Advertisement

ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರದಿಂದ ಯುಜಿಸಿ –ನೆಟ್‌ ಪ್ರವೇಶಪತ್ರ ಬಿಡುಗಡೆ

01:00 AM Nov 15, 2021 | Team Udayavani |

ಹೊಸದಿಲ್ಲಿ: ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ (ಎನ್‌ಟಿಎ)ವು ಜೂನ್‌ 2020ರ ಯುಜಿಸಿ-ನೆಟ್‌ ಪರೀಕ್ಷೆಯ ಪ್ರವೇಶಪತ್ರಗಳನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಪ್ರವೇಶಪತ್ರವನ್ನು ಎನ್‌ಟಿಎಯ ವೆಬ್‌ ಸೈಟ್‌ ನಿಂದ ಡೌನ್‌ಲೋಡ್‌ ಮಾಡಿಕೊಂಡು ಅದರಲ್ಲಿ ಸೂಚಿಸಿರುವ ದಿನಾಂಕ, ಪಾಳಿ, ಸಮಯ ಮತ್ತು ವಿಷಯಗಳಂತೆ ಪರೀಕ್ಷೆಗೆ ಹಾಜರಾಗಬಹುದು.

Advertisement

ಪ್ರವೇಶಪತ್ರದಲ್ಲಿ ಸೂಚಿಸಲಾದ ದಿನಾಂಕ ಮತ್ತು ಸಮಯ ಬಿಟ್ಟು ಬೇರೆ ದಿನಾಂಕ, ಸಮಯಗಳಲ್ಲಿ ಪರೀಕ್ಷೆಗೆ ಹಾಜರಾಗಲು ಅವಕಾಶ ಇಲ್ಲ. ಯುಜಿಸಿ-ನೆಟ್‌ ಡಿಸೆಂಬರ್‌ 2020 ಮತ್ತು ಜೂನ್‌ 2021 ಪರೀಕ್ಷೆಗಳು ನ. 20, 21, 22, 24, 25, 26, 29, 30 ಮತ್ತು ಡಿಸೆಂಬರ್‌ 1, 3, 4, 5 ರಂದು ನಡೆಯಲಿವೆ.

ಅಭ್ಯರ್ಥಿಗಳು ಪರೀಕ್ಷೆ ಆರಂಭ ವಾಗುವುದಕ್ಕೆ 2 ತಾಸು ಮುನ್ನ ಪರೀಕ್ಷಾ ಕೇಂದ್ರದಲ್ಲಿರಬೇಕು. ಎರಡೂ ಆವೃತ್ತಿಯ ಪರೀಕ್ಷೆಗಳ ವಿವರವಾದ ವೇಳಾ ಪಟ್ಟಿಯನ್ನೂ ಎನ್‌ಟಿಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next