Advertisement

ಪರಿಸರ ಸೌಂದರ್ಯ ಆಸ್ವಾದ ಯುಗಾದಿ ವಿಶೇಷ: ಶಂಕರಯ್ಯ ದೇಗಾವಿಮಠ

10:55 AM Apr 09, 2019 | Team Udayavani |
ಅಳ್ನಾವರ: ಭಾರತೀಯ ಪರಂಪರೆಯಲ್ಲಿ ಹಬ್ಬಗಳು ತಮ್ಮದೇ ಆದ ಮಹತ್ವ ಪಡೆದಿವೆ. ಪ್ರಕೃತಿ ವೈಚಿತ್ರದೊಂದಿಗೆ
ಬೆರೆತು ಜೀವನದ ನೋವು ಹಾಗೂ ಸುಖವನ್ನು ಸಮನಾಗಿ ಸ್ವೀಕರಿಸಿ ಎಂಬ ಸಂದೇಶ ಯುಗಾದಿ ಹಬ್ಬದಲ್ಲಿ ಅಡಗಿದೆ
ಎಂದು ಶಂಕರಯ್ಯ ಡಿ. ದೇಗಾವಿಮಠ ಹೇಳಿದರು.
ಇಂದಿರಾ ನಗರ ಬಡಾವಣೆಯ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆದ ಯುಗಾದಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪರಿಸರದ ಸೌಂದರ್ಯ ಆಸ್ವಾದಿಸಿ ಪರಸ್ಪರ ಶುಭ ಕೋರುವುದೇ ಯುಗಾದಿಯ ವಿಶೇಷ ಎಂದರು.
ಜೀವನದಲ್ಲಿ ಕಷ್ಟ-ಸುಖ, ನೋವು-ನಲಿವುಗಳನ್ನು ಸಮನಾಗಿ ಸ್ವೀಕರಿಸಬೇಕು ಎಂಬ ಯುಕ್ತಿ ಬಿಂಬಿಸುವ ಯುಗಾದಿ ಹಬ್ಬ ನವ ವಸಂತವನ್ನು ಸ್ವಾಗತಿಸುವುದರ ಜತೆಗೆ ಸ್ನೇಹ, ಮಧುರತೆ, ಶಾಂತಿ ಮೂಡಿಸಿ ಅಶಾಂತಿಯನ್ನು ಹೋಗಲಾಡಿಸುವ ದ್ಯೋತಕವಾಗಿದೆ ಎಂದು ಹೇಳಿದರು. ಬೆಳಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ ಮುಂತಾದ ಧಾರ್ಮಿಕ ಕಾರ್ಯಗಳು ನಡೆದವು. ವೀರಭದ್ರೇಶ್ವರ, ಕಾಳಿಕಾದೇವಿ, ಗಣೇಶ, ಬಸವಣ್ಣ ಹಾಗೂ ನಾಗದೇವತಾ ಮೂರ್ತಿಗಳಿಗೆ ಮಾಡಿದ ಅಲಂಕಾರ
ಗಮನ ಸೆಳೆಯಿತು. ಸಂಜೆ ಪಲ್ಲಕ್ಕಿ ಉತ್ಸವ ಜರುಗಿತು. ಬೇವು-ಬೆಲ್ಲ ವಿತರಣೆ ನಡೆಯಿತು.
ದೇವಸ್ಥಾನ ಟ್ರಸ್ಟ್‌ ಸಮಿತಿ ಅಧ್ಯಕ್ಷ ಬಸಯ್ಯ ಹಿರೇಮಠ, ಉಪಾಧ್ಯಕ್ಷ ವೀರಭದ್ರಯ್ಯ ಗದಿಗಯ್ನಾ ಪಾಟೀಲ, ಕಾರ್ಯದರ್ಶಿ ಪ್ರವೀಣಕುಮಾರ ಈರಣ್ಣ ವಾರದ, ಖಜಾಂಚಿ ರಾಜಶೇಖರ ಪ್ರಕಾಶ ಕೌಜಲಗಿ, ಸದಸ್ಯರಾದ ರಾಜು ಶಂಕರ ಬೆಂಡಿಗೇರಿ, ಕಿರಣ ನಾರಾಯಣ ಗಡಕರ, ಜಗದೀಶ ಸಂಗಪ್ಪ ಚಚಡಿ, ರುದ್ರಪ್ಪಾ ಶಿವಬಸಪ್ಪ ಹಂಚಿನಮನಿ, ಮಹಾದೇವ ರುದ್ರಪ್ಪಾ ಕುಂಬಾರ ಇದ್ದರು.
Advertisement

Udayavani is now on Telegram. Click here to join our channel and stay updated with the latest news.

Next