Advertisement
ಜೂ. 27ರಂದು ಉದ್ಯಾವರ ಶ್ರೀ ವಿಠೊಬ ರುಖುಮಾಯಿ ಬಿಲ್ಲವ ಸಭಾ ಭವನದಲ್ಲಿ ಉಡುಪಿ ಜಿ.ಪಂ. ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳ ಸಹಯೋಗದಲ್ಲಿ ಉಡುಪಿ ಹೋಬಳಿ ಮಟ್ಟದ ಸಮಗ್ರ ಕೃಷಿ ಅಭಿಯಾನ – 2018-19 ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಶೇ.70 ಪಾಲು ಜನರಿಗೆ ಕೃಷಿ ಜೀವನಾಧಾರಿತವಾಗಿತ್ತು. ಜಿಲ್ಲೆಯ ಪ್ರಧಾನ ಬೇಸಾಯ ಭತ್ತದ ಬೆಳೆಯಾಗಿದ್ದರೂ, ಕೈಗಾರೀಕರಣದಿಂದ ಯುವ ಜನತೆ ಪಟ್ಟಣದತ್ತ ಆಕರ್ಷಿತರಾಗುತ್ತಿದ್ದಾರೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದಲ್ಲಿ ನಮ್ಮ ಜಿಲ್ಲೆಯಲ್ಲಿ ಕೃಷಿ ದುಬಾರಿ ಅನಿಸತೊಡಗಿದೆ. ಮೂರು ಬೆಳೆ ಬೆಳೆಯದೆ ಭತ್ತದ ಇಳುವರಿ ಕುಂಠಿತವಾಗುತ್ತಿದೆ. ಕೃಷಿ ಲಾಭದಾಯಕವಾಗಿಲ್ಲ. ಇಲಾಖೆ, ಸರಕಾರದ ಸವಲತ್ತುಗಳ ಸದ್ಭಳಕೆಯಿಂದ ಕೃಷಿಕರೇ ಸ್ವಯಂ ಸ್ಪೂರ್ತಿಯಿಂದ ಕೃಷಿ ಉಳಿಸಿ ಸಂತೃಪ್ತಿ ಪಡೆಯಬೇಕಿದೆ. ಕರಾವಳಿಯ ರೈತರ ಪರಿಶ್ರಮದ ಭತ್ತದ ಬೆಳೆಯ ಅನ್ನ ಊಟದ ಜತೆಗೆ ಕರಾವಳಿಯ ಮೀನಿನ ಪದಾರ್ಥದ ಕಾಂಬಿನೇಷನ್ ಬಹಳಷ್ಟು ಸ್ವಾದಿಷ್ಟಕರವಾಗಿರುತ್ತದೆ ಎಂದರು. ರೈತರ ಕೃಷಿಗೆ ಸಹಕಾರಿ
ತಾ.ಪಂ. ಉಪಾಧ್ಯಕ್ಷ ರಾಜೇಂದ್ರ ಪಿ. ಮಾತನಾಡಿ, ಕೃಷಿಕರೇ ದೇಶದ ಬೆನ್ನೆಲುಬು. ರೈತರ ಕೃಷಿಗೆ ಸಹಕಾರಿ
ಯಾಗಿ ಇಲಾಖೆ ವತಿಯಿಂದ ಇರುವ ಯೋಜನೆಗಳ ಸದ್ಭಳಕೆ ಮಾಡಿಕೊಳ್ಳಬೇಕು ಎಂದವರು ತಿಳಿಸಿದರು.
