Advertisement

ಉಗ್ಗೆಲ್‌ಬೆಟ್ಟು ಕಿಂಡಿ ಅಣೆಕಟ್ಟು ದುರಸ್ತಿ: ಜಿ.ಪಂ. ಉಪಾಧ್ಯಕ್ಷರ ಭೇಟಿ

12:48 AM Apr 26, 2019 | Team Udayavani |

ಬ್ರಹ್ಮಾವರ: ಅಸಮರ್ಪಕ ನಿರ್ವಹಣೆಯಿಂದ ಸಮಸ್ಯೆಗೆ ಕಾರಣವಾದ ಉಗ್ಗೆಲ್‌ಬೆಟ್ಟು ಕಿಂಡಿ ಅಣೆಕಟ್ಟು ಪ್ರದೇಶಕ್ಕೆ ಗುರುವಾರ ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಭೇಟಿ ನೀಡಿದರು.

Advertisement

ಸದ್ಯ ಇರುವ ನೀರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸೋರಿಕೆಯಾಗುತ್ತಿರುವ ನೀರನ್ನು ತಡೆಹಿಡಿಯಲು ಕೂಡಲೇ ಕ್ರಮ ಕೈಗೊಳ್ಳು ವಂತೆ ಅಧಿಕಾರಿಗಳಿಗೆ ಆದೇಶಿಸಿದರು. ಬ್ರಹ್ಮಾವರ ಆಸುಪಾಸಿನಲ್ಲಿರುವ ಕಿಂಡಿ ಅಣೆಕಟ್ಟುಗಳ ನಿರ್ಲಕ್ಷದ ಬಗ್ಗೆ ಜಿಲ್ಲಾ ಧಿಕಾರಿಗಳೊಂದಿಗೆ ಮತ್ತು ಜಿ.ಪಂ. ಸಭೆಯಲ್ಲಿ ಚರ್ಚಿಸಿ ಮುಂದಿನ ವರ್ಷಗಳಲ್ಲಿ ಶಾಶ್ವತ ಹಾಗೂ ಉತ್ತಮ ಗುಣಮಟ್ಟದ ಕಾಮಗಾರಿ ನಡೆಸುವಂತೆ ತಿಳಿಸಿದರಲ್ಲದೆ ಕಾಮಗಾರಿ ನಡೆಸುವಾಗ ಸ್ಥಳೀಯ ಗಾ.ಪಂ.ನ ಗಮನಕ್ಕೂ ತರಬೇಕು ಎಂದು ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್‌ ದೇವಾನಂದ್‌ ಅವರಿಗೆ ಸೂಚಿಸಿದರು.

ಕೆಲವೇ ದಿನಗಳಲ್ಲಿ ಇಲ್ಲಿಯ ಸಮಸ್ಯೆಗೆ ಪರಿಹಾರ ನೀಡಲಾಗುವುದು. ಮುಂದಿನ ವರ್ಷ ಮರದ ಹಲಗೆಯ ಬದಲು ಫೈಬರ್‌ ಹಲಗೆಗಳನ್ನು ಇಲ್ಲಿ ಅಳವಡಿಸಲು ಪ್ರಸ್ತಾವನೆ ಕಳುಹಿಸಲಾಗುವುದು ಎಂದು ದೇವಾನಂದ್‌ ತಿಳಿಸಿದರು.

ರೈತರ ಅಳಲು
ಗುತ್ತಿಗೆದಾರರ ನಿರ್ಲಕ್ಷದಿಂದಾಗಿ ಎಪ್ರಿಲ್‌ ತಿಂಗಳಿನಲ್ಲೇ ಹೊಳೆಯಲ್ಲಿ ಉಪ್ಪು ನೀರು ನುಗ್ಗಿ ನದೀ ತೀರದಲ್ಲಿ ಬೆಳೆಸಿದ ಮೆಣಸು, ಅಲಸಂಡೆ, ತೊಂಡೆ, ಸೌತೆ ಮತ್ತಿತರರ ತರಕಾರಿ ಗಿಡಗಳು ಒಣಗಿ ಹೋಗುವ ಸ್ಥಿತಿ ತಲೆದೋರಿದೆ. ನದಿ ತೀರದ ಬಾವಿಗಳಲ್ಲಿಯೂ ಸಿಹಿ ನೀರಿನ ಬದಲಿಗೆ ಉಪ್ಪು ನೀರಿನಿಂದ ಹಾನಿಯಾಗಿದೆ. ರೈತ ಬೆಳೆದ ಬೆಳೆಗೆ ಮೊದಲೇ ಬೆಲೆ ಇಲ್ಲ. ಅ ಧಿಕಾರಿಗಳು, ಗುತ್ತಿಗೆದಾರರು ಮಾಡುವ ತಪ್ಪಿಗೆ ರೈತ ನಷ್ಟ ಅನುಭವಿಸುವಂತಾಗಿದೆ ಎಂದು ರೈತರು ಅಳಲು ತೋಡಿಕೊಂಡರು.

ಪ್ರತಿವರ್ಷ ಸಮಸ್ಯೆ
ಪ್ರತಿ ಬಾರಿ ಸಣ್ಣ ನೀರಾವರಿ ಇಲಾಖೆಯಿಂದ ಸುಮಾರು 1.5 ಲ.ರೂ. ವೆಚ್ಚದಲ್ಲಿ ನಿರ್ವಹಣೆ ಕಾಮಗಾರಿಯನ್ನು ಗುತ್ತಿಗೆದಾರರಿಗೆ ವಹಿಸಿಕೊಡಲಾಗುತ್ತಿದೆ. ಆದರೆ ಕಾಮಗಾರಿ ವಹಿಸಿಕೊಂಡ ಮೇಲೆ ಇಲಾಖೆಯ ಅಧಿ ಕಾರಿಗಳು ಪರಿಶೀಲನೆ ನಡೆಸದೇ ಇರುವುದು ಮತ್ತು ಬೇಜವಾಬ್ದಾರಿತನದಿಂದ ಕಾಮಗಾರಿ ನಡೆಸುವ ಗುತ್ತಿಗೆದಾರರ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳದೆ ಇರುವ ಬಗ್ಗೆ ಆಕ್ರೋಶ
ವ್ಯಕ್ತವಾಯಿತು.

Advertisement

ಎಲ್ಲೆಲ್ಲಿ ಸಮಸ್ಯೆ ?
ಉಗ್ಗೆಲ್‌ನೆಟ್ಟಿನಲ್ಲಿ ಕಿಂಡಿ ಅಣೆಕಟ್ಟಿನ ಅಸಮರ್ಪಕ ನಿರ್ವಹಣೆಯಿಂದ ಸಿಹಿ ನೀರು ಪ್ರದೇಶಕ್ಕೆ ಉಪ್ಪು ನೀರು ಬಂದು ಆರೂರು, ಬೆಳಾ¾ರು, ಚಾಂತಾರು, ಉಗ್ಗೆಲ್‌ಬೆಟ್ಟು, ದಾಸಬೆಟ್ಟು ಪ್ರದೇಶದ ಜನರಿಗೆ ತೀವ್ರ ತೊಂದರೆಯಾಗಿದೆ.
ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌, ಆರೂರು ಗ್ರಾ.ಪಂ. ಅಧ್ಯಕ್ಷ ರಾಜೀವ ಕುಲಾಲ್‌, ಉಪಾಧ್ಯಕ್ಷ ಗಣೇಶ್‌ ಕುಲಾಲ್‌, ಸದಸ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next