Advertisement

Udupi;ಸುರಕ್ಷೆ ಇಲ್ಲದ ಕಾಲುವೆ, ತೋಡುಗಳು

03:46 PM Jul 02, 2023 | Team Udayavani |

ಉಡುಪಿ: ನಗರದಲ್ಲಿ ತಡೆಗೋಡೆ ಇಲ್ಲದ ಮಳೆ ನೀರು ಹರಿಯುವ ತೋಡು, ಕಾಲುವೆಗಳು ಅಪಾಯಕಾರಿಯಾಗಿ ಪರಿಣಮಿಸಿವೆ. ಬುಧವಾರ ತಡರಾತ್ರಿ ನಗರದ ಮಠದಬೆಟ್ಟುವಿನಲ್ಲಿ ಕಾಲುಸಂಕದ ಮೂಲಕ ಕಾಲುವೆ ದಾಟುತ್ತಿದ್ದ ವ್ಯಕ್ತಿಯೊಬ್ಬರು ಕಾಲು ಜಾರಿ ಬಿದ್ದು ಮೃತಪಟ್ಟಿದ್ದರು. ಈ ಘಟನೆಯಿಂದಾಗಿ ಕೆಲವು ಕಡೆಗಳಲ್ಲಿ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

Advertisement

ನಗರದ ಕಲ್ಸಂಕ, ಬೈಲಕೆರೆ, ಮಠದಬೆಟ್ಟು, ಗುಂಡಿಬೈಲು ಮೊದಲಾದ ಭಾಗದಲ್ಲಿ ಈ ರೀತಿಯ ಕಾಲುವೆ ಅಪಾಯ ಆಹ್ವಾನಿಸುತ್ತಿವೆ. ಮಳೆಗಾಲದಲ್ಲಿ ಇಂದ್ರಾಣಿ ನದಿ ತುಂಬಿ ಹರಿಯುವುದು ಮತ್ತು ಗುಂಡಿಬೈಲು ಭಾಗದಲ್ಲಿ ಮಳೆ ನೀರು ಸಾಗುವ ಚರಂಡಿ ತುಂಬಿ ಹರಿಯಲಿದೆ. ಈ ಮಾರ್ಗದಲ್ಲಿ ತಡೆಗೋಡೆ ಸಹಿತ ಯಾವುದೆ ಸುರಕ್ಷತೆಗಳಿಲ್ಲ. ಇನ್ನು ಮುಂದಿನ ದಿನಗಳಲ್ಲಿ ಮಳೆ ಹೆಚ್ಚಾಗುವುದರಿಂದ ಕಾಲುವೆ, ಚರಂಡಿಯಲ್ಲಿ ನೀರು ಹೆಚ್ಚಳವಾಗುತ್ತದೆ. ಸಾರ್ವಜನಿಕರು ಆಚೀಚೆ ಓಡಾಡುವಾಗ, ವಾಹನ ಸಂಚರಿಸುವಾಗ ಆತಂಕ ಮನೆಮಾಡಿರುತ್ತದೆ.