Related Articles
Advertisement
ತಾ.ಪಂ. ಸದಸ್ಯರಾದ ರಜನಿ ಆರ್.ಅಂಚನ್, ಸಂಧ್ಯಾ ಕಾಮತ್, ಎ.ಪಿ.ಎಂ.ಸಿ. ಸದಸ್ಯ ಕಿರಣ್ ಕುಮಾರ್ ಉದ್ಯಾವರ, ಉದ್ಯಾವರ ಗ್ರಾ.ಪಂ. ಉಪಾಧ್ಯಕ್ಷ ರಿಯಾಜ್ ಪಳ್ಳಿ, ಆತ್ರಾಡಿ ಗ್ರಾ.ಪಂ. ಅಧ್ಯಕ್ಷೆ ಪ್ರಮೀಳಾ, ಅಂಬಲಪಾಡಿ ಗ್ರಾ.ಪಂ. ಅಧ್ಯಕ್ಷೆ ಉಷಾ, ಪಶುವೈದ್ಯಾಧಿಕಾರಿ ಡಾ| ಸಂಪತ್ ಶೆಟ್ಟಿ, ವ.ಕೃ.ತೋ.ಸಂ. ಕೇಂದ್ರದ ಸಹ ಸಂಶೋಧನ ನಿರ್ದೇಶಕ ಡಾ| ಎಸ್.ಯು. ಪಾಟೀಲ್, ಮಣ್ಣು ವಿಜ್ಞಾನಿ ಟಿ.ಎಚ್. ರಂಜಿತ್, ಸಹಾಯಕ ಪ್ರಾಧ್ಯಾಪಕಿ ಡಾ| ಸೀಮಾ, ಬ್ರಹ್ಮಾವರ ಡಿಪ್ಲೊಮಾ ಕೃಷಿ ವಿಶ್ವವಿದ್ಯಾನಿಲಯದ ಪ್ರಾಂಶುಪಾಲ ಡಾ| ಕೆ.ಜಿ.ಎಸ್. ಕಾಮತ್, ಜಿಲ್ಲಾ ಆತ್ಮಯೋಜನ ಉಪನಿರ್ದೇಶಕ ಅಣ್ಣಪ್ಪ ಸ್ವಾಮಿ ಉಪಸ್ಥಿತರಿದ್ದರು.
ಸಹಾಯಕ ಕೃಷಿ ಅಧಿಕಾರಿ ನಾರಾಯಣ ಐತಾಳ್, ರಾಮಕೃಷ್ಣ ಭಟ್, ಸಹಾಯಕ ತೋಟಗಾರಿಕೆ ಅಧಿಕಾರಿ ದೀಪಾ ಉಪಸ್ಥಿತರಿದ್ದರು.
ಉದ್ಯಾವರ ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ರಮಾನಂದ ಪುರಾಣಿಕ್ ಸ್ವಾಗತಿಸಿದರು. ಸಹಾಯಕ ಕೃಷಿ ನಿರ್ದೇಶಕ, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಮೋಹನ್‌ರಾಜ್ ಪ್ರಸ್ತಾವನೆಗೈದರು. ಆತ್ಮ ಯೋಜನೆಯ ತಾಲೂಕು ತಾಂತ್ರಿಕ ಮುಖ್ಯಸ್ಥೆ ಸಂಜನಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸುಣ್ಣ ಬಳಕೆಯಿಂದ ಫಲವತ್ತತೆ ಸಾಧ್ಯ
ನಗರೀಕರಣದಿಂದ ಕೃಷಿ ಕುಂಠಿತವಾಗುತ್ತಿದೆ. ಕರಾವಳಿಯಲ್ಲಿ ಮಳೆಯಿಂದಾಗಿ ಮಣ್ಣಿನ ಫಲವತ್ತತೆ ಕುಂದುತ್ತದೆ. ಮಣ್ಣು ಪರೀಕ್ಷೆ ಅವಶ್ಯಕವಾಗಿದ್ದು, ಕರಾವಳಿಯಾದ್ಯಂತ ಇರುವ ಹುಳಿ ಮಣ್ಣು ಸಾರಭರಿತವಾಗಲು ಸುಣ್ಣದ ಸಮರ್ಪಕ ಬಳಕೆಯಿಂದ ಫಲವತ್ತತೆ ಕಾಪಾಡಿಕೊಳ್ಳಲು ಸಾಧ್ಯ.
– ಡಾ| ಕೆ.ಜಿ.ಎಸ್. ಕಾಮತ್,
ಪ್ರಾಂಶುಪಾಲ, ಬ್ರಹ್ಮಾವರ ಡಿಪ್ಲೊಮಾ ಕೃಷಿ ವಿಶ್ವವಿದ್ಯಾನಿಲಯ