Advertisement

UGNEET/PGET 2023: ಮೂಲ ದಾಖಲೆ ಸಲ್ಲಿಸಲು ಸೆ.27ರವರೆಗೆ ಅವಕಾಶ

08:41 PM Sep 25, 2023 | Team Udayavani |

ಬೆಂಗಳೂರು: ಮಾಪ್  ಅಪ್ ಸುತ್ತಿನ ಸೀಟು ಹಂಚಿಕೆಯಲ್ಲಿ ವೈದ್ಯಕೀಯ ಸೀಟು ಪಡೆದಿರುವ ಯುಜಿನೀಟ್/ಪಿಜಿಇಟಿ 2023 ಅಭ್ಯರ್ಥಿಗಳಿಗೆ ಮೂಲ ದಾಖಲೆಗಳನ್ನು ಸಲ್ಲಿಸಲು ಸೆ. 27ರ ಮಧ್ಯಾಹ್ನ 1.30ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತಿಳಿಸಿದೆ.

Advertisement

ಸುರಕ್ಷಿತವಾಗಿ ಸ್ಥಳಕ್ಕೆ ತೆರಳಲು ಅನುಕೂಲವಾದರೆ ಅಭ್ಯರ್ಥಿಗಳು ಸೆ. 26ರಂದು ಹಾಜರಾಗಿ ಮೂಲ ದಾಖಲೆಗಳನ್ನು ಸಲ್ಲಿಸಬಹುದು. ಒಂದು ವೇಳೆ, ಸೆ. 26ರಂದು ಸ್ಥಳಕ್ಕೆ ತೆರಳಲು ಅನಾನುಕೂಲವಾದರೆ ಅಂತವರು ಸೆ. 27ರ ಮಧ್ಯಾಹ್ನ 1.30ರವರೆಗೆ ದಾಖಲೆಗಳನ್ನು ಸಲ್ಲಿಸಬಹುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ಸೋಮವಾರ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಅಭ್ಯರ್ಥಿಗಳು ದಾಖಲೆಗಳನ್ನು ಸಲ್ಲಿಸುವ ಬಗ್ಗೆ ಈ ಮೊದಲು ಪ್ರಕಟಿಸಿರುವ ಸೂಚನೆಗಳನ್ನು
ಓದಿಕೊಳ್ಳಬೇಕೆಂದು ಪ್ರಕಟಣೆಯಲ್ಲಿ ಸೂಚಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next