ಎಲ್ಲೆಲ್ಲಿ ಅಪಾಯ ಹೆಚ್ಚು ?
ಕಲ್ಸಂಕದಿಂದ ಕೃಷ್ಣಮಠ ಸಾಗುವ ಕಡೆಗೆ ಇಂದ್ರಾಣಿ ಹರಿಯುವ ಕಾಲುವೆ ಮುಖ್ಯರಸ್ತೆಗೆ ತಾಗಿಕೊಂಡಿದೆ. ಇಲ್ಲಿ ಸುರಕ್ಷತೆಗಾಗಿ ತಡೆಗೋಡೆಗಳು ಇಲ್ಲ. ರಾತ್ರಿ ವೇಳೆ ವಾಹನ ಸವಾರರು, ಜನರು ಆಯತಪ್ಪಿ ಬೀಳುವ ಸಾಧ್ಯತೆ ಇದೆ. ಅದೇ ರೀತಿ ಗುಂಡಿಬೈಲು ವಿಶಾಲ್‌ಮಾರ್ಟ್‌ ಸಮೀಪದಿಂದ ಅಂಬಾಗಿಲು ಸಾಗುವ ಕಡೆಗೆ ಬಲ ಬದಿಯಲ್ಲಿ ಬೃಹತ್‌ ಚರಂಡಿಗಳು ಬಾಯೆ¤ರೆದುಕೊಂಡಿವೆ. ಈ ಮಳೆ ನೀರು ಸಾಗುವ ಚರಂಡಿ ಸಾಕಷ್ಟು ಆಳಕ್ಕೆ ಇದೆ. ಇಲ್ಲಿ ಒಂದೆರಡು ಮಳೆಗೆ ಚರಂಡಿ ತುಂಬಿ ಹರಿಯುತ್ತದೆ. ಈ ಭಾಗದಲ್ಲಿ ಶಾಲೆ ಮಕ್ಕಳು, ರಾತ್ರಿ ಪಾಳಿ ಉದ್ಯೋಗಿಗಳು ಓಡಾಡುತ್ತಾರೆ. ವಾಹನಗಳು ಆಕಸ್ಮಿಕವಾಗಿ ಚರಂಡಿಗೆ ಬೀಳುವ ಸಾಧ್ಯತೆ ಹೆಚ್ಚಿದೆ. ಬನ್ನಂಜೆ ಮೂಡನಿಡಂಬೂರು ನಾಗಬ್ರಹ್ಮಸ್ಥಾನದ ಬಳಿ ಮಳೆ ನೀರು ತೋಡಿಗೆ ಸುರಕ್ಷತೆ ತಡೆಗೋಡೆಗಳಿಲ್ಲ. ಇಲ್ಲಿರುವ ಒಂದು ಕಾಲುಸಂಕದ ಪರಿಸ್ಥಿತಿಯೂ ಚಿಂತಾ ಜನಕವಾಗಿದೆ. ಈ ರೀತಿ ನಗರದಲ್ಲಿ ಹಲವು ಕಡೆಗಳಲ್ಲಿ ಸಮಸ್ಯೆಗಳಿದ್ದು ಕೂಡಲೆ ಪರಿಶೀಲಿಸಿ ಸುರಕ್ಷ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸಗ್ರಿಬೈಲು ಕಾಲುಸಂಕ ಶಿಥಿಲಾವಸ್ಥೆಯಲ್ಲಿ
ಎಂಜಿಎಂ ಕಾಲೇಜು ಹಿಂಬದಿ ಸಗ್ರಿಬೈಲ್‌ಗೆ ಸಂಪರ್ಕವಾಗುವ ಈ ಕಾಲುಸಂಕ ಶಿಥಿಲಾವಸ್ಥೆಗೆ ತಲುಪಿದೆ. ಇದು ಮಳೆ ನೀರು ಸಾಗುವ ಕಾಲುವೆಯಾಗಿದ್ದು, ಮಳೆಗಾಲದಲ್ಲಿ ನೀರು ತುಂಬಿ ಹರಿಯುತ್ತದೆ.ಕಾಲು ಸಂಕವು ಜನರ ಓಡಾಟಕ್ಕೆ ಅಪಾಯಕಾರಿಯಾಗಿದೆ. ಕೃಷಿ ಚಟುವಟಿಕೆಗೆ ದನಕರುಗಳು, ಗದ್ದೆಗೆ ಯಂತ್ರೋಪಕರಣ, ಗೊಬ್ಬರವನ್ನು ರಿûಾದ ಮೂಲಕ ಸಾಗಿಸಲು ಈ ಕಾಲುಸಂಕ ಮುಖ್ಯ ಸಂಪರ್ಕ ಸಾಧನವಾಗಿತ್ತು. 31 ವರ್ಷಗಳ ಹಿಂದಿನ ಹಳೆಯ ಕಾಲುಸಂಕ ಇದಾಗಿದೆ. ಕೆಲವು ಭಾಗದಲ್ಲಿ ಕುಸಿತವಾಗಿದ್ದು, ಜನರು, ವಾಹನಗಳ ಓಡಾಟಕ್ಕೆ ಸುರಕ್ಷಿತವಾಗಿ ಕಾಲುಸಂಕ ರಚನೆ ಮಾಡಲು ಸ್ಥಳೀಯರು ಒತ್ತಾಯಿಸಿದ್ದಾರೆ.

ನಗರಸಭೆ ವ್ಯಾಪ್ತಿ ಎಲ್ಲ ಸೇತುವೆ, ಕಾಲುವೆ ಅಪಾಯಕಾರಿ ಪ್ರದೇಶಗಳನ್ನು ಗುರುತಿಸಿ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ಈ ಬಗ್ಗೆ ತತ್‌ಕ್ಷಣ ವರದಿ ನೀಡುವಂತೆ ನಿರ್ದೇಶಿಸಲಾಗಿದೆ.
– ಯಶ್‌ಪಾಲ್‌ ಸುವರ್ಣ, ಶಾಸಕರು

Advertisement

ಅವಘಡ ಸಂಬಂಧಿಸಿದ ಮಠದಬೆಟ್ಟು ಕಾಲುಸಂಕ ಬಳಿ ತಾತ್ಕಾಲಿಕ ಸುರಕ್ಷತ ಕ್ರಮಗಳನ್ನು ಕೈಗೊಂಡಿದ್ದೇವೆ. ನಗರ ವ್ಯಾಪ್ತಿಯ ಸೇತುವೆ, ಕಾಲುವೆಗಳ ಸ್ಥಿತಿಗತಿಯನ್ನು ಪರಿಶೀಲಿಸಿ ತುರ್ತು ಸುರಕ್ಷತ ಕ್ರಮವನ್ನು ತೆಗೆದುಕೊಳ್ಳುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
– ಆರ್‌.ಪಿ.ನಾಯ್ಕ, ಪೌರಾಯುಕ್ತರು, ಉಡುಪಿ ನಗರಸಭೆ

Advertisement

Udayavani is now on Telegram. Click here to join our channel and stay updated with the latest news.

Next