Advertisement

ಮರಳಿ ಬಂದಿದೆ ಯುಗಾದಿ

12:43 PM Apr 14, 2021 | Team Udayavani |

ಹೊಸ ದಿನಗಳೊಂದಿಗೆ ನಿನ್ನ ಆಗಮನ,

Advertisement

ದಿನ ಉರುಳಲು ಸಾಲುಗಟ್ಟಲೆ ಹಬ್ಬಗಳ ತೋರಣ

ಅದರಲೂ ನಿನ್ನ ಬರುವಿಕೆಗೆ ಕಾಯುವುದು

ಒಂದೆ ನಮ್ಮ ಮನ.

ಅದೇ ನೋಡಿ ಯುಗ ಯುಗಗಳ ಯುಗಾದಿ,

Advertisement

ಸಿಹಿಯನು ಉಣಬಡಿಸುವ ಬುನಾದಿ…

ಕಾಲಚಕ್ರ ಉರುಳುವುದು ಸರ್ವೇ ಸಾಮಾನ್ಯ ಮೂಡೋದು ಮುಳುಗೋದು ಋತುಮಾನದ ಪ್ರಕ್ರಿಯೆ. ಅಂತೆಯೇ ಈ ವರ್ಷ ಮುಗಿದು ಹೊಸ ವರ್ಷ ಉದಯಿಸುವಸುವರ್ಣ ಸಮಯ ಬಂದೇ ಬಿಟ್ಟಿದೆ. ಮನೆ ಮನೆಯಲ್ಲೂ , ಮನ-ಮನದಲ್ಲೂ ಯುಗಾದಿಯಸಂಭ್ರಮ ತುಂಬಿದೆ. ನಮ್ಮ ಸಂಸ್ಕೃತಿಯಂತೆ ಬೇವು-ಬೆಲ್ಲವನ್ನುಹಂಚುವುದರ ಮೂಲಕ ನವ ಸಂವತ್ಸರವನ್ನು ಆಹ್ವಾನಿಸಲು ಜನತೆ ತಯಾರಾಗಿದೆ.

ಸುಖ ದುಃಖಗಳ ಸಮರಸವೇ ಜೀವನ. ಯಶಸ್ಸು ಎಂಬುದುವ್ಯಕ್ತಿಯನ್ನು ಜಗತ್ತಿಗೆ ಪರಿಚಯಿಸುತ್ತಿದೆ. ವೈಫಲ್ಯವು ವ್ಯಕ್ತಿಗೆಜಗತ್ತನ್ನು ಪರಿಚಯಿಸುತ್ತದೆ. ಹೀಗಾಗಿ ಸುಖಕ್ಕೆ ಹಿಗ್ಗದೆ,ಕಷ್ಟಕ್ಕೆ ಕುಗ್ಗದೆ ಬದುಕು ಸಾಗಿಸಬೇಕು. ಬೇವು ಬೆಲ್ಲಗಳನ್ನುಸವಿಯುವಂತೆ ಕಷ್ಟ-ಸುಖಗಳನ್ನು ಸಮಾನವಾಗಿ ಸವಿಯಬೇಕು. ಆರೋಗ್ಯವಾಗಿರಲು ಬೆಲ್ಲವೂ ಬೇಕು, ಬಂತು ಯುಗಾದಿ ಹೊಸಸಂಚಲನ ಎಂಬಂತೆ, ಹೊಸ ದಿನಗಳೊಂದಿಗೆ ನಿನ್ನ ಆಗಮನ, ದಿನಉರುಳಲು ಸಾಲುಗಟ್ಟಲೆ ಹಬ್ಬಗಳ ತೋರಣ ಅದರಲೂ ನಿನ್ನಬರುವಿಕೆಗೆ ಕಾಯುವುದು ಒಂದೆ ನಮ್ಮ ಮನ. ಅದೇ ನೋಡಿ ಯುಗ ಯುಗಗಳ ಯುಗಾದಿ, ಯುಗಾದಿ ಜೊತೆಗೆ ಬೇವೂ ಬೇಕು ಅಂತೆಯೇ ಬದುಕಲ್ಲಿಕಷ್ಟವೂ ಬೇಕು, ಸುಖವೂ ಬೇಕು ಎಂಬುದನ್ನು ಯುಗಾದಿ ಸಾರುತ್ತದೆ.

