Advertisement
ಅಂದ ಹಾಗೆ ಸಾರ್ವಜನಿಕರ ಅಹವಾಲು ಸಭೆ ಕರೆಯದೆ ಕಳೆದ ಮೂರ್ನಾಲ್ಕು ವರ್ಷಗಳಿಂದ ನಗರದಲ್ಲಿ ಯುಜಿಡಿ ಕಾಮಗಾರಿ ಆರಂಭವಾಗಿದ್ದು, ನಗರದೆಲ್ಲೆಡೆ ಕಾಮಗಾರಿ ಬಹುತೇಕ ಮುಗಿಯುವ ಹಂತದಲ್ಲಿದೆ. ಯುಜಿಡಿ ಕಾಮಗಾರಿಯಿಂದಾಗಿ ನಗರದ ಅನೇಕ ರಸ್ತೆಗಳು ಅಸ್ತವ್ಯಸ್ತಗೊಂಡು ಸಂಚಾರಕ್ಕೆ ಸಂಕಷ್ಟವಾಗಿರುವುದಲ್ಲದೆ, ಇತ್ತ ಯುಜಿಡಿ ಪೈಪ್ಲೈನ್ ಕಾಮಗಾರಿಗಾಗಿ ರಸ್ತೆಯನ್ನು ಅಗೆಯುವ ಸಂದರ್ಭದಲ್ಲಿ ಕುಡಿಯುವ ನೀರಿನ ಪೈಪ್ ಗಳು ಒಡೆದು ಹೋಗುವುದು ಸಾಮಾನ್ಯ ಎಂಬಂತಾಗಿದೆ.
Related Articles
Advertisement
ವನಶ್ರೀನಗರದಲ್ಲಿ ಕುಡಿಯುವ ನೀರಿನ ಪೈಪ್ ಒಡೆದ ಸಂದರ್ಭದಲ್ಲೆ ಯುಜಿಡಿ ಕಾಮಗಾರಿ ಸಂಸ್ಥೆಯವರು ಒಡೆದ ಪೈಪನ್ನು ದುರಸ್ತಿ ಮಾಡುತ್ತಿದ್ದಲ್ಲಿ ಸಮಸ್ಯೆ ಸೃಷ್ಟಿಯಾಗುತ್ತಿರಲಿಲ್ಲ. ಆದರೆ ತ್ಯಾಜ್ಯವೆಲ್ಲ ಒಡೆದ ಪೈಪಿನೊಳಗಡೆ ಸೇರಿದ ಮೇಲೆ ದುರಸ್ತಿ ಮಾಡಿದಂತಾಗಿದೆ ಇಲ್ಲಿಯ ವಾಸ್ತವಿಕ ಸ್ಥಿತಿ.
ಇನ್ನೂ ಯುಜಿಡಿ ಕಾಮಗಾರಿಯನ್ನು ಕಾಲಕಾಲಕ್ಕೆ ಪರಿಶೀಲನೆ ಮಾಡಬೇಕಾದ ಒಳಚರಂಡಿ ಮಂಡಳಿಯ ಅಧಿಕಾರಿಗಳು ನಗರಕ್ಕೆ ಭೇಟಿ ಕೊಡುತ್ತಿದ್ದಾರೆಯೆ? ಭೇಟಿ ಕೊಡುತ್ತಿದ್ದಲ್ಲಿ ಇಂಥಹ ಸಮಸ್ಯೆಗಳು ಸೃಷ್ಟಿಯಾಗಲು ಸಾಧ್ಯವೆ? ಎಂಬಿತ್ಯಾದಿ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಯಲ್ಲಿದೆ. ಒಟ್ಟಿನಲ್ಲಿ ಕಾಮಗಾರಿ ಆರಂಭವಾದಾಗಿನಿಂದ ಸದಾ ಸಮಸ್ಯೆಗಳನ್ನು ನೀಡುತ್ತಾ ಬಂದಿರುವ ಯುಜಿಡಿ ಕಾಮಗಾರಿ ಮುಗಿದ ಬಳಿಕವೂ ನಗರದ ನಾಗರೀಕರಿಗೆ ಸಮಸ್ಯೆಯನ್ನು ಉಂಟಾದರೆ ಅದಕ್ಕೆ ಯಾರು ಹೊಣೆ? ಎಂಬ ಪ್ರಶ್ನೆ ನಗರದ ಜನತೆಯನ್ನು ಸದಾ ಕಾಡತೊಡಗಿದೆ.