Advertisement

ಯುಗಾದಿಯಂದೇ ಹೊಸವರ್ಷ

10:38 AM Mar 17, 2018 | |

ಸೊಲ್ಲಾಪುರ: ನಾವು ನಮ್ಮ ಮಾತೃ ಭಾಷೆ ಹಾಗೂ ರಾಷ್ಟ್ರ ಭಾಷೆಯನ್ನು ಗೌರವಿಸಬೇಕು. ನಾವು ಸ್ವದೇಶದ ಅಭಿಮಾನಿಗಳಾಗಿದ್ದು ಸ್ವಭಾಷೆ, ಸ್ವದೇಶಿ ಹಾಗೂ ಸ್ವಾಭಿಮಾನದಿಂದ ಬದುಕಬೇಕು. ನಮ್ಮ ದೇಶದ ಸಂಸ್ಕೃತಿ-ಸಂಸ್ಕಾರ ಬಹುಜನ ಹಿತಾಯ, ಬಹುಜನ ಸುಖಾಯದ ಮೇಲೆ ಅವಲಂಬಿಸಿದೆ ಎಂದು ಯೋಗಗುರು ರಾಮದೇವ ಬಾಬಾ ಹೇಳಿದರು.

Advertisement

ಶುಕ್ರವಾರ ಸೊಲ್ಲಾಪುರಕ್ಕೆ ಆಗಮಿಸಿದ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಾಶ್ಚಿಮಾತ್ಯ ದೇಶದವರು ಮಾರ್ಚ 8ರಂದು ಜಾಗತಿಕ ಮಹಿಳಾ ದಿನ ಆಚರಿಸುತ್ತಾರೆ. ಆದರೆ ನಾವು ಭಾರತೀಯರು ಚೈತ್ರ ಮಾಸದ ಮೊದಲನೆ ದಿನ ಅಂದರೆ ಯುಗಾದಿ ಹಬ್ಬದಂದು ಮಹಿಳಾ ದಿನವನ್ನು ಆಚರಿಸಬೇಕೆಂದು ಕರೆ ನೀಡಿದರು.

ಪಾಶ್ಚಿಮಾತ್ಯ ದೇಶದವರ ಪಾಲಿಗೆ ಜನವರಿ 1ರಂದು ಹೊಸ ವರ್ಷವಾದರೆ, ಯುಗಾದಿ ಹಬ್ಬವು ಭಾರತೀಯರ ಪಾಲಿಗೆ ಹೊಸ ವರ್ಷವಾಗಿದೆ. ಭಾರತೀಯ ಸಂಸ್ಕೃತಿ ಹಾಗೂ ಪರಂಪರೆಗೆ ಅನುಗುಣವಾಗಿ ಯುಗಾದಿ ಹಬ್ಬದಂದು ಮಹಿಳಾ ದಿನಾಚಾರಣೆ ಆಚರಿಸಬೇಕು. ಯುಗಾದಿ ಹಬ್ಬದಿಂದ ಹೊಸ ವರ್ಷ ಪ್ರಾರಂಭವಾಗತ್ತದೆ. ಅದೇ ರೀತಿ ವ್ಯಕ್ತಿಯ ಜನನ ತಾಯಿಯಿಂದ ಆಗಿರುವುದರಿಂದ ಆ ದಿನವನ್ನು ಮಹಿಳಾ ದಿನವನ್ನಾಗಿ ಆಚರಿಸಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಹಕಾರ ಸಚಿವ ಸುಭಾಷ ದೇಶಮುಖ, ವಿವೇಕಾನಂದ ಪ್ರತಿಷ್ಠಾನ ಅಧ್ಯಕ್ಷ ಸಚಿನ ಕಲ್ಯಾಣಶೆಟ್ಟಿ, ಸುಧಾ ಪಶ್ಚಿಮ ಮಹಾರಾಷ್ಟ್ರ ಪತಂಜಲಿ ಯೋಗಪೀಠದ ಮುಖ್ಯಸ್ಥೆ ಸುಧಾ ಅಳ್ಳಿಮೋರೆ, ಪುಣೆಯ ಉದ್ಯಮಿ ಶಿವರಾಜ ರಾಠಿ, ನಗರ ಸೇವಕ ಮಿಲನ ಕಲ್ಯಾಣಶೆಟ್ಟಿ, ಸಂತೋಷ ಜಿರೋಳೆ, ಚಂದ್ರಕಾಂತ ದಸಲೆ, ವಿಲಾಸ ಕೋರೆ, ರಾಜಕುಮಾರ ಝಿಂಗಾಡೆ, ಅಶೋಕ ಯೆಣಗೂರೆ ಹಾಜರಿದ್ದರು.

ಇದಕ್ಕೂ ಮುನ್ನ ಸೊಲ್ಲಾಪುರ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಯೋಗಗುರು ರಾಮದೇವ ಬಾಬಾ ಅವರಿಗೆ ಮೇಯರ್‌ ಶೋಭಾ ಬನಶೆಟ್ಟಿ ಅವರು ಹೂಗುತ್ಛ ನೀಡಿ ಸ್ವಾಗತಿಸಿದರು. 

Advertisement

18ರಂದು ಬೃಹತ್‌ಮಹಿಳಾ ಸಮ್ಮೇಳನ ವಿವೇಕಾನಂದ ಪ್ರತಿಷ್ಠಾನ ವತಿಯಿಂದ ಅಕ್ಕಲಕೋಟ ನಗರದ ಫತ್ತೆಸಿಂಹ ಮೈದಾನದಲ್ಲಿ ಮಾ. 17 ರಿಂದ 19ರ ವರೆಗೆ ಬೆಳಗ್ಗೆ 5 ರಿಂದ ಮುಂಜಾನೆ 7:30ರ ವರೆಗೆ ಬೃಹತ್‌ ಯೋಗ ಮತ್ತು ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ. 

ರಾಮದೇವ ಬಾಬಾರ ಉಪಸ್ಥಿತಿಯಲ್ಲಿ ಮಾ.17 ರಂದು ಸಾಯಂಕಾಲ 4 ಗಂಟೆಗೆ ವಳಸಂಗದಲ್ಲಿ ರೈತರ ಸಮಾವೇಶ, ಮಾ.18 ರಂದು ಚಿತ್ರನಟಿ ಮತ್ತು ಸಂಸದೆ ಹೇಮಾಮಾಲಿನಿ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಯವರ ಪತ್ನಿ ಅಮೃತಾ ಫಡ್ನವಿಸ್‌ರ ಉಪಸ್ಥಿತಿಯಲ್ಲಿ ಸೊಲ್ಲಾಪುರದಲ್ಲಿ ಬೃಹತ್‌ ಮಹಿಳಾ ಸಮ್ಮೇಳನ ನಡೆಯಲಿದೆ. ಶಾಲೆಗಳು ಈಗ ಬೆಳಗಿನ ಜಾವದಲ್ಲಿರುವುದರಿಂದ ಶಾಲೆಯ ವೇಳೆ ಮುಂಜಾನೆ 7:30ರ ಬದಲಿಗೆ 8:30 ರಿಂದ ಮಧ್ಯಾಹ್ನ 12:30ರ ಕಾರ್ಯಕ್ರಮ ನಡೆಸಲು ಶಿಕ್ಷಕ ಸಂಘಗಳು ಶಿಕ್ಷಣಾ ಧಿಕಾರಿಗಳನ್ನು ಕೋರಿದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಸಚಿನ ಕಲ್ಯಾಣಶೆಟ್ಟಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next