ಉಡುಪಿ: ನಿರ್ಮಾಣ ಕ್ಷೇತ್ರದಲ್ಲಿ ಉಡುಪಿಯು ಬೆಂಗಳೂರಿಗೆ ಸರಿ ಸಮಾನವಾಗಿ ಉತ್ಕೃಷ್ಟ ಸಾಧನೆ ಮಾಡುತ್ತಿದೆ ಎಂದು ಶಾಸಕ ಯಶ್‌ಪಾಲ್ ಸುವರ್ಣ ಬಣ್ಣಿಸಿದರು.
ಕುಂಜಿಬೆಟ್ಟು ಎಂಜಿಎಂ ಕಾಲೇಜು ಮೈದಾನದಲ್ಲಿ ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ ಆ್ಯಂಡ್ ಆರ್ಕಿಟೆಕ್ಟ್ಮತ್ತು ಬೆಂಗಳೂರಿನ ಯು.ಎಸ್. ಕಮ್ಯೂನಿಕೇಶನ್ಸ್ ವತಿಯಿಂದ ರವಿವಾರ ಜರಗಿದ ಬಿಲ್ಡ್ ಟೆಕ್-2024 ಕಟ್ಟಡ ಸಾಮಗ್ರಿಗಳ ವಸ್ತು ಪ್ರದರ್ಶನದ ಸಮಾರೋಪದಲ್ಲಿ ಅವರು ಮಾತನಾಡಿದರು.
ಉಡುಪಿ ಜಿಲ್ಲೆ ವೇಗದಿಂದ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು, ಗುಣಮಟ್ಟದ ವಸತಿ ಸಮುಚ್ಚಯ, ಮನೆ ನಿರ್ಮಾಣ ಮೂಲಕ ವಿಶಿಷ್ಟ ಸಾಧನೆ ಮಾಡುತ್ತಿದೆ. ಎಂಜಿನಿಯರ್ಸ್, ಬಿಲ್ಡರ್ಸ್ ಇನ್ನಿತರೆ ಗೃಹ ನಿರ್ಮಾಣಕ್ಕೆ ಸಂಬಂಧಿಸಿ ಪರಿಕರಗಳನ್ನು ಒದಗಿಸುವ ಸಂಸ್ಥೆಗಳ ಬದ್ಧತೆ, ದೂರದೃಷ್ಟಿ ಇದಕ್ಕೆ ಕಾರಣ ಎಂದರು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಬದುಕು ಹೊಸ ಅನ್ವೇಷಣೆಗಳ ಮೂಲಕ ಬದಲಾಗುತ್ತಿರುತ್ತದೆ. ಅದಕ್ಕೆ ಪೂರಕವಾಗಿ ಜನರಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಈ ರೀತಿಯ ಕಟ್ಟಡ ಸಾಮಗ್ರಿಗಳ ವಸ್ತು ಪ್ರದರ್ಶನ ಆಯೋಜಿಸಿರುವುದು ಉತ್ತಮ ಯೋಜನೆಯಾಗಿದೆ ಎಂದರು.
ಅಸೋಸಿಯೇಶನ್ ಅಧ್ಯಕ್ಷ ಪಾಂಡುರಂಗ ಆಚಾರ್ ಕೆ. ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಕೀರ್ತಿ ಬಿಲ್ಡರ್ನ ಸುಧೀರ್ ಕುಮಾರ್ ಶೆಟ್ಟಿ, ಅಸೋಸಿಯೇಶನ್ ಗೌರವ ಅಧ್ಯಕ್ಷ ಶ್ರೀನಾಗೇಶ್ ಹೆಗ್ಡೆ, ಶಾಂತಾ ಎಲೆಕ್ಟ್ರಿಕಲ್ಸ್ ಆ್ಯಂಡ್ ಎಂಜಿನಿಯರಿಂಗ್‌ನ ಎಂಡಿ ಶ್ರೀಪತಿ ಭಟ್ ಮುಖ್ಯ ಅತಿಥಿಗಳಾಗಿದ್ದರು.
ಅಸೋಸಿಯೇಶನ್ ಉಪಾಧ್ಯಕ್ಷ ಭಗವಾನ್‌ದಾಸ್ ಕೆ., ಸ್ವಾಗತಿಸಿ, ಪ್ರಸ್ತಾವನೆಗೈದರು. ಎಂಜಿನಿಯರ್ ಜಗದೀಶ್ ಆಚಾರ್ಯ ಪೆರಂಪಳ್ಳಿ ನಿರೂಪಿಸಿದರು. ಶಾಂತಾ ಎಲೆಕ್ಟ್ರಿಕಲ್ಸ್- ಸ್ನೆ„ಡರ್ ಎಲೆಕ್ಟ್ರಿಕಲ್ಸ್, ಕಾಮಾಕ್ಷಿ ಸ್ಟೀಲ್, ಕೆಡ್ಲಿನ್ ಸಂಸ್ಥೆಯ ಮಳಿಗೆಗೆ ಬೆಸ್ಟ್‌ಸ್ಟಾಲ್ ಅವಾರ್ಡ್ ನೀಡಿ ಗೌರವಿಸಲಾಯಿತು.