Advertisement
ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಹಲವು ಬದಲಾ ವಣೆ ಗಳಿಗೆ ನಾಂದಿ ಹಾಡುತ್ತಿರುವ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ಇಂಥದ್ದೊಂದು ಹೊಸ ಆದೇಶ ಹೊರಡಿಸಿದೆ. ಎಲ್ಲ ಕೇಂದ್ರೀಯ ವಿ.ವಿ. ಗಳೂ ಕಡ್ಡಾಯ ವಾಗಿ ಸಾಮಾನ್ಯ ವಿಶ್ವ ವಿದ್ಯಾನಿಲಯ ಪ್ರವೇಶ ಪರೀಕ್ಷೆ(ಸಿಯುಇಟಿ)ಯನ್ನು ನಡೆಸಿ, ಅದರ ಅಂಕಗಳ ಆಧಾರದಲ್ಲೇ ಪ್ರವೇಶ ನೀಡಬೇಕು ಎಂದು ಹೇಳಿದೆ. ಮುಂದಿನ ಶೈಕ್ಷಣಿಕ ವರ್ಷದಿಂದಲೇ(2022-23) ಇದು ಜಾರಿಯಾಗಲಿದೆ.ಕಡ್ಡಾಯವಾಗಿ ಎಲ್ಲ 45 ಕೇಂದ್ರೀಯ ವಿ.ವಿ.ಗಳು ಇನ್ನು ಯುಜಿ ಕೋರ್ಸ್‌ಗಳಿಗೆ ಸಿಯುಇಟಿ ಪರೀಕ್ಷೆ ನಡೆಸಬೇಕು. ಆದರೆ ಸದ್ಯದ ಮಟ್ಟಿಗೆ ಸ್ನಾತಕೋತ್ತರ ಪ್ರವೇಶದ ವೇಳೆ ಸಿಯುಇಟಿ ಅಂಕಗಳ ಪರಿಗಣನೆಯನ್ನು ಆಯಾ ವಿ.ವಿ.ಗಳ ವಿವೇಚನೆಗೆ ಬಿಡಲಾಗಿದೆ ಎಂದು ಯುಜಿಸಿ ಅಧ್ಯಕ್ಷ ಎಂ. ಜಗದೀಶ್ ಕುಮಾರ್ ಹೇಳಿದ್ದಾರೆ.
ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ (ಎನ್‌ಟಿಎ) ಜುಲೈ ಮೊದಲ ವಾರದಲ್ಲಿ ಈ ಪ್ರವೇಶ ಪರೀಕ್ಷೆ(ಸಿಯುಇಟಿ) ಯನ್ನು ನಡೆಸಲಿದೆ. ಎಲ್ಲ ಪ್ರಶ್ನೆಗಳು 12ನೇ ತರಗತಿ ಸಿಬಿಎಸ್‌ಇ ಪಠ್ಯಕ್ರಮದ ಅಂಶಗಳನ್ನೇ ಒಳಗೊಂಡಿರಲಿದೆ. ಪರೀಕ್ಷೆ 2 ಹಂತಗಳಲ್ಲಿ ಮೂರೂವರೆ ಗಂಟೆ ಕಾಲ ನಡೆಯಲಿದೆ. ಬಹು ಆಯ್ಕೆ ಪ್ರಶ್ನೆಗಳನ್ನು ನೀಡಲಾಗುತ್ತದೆ.
ರಂಗಭೂಮಿ, ಸಂಗೀತ ಮತ್ತಿತರ ಕೌಶಲ ಆಧರಿತ, ವೃತ್ತಿಪರ ಯುಜಿ ಕೋರ್ಸ್‌ಗಳಿಗೆ ವಿ.ವಿ.ಗಳು ಪ್ರಾಕ್ಟಿಕಲ್ ಪರೀಕ್ಷೆಗಳನ್ನು ಆಯೋಜಿಸಿ, ಅದರ ಅಂಕಗಳನ್ನು ವಿದ್ಯಾರ್ಥಿಯ ಅಂತಿಮ ಸಿಯುಇಟಿ ಸ್ಕೋರ್‌ಗೆ ಸೇರ್ಪಡೆ ಮಾಡಬೇಕು. ಇದನ್ನೂ ಓದಿ:ವಿಶ್ವ ಜಲ ದಿನ: ಪ್ರತಿ ಹನಿ ನೀರನ್ನು ಉಳಿಸುವ ನಮ್ಮ ಪ್ರತಿಜ್ಞೆಯನ್ನು ಪುನರುಚ್ಚರಿಸೋಣ: ಮೋದಿ
Related Articles
ಸಿಯುಇಟಿ ಎನ್ನುವುದು ಕಂಪ್ಯೂಟರೀಕೃತ ಪರೀಕ್ಷೆಯಾಗಿದ್ದು, ಕನ್ನಡ, ಇಂಗ್ಲಿಷ್, ಹಿಂದಿ, ಗುಜರಾತಿ, ಅಸ್ಸಾಮಿ, ಬಂಗಾಲಿ, ಮಲಯಾಳ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಭಾಷೆಗಳಲ್ಲಿ ನಡೆಯಲಿದೆ. ವಿಶೇಷವೆಂದರೆ ವಿದೇಶಿ ವಿದ್ಯಾರ್ಥಿಗಳಿಗೆ ಈ ಪ್ರವೇಶ ಪರೀಕ್ಷೆಯಿಂದ ಯುಜಿಸಿ ವಿನಾಯಿತಿ ನೀಡಿದೆ.
Advertisement
ಮೀಸಲಾತಿ ಮೇಲೆ ಪರಿಣಾಮವಿಲ್ಲಯಾವುದಾದರೂ ವಿ.ವಿ.ಯು ಸ್ಥಳೀಯ ವಿದ್ಯಾರ್ಥಿಗಳಿಗೆ ನಿರ್ದಿಷ್ಟ ಪ್ರಮಾಣದಲ್ಲಿ ಮೀಸಲಾತಿ ನೀಡುತ್ತಾ ಬಂದಿದ್ದರೆ ಆ ಮೀಸಲಾತಿಯು ಮುಂದುವರಿಯುತ್ತದೆ. ಆದರೆ ಈ ವಿದ್ಯಾರ್ಥಿಗಳು ಕೂಡ ಸಿಯುಇಟಿ ಬರೆದೇ ಪ್ರವೇಶ ಪಡೆಯಬೇಕು.