 2017 | Team Udayavani |

ಬೆಂಗಳೂರು: ಚುನಾವಣೆ ಆಗುವವರೆಗೂ ಯಾಕೆ ಕಾಯ್ತೀರಿ? ಚುನಾವಣೆ ನಡೆಯಲು ಇನ್ನೂ ಒಂದು ವರ್ಷಕ್ಕೂ ಹೆಚ್ಚು ಕಾಲಾವಕಾಶ ಇದೆ. ಕೇಂದ್ರದಲ್ಲಿ ನಿಮ್ಮದೇ(ಬಿಜೆಪಿ) ಸರ್ಕಾರವಿದೆ. ಹಾಗಾಗಿ ನಿಮಗೆ ಧಮ್ ಇದ್ದರೆ ನಮ್ಮ ಸರ್ಕಾರದ ಎಫ್ಐಆರ್ ಹಾಕಿಸಿ, ಸಿದ್ದರಾಮಯ್ಯ ಅವರನ್ನು ಜೈಲಿಗೆ ಕಳುಹಿಸಿ, ಜೊತೆಗೆ ನಮ್ಮನ್ನೂ ಜೈಲಿಗೆ ಹಾಕಿ ಎಂದು ಕಾಂಗ್ರೆಸ್ ಮುಖಂಡ ವಿಎಸ್ ಉಗ್ರಪ್ಪ ಬಿಎಸ್ ಯಡಿಯೂರಪ್ಪಗೆ ನೇರ ಸವಾಲು ಹಾಕಿದ್ದಾರೆ.

Advertisement

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ, ಸಿಎಂ ಸಿದ್ದರಾಮಯ್ಯ ಅವರ ವಿರುದ್ಧದ ಬಿಎಸ್ ಯಡಿಯೂರಪ್ಪನವರ ಆರೋಪಕ್ಕೆ ತಿರುಗೇಟು ನೀಡಿದರು.

ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ ಸಿಎಂ ಸಿದ್ದರಾಮಯ್ಯ ವಿರುದ್ಧ 24ಗಂಟೆಯಲ್ಲಿ ತನಿಖೆಗೆ ಆದೇಶ ನೀಡಿ, ಜೈಲಿಗೆ ಕಳುಹಿಸುವುದಾಗಿ ಬಿಎಸ್ ಯಡಿಯೂರಪ್ಪ ಹೇಳಿದ್ದರು.

ಯಡಿಯೂರಪ್ಪನವರ ಮಾತು ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿದಂತಿದೆ. ಬಿಜೆಪಿ ಆಡಳಿತದ ಅವಧಿಯಲ್ಲಿ ಮೂರು ಮಂದಿ ಸಿಎಂಗಳಾಗಿದ್ದರು. ಹಾಗಾಗಿ ಸಿಎಂ ಆಗುವ ಮುನ್ನ ನಿಮ್ಮ ಆಸ್ತಿ ಎಷ್ಟಿತ್ತು, ಈಗ ಎಷ್ಟಿದೆ ಎಂಬ ಬಗ್ಗೆ ತನಿಖೆಯಾಗಲಿ, ಜೊತೆಗೆ ನನ್ನ ಆಸ್ತಿಯ ಬಗ್ಗೆಯೂ ತನಿಖೆಯಾಗಲಿ ಎಂದು ಬಿಎಸ್ ವೈಗೆ ಸವಾಲು ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next