Advertisement

ಸಾಲ ತೀರಿಸದ್ದಕ್ಕೆ ಅಂತಾರಾಷ್ಟ್ರೀಯ ಏರ್ ಪೋರ್ಟ್ ಜಪ್ತಿ!

11:33 AM Nov 29, 2021 | Team Udayavani |

ಬೀಜಿಂಗ್‌: ಯಾರಿಂದಲೇ ಆಗಲಿ ಪಡೆದುಕೊಂಡ ಸಾಲ ವಾಪಸ್‌ ನೀಡದೇ ಇದ್ದರೆ ಏನು ಮಾಡುತ್ತಾರೆ? ಸಾಲ ಪಡೆದವರ ಬಳಿ ಇರುವ ವಸ್ತುಗಳನ್ನು ವಶಕ್ಕೆ ಪಡೆಯುತ್ತಾರೆ. ಬ್ಯಾಂಕ್‌ಗಳಾದರೆ ಆಸ್ತಿ ಜಪ್ತಿ ಮಾಡುತ್ತವೆ. ಅದೇ ದಾರಿಯನ್ನು ಚೀನಾ ಹಿಡಿದಿದೆ.

Advertisement

ಪೂರ್ವ ಆಫ್ರಿಕಾ ಖಂಡದ ದೇಶ ಉಗಾಂಡಕ್ಕೆ ಚೀನಾದ ಎಕ್ಸ್‌ಪೋರ್ಟ್‌ ಇಂಪೋರ್ಟ್‌ ಬ್ಯಾಂಕ್‌ 2015ರಲ್ಲಿ 1,553 ಕೋಟಿ ರೂ. (207 ಮಿಲಿಯನ್‌ ಡಾಲರ್‌) ಸಾಲ ನೀಡಿತ್ತು. ಅದನ್ನು ವಾಪಸ್‌ ಕೊಡಲಿಲ್ಲ ಎಂಬ ಕಾರಣಕ್ಕೆ  ಈಗ ಬ್ಯಾಂಕ್‌, ಉಗಾಂಡದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನೇ ಜಪ್ತಿ ಮಾಡಿ ದೆ. ಹೀಗಾಗಿ, ಡ್ರ್ಯಾಗನ್‌ನ ಸಾಲ ನೀತಿಗೆ ಬಲಿಯಾದ ರಾಷ್ಟ್ರಗಳ ಸಾಲಿಗೆ ಆಫ್ರಿಕಾ ಖಂಡದ ಬಡ ರಾಷ್ಟ್ರವೂ ಸೇರಿದಂತಾಗಿದೆ.

ಉಗಾಂಡದ ಎಂಟೆಬೆ ವಿಮಾನ ನಿಲ್ದಾಣದ ಅಭಿವೃದ್ಧಿ ಕಾಮಗಾರಿಗಳಿಗಾಗಿ ಶೇ.2ರ ಬಡ್ಡಿದರದಲ್ಲಿ 20 ವರ್ಷಗಳ ಅವಧಿಗೆ ಸಾಲ ಪಡೆಯಲಾಗಿತ್ತು. ನಂತರ ಏಳು ವರ್ಷಗಳ ಹೆಚ್ಚುವರಿ ಅವಧಿಯನ್ನೂ ಪಡೆದುಕೊಳ್ಳಲಾಗಿತ್ತು. ಆದರೆ ಸಾಲ ಮರುಪಾವತಿಗೆ ಸಂಬಂಧಿಸಿದ ನಿಯಮಗಳ ಪಾಲನೆ ಮತ್ತು ಚೀನಾ ನಿಬಂಧನೆಗಳನ್ನು ಮಾರ್ಪಾಡು ಮಾಡಿಸಿಕೊಳ್ಳುವಲ್ಲಿ ಉಗಾಂಡಾ ಸರ್ಕಾರ ವಿಫ‌ಲವಾಗಿದೆ. ಅದರ ಪರಿಣಾಮ, ಉಗಾಂಡದ ಏಕೈಕ ವಿಮಾನ
ನಿಲ್ದಾಣವನ್ನು ಚೀನಾ ಬ್ಯಾಂಕ್‌ ಕೈವಶ ಮಾಡಿಕೊಂಡಿದೆ.

ಉಗಾಂಡ ಅಧ್ಯಕ್ಷ ಯೊವೇರಿ ಮುಸ್ವೇನಿ ಅವರು ಉನ್ನತಮಟ್ಟದ ನಿಯೋಗವನ್ನು ಬೀಜಿಂಗ್‌ಗೆ ಕಳುಹಿಸಿಕೊಟ್ಟಿದ್ದು, ಚೀನಾ ಜತೆಗೆ ಮಾತುಕತೆ ನಡೆಸಿ ವಿಮಾನ ನಿಲ್ದಾಣ ಬಿಡಿಸಿಕೊಳ್ಳುವಲ್ಲಿ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಅಲ್ಲಿನ ಹಣಕಾಸು ಸಚಿವರೂ ಇತ್ತೀಚೆಗೆ ಸಾಲದ ವಿಚಾರದಲ್ಲಿ ಎಡವಟ್ಟು ಮಾಡಿಕೊಂಡಿರುವ ಬಗ್ಗೆ ಸಂಸತ್‌ನ ಕ್ಷಮೆಯನ್ನೂ ಕೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next