ಹಬ್ಬಗಳ ಆಚರಣೆಯಿಂದ ಸಂಬಂಧಗಳು ಗಟ್ಟಿಯಾಗುತ್ತವೆ. ಆದರೆ ಯಾಂತ್ರಿಕ ಬದುಕಿನ ಜಂಜಾಟದಲ್ಲಿ ಹಬ್ಬಗಳನ್ನು ಆಚರಿಸಲು ಪುರುಸೊತ್ತಿಲ್ಲದ ಬ್ಯುಸಿ ಜೀವನ ನಮ್ಮದಾಗಿದೆ. ತಂತ್ರಜ್ಞಾನಬೆಳೆಯುತ್ತಿದೆ, ಮಾನವ ಸಂಬಂಧಕ್ಷೀಣಿಸುತ್ತಿದೆ. ಹಬ್ಬ ಹರಿದಿನಗಳಪ್ರಾಮುಖ್ಯತೆಯನ್ನುಇಂದಿನ ಯುವಜನತೆಮನಗಾಣುತ್ತಿಲ್ಲ. ಫೇಸ್‌ಬುಕ್‌,ಇಂಟರ್‌ನೆಟ್‌. ವಾಟ್ಸ್‌ಆ್ಯಪ್‌ ಮತ್ತೂಂದುಮಗದೊಂದುರೊಳಗೆ ನಮ್ಮ ಸಂಸ್ಕೃತಿಯನ್ನೇ ಮರೆಯುತ್ತಿದ್ದಾರೆ. ಫಾಸ್ಟ್‌ ಫುಡ್‌ಗಳ ಹಾವಳಿಯಿಂದ ಹಬ್ಬದ ಸಿಹಿ-ತಿಂಡಿಗಳು, ಮೃಷ್ಟಾನ್ನ ಭೋಜನಗಳು ಯುವಕರಿಗೆ ಬೇಡವಾಗಿದೆ.

ಯುವಜನರು ನಾಗರಿಕರಾಗುತ್ತಿದ್ದಾರೆಯೇ ಹೊರತು ಸಂಸ್ಕೃತಿಯನ್ನು ಪಾಲಿಸುವ ಸಂಸ್ಕಾರವಂತ ರಾಗುತ್ತಿಲ್ಲ. ಏನೇಆಗಲಿ, ಇನ್ನಾದರೂ ಯುವಜನತೆ, ಭಾರತೀಯ ಸಂಸ್ಕೃತಿಯನ್ನು ಪಾಲಿಸಲಿ. ಮನಸ್ಸಿಗೆ ಮುದನೀಡಿ ಬಾಂಧವ್ಯಗಳನ್ನು ಬೆಸೆಯುವಹಬ್ಬಗಳನ್ನು ಆಚರಿಸಲಿ. ಬದಲಾವಣೆಯಿಲ್ಲದೇ ಬೆಳವಣಿಗೆಸಾಧ್ಯವಿಲ್ಲ. ಹೀಗಾಗಿ ಈ ಯುಗಾದಿಯ ಆರೋಗ್ಯಕರಬದಲಾವಣೆಯ ಗಾಳಿಯನ್ನು ಬೀಸಲಿ. ಹಳೆಯ ಅನುಭವಗಳೊಂದಿಗೆ, ಹೊಸ ಭರವಸೆಗಳೊಂದಿಗೆ ಈ ವರ್ಷವನ್ನು ಬೀಳ್ಕೊಟ್ಟು , ಹೊಸ ವರ್ಷವನ್ನು ಸ್ವಾಗತಿಸೋಣ.

Advertisement

Udayavani is now on Telegram. Click here to join our channel and stay updated with the latest news.

Next