Advertisement
ಈ ಸುತ್ತಿನಲ್ಲಿ ವೈದ್ಯಕೀಯ ಸೀಟು ಹಂಚಿಕೆಯಾಗಿರುವ 703 ಮಂದಿ ಪೈಕಿ, ಇನ್ನೂ ಸುಮಾರು 223 ಮಂದಿಯ ಮೂಲ ದಾಖಲೆಗಳನ್ನು ಕೆಇಎಗೆ ಸಲ್ಲಿಸಲು ಸೋಮವಾರ (ಅ. 21) ಬೆಳಗ್ಗೆ 11.30ರಿಂದ 1.30ರ ವರೆಗೆ ಅವಕಾಶ ನೀಡಲಾಗಿದೆ. ಇನ್ನೂ ಕೆಲವರು ಸ್ವಲ್ಪ ಭಾಗ ಶುಲ್ಕ ಪಾವತಿಸಬೇಕಾಗಿದೆ. ಅಂಥವರು ಕೂಡ ಅ. 21ರೊಳಗೆ ಕಟ್ಟಬೇಕು. ಅ. 22ರೊಳಗೆ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಂಡು ಕಾಲೇಜಿಗೆ ವರದಿ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಯುಜಿಸಿಇಟಿ-24 2ನೇ ಮುಂದುವರಿದ ಸುತ್ತಿನಲ್ಲಿ ಎಂಜಿನಿಯರಿಂಗ್ ಸೇರಿ ವಿವಿಧ ಕೋರ್ಸ್ಗಳಿಗೆ ಸೀಟು ಹಂಚಿಕೆಯಾಗಿರುವವರು ಅ. 21ರ ಮಧ್ಯಾಹ್ನ 2 ಗಂಟೆ ಒಳಗೆ ಶುಲ್ಕ ಪಾವತಿಸಿ, ಅದೇ ದಿನ ಸಂಜೆ 5.30ರೊಳಗೆ ಸಂಬಂಧಿತ ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳಬೇಕು ಎಂದು ಅವರು ವಿವರಿಸಿದ್ದಾರೆ.
Related Articles
ಅಲೈಡ್ ಹೆಲ್ತ್ ಸೈನ್ಸ್ ಕೋರ್ಸ್ಗಳಿಗೆ ಪ್ರವೇಶ ಬಯಸಿರುವ ಹಲವರು ಅರ್ಜಿ ಸಲ್ಲಿಸಲು ಅವಕಾಶ ಕೋರುತ್ತಿದ್ದು ಅಂಥವರಿಗೆ ಅನುಕೂಲ ಮಾಡುವ ಉದ್ದೇಶದಿಂದ ಅರ್ಜಿ ಸಲ್ಲಿಸಲು ಅ.25ರ ವರೆಗೆ ಅವಕಾಶ ನೀಡಲಾಗಿದೆ.
Advertisement
ಈ ಕೋರ್ಸ್ಗಳಿಗೆ ಕೆಲವರು ಈಗಾಗಲೇ ಅರ್ಜಿ ಸಲ್ಲಿಸಿದ್ದು ಅಂಥವರಿಗೆ ಆಪ್ಷನ್ ದಾಖಲಿಸಲು ಅವಕಾಶ ನೀಡಲಾಗಿದೆ. ಒಟ್ಟಾರೆ ಅ. 27ರ ವರೆಗೆ ಆಪ್ಷನ್ ದಾಖಲಿಸಲು ಅವಕಾಶ ನೀಡಲಾಗಿದೆ ಎಂದು ಪ್ರಸನ್ನ ತಿಳಿಸಿದ್ದಾರೆ.
ಅರ್ಜಿಗೆ ಅ.23ರ ವರೆಗೆ ಅವಕಾಶಬೆಂಗಳೂರು: 2024-25ರ ಯುಜಿ ವೈದ್ಯಕೀಯ ಸ್ಟ್ರೇ ವೇಕೆನ್ಸಿ ಸುತ್ತಿಗೆ ಲಭ್ಯವಾಗುವ ಸೀಟುಗಳಿಗೆ ಹಾಗೂ ಯುಜಿ ದಂತವೈದ್ಯಕೀಯ-ಆಯುಷ್ ಕೋರ್ಸ್ಗಳ ಪ್ರವೇಶಾತಿಗಾಗಿ ಮಾಪ್ ಅಪ್ ಸುತ್ತಿಗೆ ಅರ್ಹತೆ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅ. 21ರಿಂದ 23ರವರೆಗೆ ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಭಾನುವಾರ ತಿಳಿಸಿದ್ದಾರೆ. ಈವರೆಗೆ ಯುಜಿನೀಟ್-2024ಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸದೇ ಇರುವ ಅಭ್ಯರ್ಥಿಗಳು ಯುಜಿ ವೈದ್ಯಕೀಯ ಸ್ಟ್ರೇ ವೇಕೆನ್ಸಿ ಸುತ್ತಿಗೆ ಲಭ್ಯವಾಗುವ ಸೀಟುಗಳಿಗೆ ಮತ್ತು ದಂತವೈದ್ಯಕೀಯ-ಆಯುಷ್ ಕೋರ್ಸುಗಳ ಪ್ರವೇಶಾತಿಗಾಗಿ ಮಾಪ್ಅಪ್ ಸುತ್ತಿನಲ್ಲಿ ಲಭ್ಯವಾಗುವ ಸೀಟುಗಳಿಗೆ ಮಾತ್ರ ಇತರ ಅರ್ಹ ಅಭ್ಯರ್ಥಿಗಳೊಂದಿಗೆ ಭಾಗವಹಿಸಲು ಅರ್ಜಿ ಸಲ್ಲಿಸಲು ಅವಕಾಶ ನೀಡಿ ಆನ್ಲೈನ್ ಲಿಂಕ್ ತೆರೆಯಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್ಸೈಟ್ //kea.kar.nic.in ನಲ್ಲಿ ನಿಗದಿತ ಲಿಂಕ್ ಆಯ್ಕೆ ಮಾಡಿಕೊಂಡು ಅ.21ರಿಂದ ಅ.23ರ ರಾತ್ರಿ 11.59 ರ ವರೆಗೆ ಅರ್ಜಿ ಸಲ್ಲಿಸಲು ಹಾಗೂ ಶುಲ್ಕ ಪಾವತಿಸಬಹುದು.