Advertisement

ಉಗರಗೋಳ: ಸಂಪ್ರದಾಯ-ಸಂಸ್ಕೃತಿ ಉಳಿಸುವ ಜಾತ್ರೆಗಳು

05:45 PM Jun 03, 2023 | Team Udayavani |

ಉಗರಗೋಳ: ಗ್ರಾಮ ದೇವಿಯರ ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮದೇವಿ ದೇವಸ್ಥಾನದಲ್ಲಿ ಧರ್ಮಸಭೆ ಜರುಗಿತು.
ಅಧ್ಯಕ್ಷತೆ ವಹಿಸಿದ್ದ ಉಗರಗೋಳ ಪಿಕೆಪಿಎಸ್‌ ಅಧ್ಯಕ್ಷ ರಾಮನಗೌಡ ತಿಪರಾಶಿ ಮಾತನಾಡಿ, ವೈವಿಧ್ಯಮಯ ಸಂಸ್ಕೃತಿ ಜೊತೆಗೆ ಸಾಂಸ್ಕೃತಿಕ ಸಂಪದ್ಭರಿತ ದೇಶ ಭಾರತ. ಇಲ್ಲಿ ನಡೆಯುವ ಹಬ್ಬ-ಜಾತ್ರೆಗಳು ನಮ್ಮೆಲ್ಲರ ಸಂಪ್ರದಾಯ, ಸಂಸ್ಕೃತಿಯ ಉಳಿವಿನಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತವೆ. ಜೀವನದ ಮೌಲ್ಯ ಮತ್ತು ಬದುಕು ಸಾಗಿಸುವ ಮಾರ್ಗ ತಿಳಿಸುವ ಜಾತ್ರೆಗಳಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗಬೇಕಿದೆ.

Advertisement

ದೈನಂದಿನ ಏಕತಾನತೆಯಿಂದ ದೂರವಾಗಲು, ಪ್ರಕೃತಿಗೆ ಕೃತಜ್ಞತೆ ಅರ್ಪಿಸಲು, ಪೌರಾಣಿಕ ಘಟನೆಗಳಿಂದ ಸ್ಫೂರ್ತಿ ಪಡೆಯಲು, ದುಷ್ಟ ಶಕ್ತಿಯ ದಮನಕ್ಕಾಗಿ ಹಬ್ಬಗಳ ಆಚರಣೆ ರೂಢಿಗೆ ಬಂದಿವೆ. ಪ್ರಕೃತಿಯಲ್ಲಿ ದೆ„ವತ್ವ ಕಾಣುವುದು ಒಂದು ವಿಶಿಷ್ಟ ಸಂಸ್ಕೃತಿಯಾಗಿದೆ. ಪ್ರತಿ ಹಬ್ಬ- ಜಾತ್ರೆಗಳೂ ಸಹ ನಿಸರ್ಗದ ಆಗುಹೋಗುಗಳೊಂದಿಗೆ ಬೆಸೆದುಕೊಂಡಿವೆ.

ಧಾರ್ಮಿಕತೆಗೆ ಪ್ರಾಮುಖ್ಯತೆ ನೀಡಿದ ಸಂಭ್ರಮದಿಂದ ಹಬ್ಬ ಆಚರಿಸುವಂತಾಗಬೇಕು ಎಂದರು. ಅಥಣಿ ಮೋಟಗಿ ಮಠದ ಚನ್ನಬಸವ ಶ್ರೀಗಳು ಪ್ರವಚನ ನೀಡಿದರು. ಗೋಕರ್ಣೇಶ್ವರಿ ಚೌಡಕಿ ಮೇಳದ ಹಿರೇಕೊಪ್ಪ ಗ್ರಾಮದ ಬಸವರಾಜ ಬೀರನೂರ, ಬಂಡಾರಹಳ್ಳಿಯ ನಾಗರಾಜ ಕಮ್ಮಾರ ಅವರಿಂದ ಸಂಗೀತ ಸೇವೆ ಜರುಗಿತು. ನಿರ್ವಾಣೇಶ್ವರ ಮಠದ ಮಹಾಂತ ಶ್ರೀಗಳು, ಚಿಕ್ಕುಂಬಿ ನಾಗಲಿಂಗೇಶ್ವರ ಮಠದ ಅಭಿನವ ನಾಗಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.

ಜಾತ್ರೆ ನಿಮಿತ್ತವಾಗಿ ಚಕ್ಕಡಿಯಲ್ಲಿ 80 ಕೆಜಿ ಹೇರಿ ವಿಜಯಕುಮಾರ ಪಡಸುಣಗಿ ಹೆಗಲ ಮೇಲೆ 80 ಕೆಜಿ ಗೋಧಿ ಚೀಲ ಹೊತ್ತು ಇಲ್ಲಿನ ಬಸವೇಶ್ವರ ವೃತ್ತದಿಂದ ಗ್ರಾಮದೇವಿ ದೇವಸ್ಥಾನದವರೆಗೂ ಎತ್ತಿನೊಂದಿಗೆ ಚಕ್ಕಡಿ ಎಳೆದುಕೊಂಡು  ದೀರ್ಘ‌ದಂಡ ನಮಸ್ಕರಿಸುವ ಭಾರೀ ಶಕ್ತಿ ಪ್ರದರ್ಶನ ನೋಡುಗರನ್ನು ರಂಜಿಸಿತು.

Advertisement

Udayavani is now on Telegram. Click here to join our channel and stay updated with the latest news.

Next