ಕಡಲಿನ ನೀರಿನ ಸೆರೆಯ ಅಬ್ಬರದಿಂದ ಸಮುದ್ರದ ನೀರು ಮಲ್ಪೆ ಸಂಪರ್ಕದ ಪ್ರಮುಖ ರಸ್ತೆಯನ್ನೂ ದಾಟಿದ್ದು, ಶ್ರೀರಾಮಭಕ್ತ ಹನುಮಾನ್ ಭಜನ ಮಂದಿರ ಬಳಿಯ ಮೋಹನ್ ಮೆಂಡನ್, ಕಾವೇರಿ ಸುವರ್ಣ ಎಂಬವರ ಮನೆ ಬಳಿಯಲ್ಲಿ ತೋಟದೊಳಕ್ಕೆ ನುಗ್ಗಿ ಪೂರ್ವ ಪಾರ್ಶ್ವದಲ್ಲಿರುವ ಪಾಪನಾಶಿನಿ ಹೊಳೆಗೆ ಸೇರಿತ್ತು. ರಸ್ತೆಯ ಮೇಲೆಲ್ಲಾ ಮರಳು ತುಂಬಿತ್ತು.
Advertisement
ಈ ಬಗ್ಗೆ ಮಾಹಿತಿ ಪಡೆದ ಉಡುಪಿ ಜಿ.ಪಂ. ಅಧ್ಯಕ್ಷ ದಿನಕರ ಬಾಬು ಸಂಜೆಯ ವೇಳೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದು ಅಪರ ಜಿಲ್ಲಾಧಿಕಾರಿ ಮತ್ತು ಎ.ಡಿ.ಬಿ. ಎಂಜಿನಿಯರ್ ಅವರೊಂದಿಗೆ ಸುರಕ್ಷತೆಯನ್ನು ಕಲ್ಪಿಸುವಂತೆ ಫೋನ್ ಮೂಲಕ ಸಂಪರ್ಕಿಸಿ ತಿಳಿಸಿರುತ್ತಾರೆ.