Advertisement

ಯುಗಾದಿ ಸಂಭ್ರಮ: ಮಹಾಲಿಂಗೇಶ್ವರ ಜಟೋತ್ಸವ ಸಾವಿರಾರು ಭಕ್ತರು ಭಾಗಿ 

01:56 PM Apr 02, 2022 | Team Udayavani |

ಮಹಾಲಿಂಗಪುರ:  ಪಟ್ಟಣದ ಐತಿಹಾಸಿಕ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಯುಗಾದಿ ಹಬ್ಬದ ಜಟೋತ್ಸವವು ಶನಿವಾರ ಮುಂಜಾನೆ ಸಂಭ್ರಮ ಸಡಗರದಿಂದ ಜರುಗಿತು.

Advertisement

ನಸುಕಿನಲ್ಲೆ ಭಕ್ತರ ಆಗಮನ : ಯುಗಾದಿ ಜಟೋತ್ಸವ ವೀಕ್ಷಣೆಗಾಗಿ ನಸುಕಿನ 3 ಗಂಟೆಯಿಂದಲೇ ಭಕ್ತರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸುತ್ತಿದ್ದರು. ಯುಗಾದಿಯ ಮುಂಜಾನೆ ಮಹಾಲಿಂಗೇಶ್ವರ ಜಟೋತ್ಸವ ವೀಕ್ಷಣೆ ಮಾಡಿದರೇ ಯಾವುದೇ ಕಂಟಕ ಇರುವದಿಲ್ಲ, ವರ್ಷಪೂರ್ತಿ ನೆಮ್ಮದಿಯ ಜೀವನ ನಡೆಸಬಹುದು ಎಂಬುವದು ಭಕ್ತಾದಿಗಳ ಅಜಲ ನಂಬಿಕೆಯಾಗಿದೆ.

ಯುಗಾದಿ ಪಾಡ್ಯೆಯ ನಿಮಿತ್ಯ ಮಹಾಲಿಂಗೇಶ್ವರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಜಟೋತ್ಸವ ವೇಳೆ ಕರಡಿ ಕಲಾವಿದರು ಕರಡಿ ಸೇವೆ ಸಲ್ಲಿಸಿದರು.ಜಟೋತ್ಸವಕ್ಕೆ ಆಗಮಿಸಿದ ಭಕ್ತರಿಗೆ ಶಾವಗಿ ಪಾಯಸದ ಸಿಹಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

 ಶನಿವಾರ ಮುಂಜಾನೆ ಜರುಗಿದ ಪ್ರಸಕ್ತ ವರ್ಷದ ಜಟೋತ್ಸವವನ್ನು ಪೀಠಾಧಿಪತಿ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಜಿ ನೇರವೇರಿಸಿದರು.

Advertisement

ಬಾಗಲಕೋಟೆಯ ಸಂಸದ ಪಿ.ಸಿ.ಗದ್ದಿಗೌಡರ, ತೇರದಾಳ ಶಾಸಕ ಸಿದ್ದು ಸವದಿ, ಮಹಾಲಿಂಗೇಶ್ವರ ಜಾತ್ರಾ ಕಮೀಟಿ ಅಧ್ಯಕ್ಷ ಲಕ್ಷ್ಮಣಗೌಡ ಪಾಟೀಲ ಸೇರಿದಂತೆ ಮಹಾಲಿಂಗಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next