Advertisement

ಉಡುಪಿ ಜಿಲ್ಲಾ ಪಂಚಾಯತ್ ನೂತನ ಸಿಇಓ ಆಗಿ ಡಾ। ನವೀನ್ ಭಟ್ ಅಧಿಕಾರ ಸ್ವೀಕಾರ

04:52 PM Oct 05, 2020 | sudhir |

ಉಡುಪಿ : ಉಡುಪಿ ಜಿಲ್ಲಾ ಪಂಚಾಯತ್ ನ ಮುಖ್ಯಕಾರ್ಯನಿರ್ವಹಣಾಧಿಕಾರಿ (ಸಿಇಒ) ಆಗಿ ಎಲ್ಲೂರು ಮೂಲದ ಡಾ| ನವೀನ್‌ ಭಟ್‌ ಅವರು ಅಧಿಕಾರ ಸ್ವೀಕರಿಸಿದರು. ಈ ಹಿಂದೆ ಜಿಲ್ಲೆಯ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿದ್ದ ಪ್ರೀತಿ ಗೆಲ್ಹೋಟ್ ಅವರು ಹೂ ಗುಚ್ಛವನ್ನು ನೀಡಿ ಅಧಿಕಾರ ಹಸ್ತಾಂತರಿಸಿದರು.

Advertisement

ಡಾ। ನವೀನ್ ಭಟ್ ಹಿನ್ನೆಲೆ :
2017ರ ಐಎಎಸ್‌ ಬ್ಯಾಚ್‌ನವರಾದ ಡಾ| ಭಟ್‌ ಅವರು ಐಎಎಸ್‌ ಪರೀಕ್ಷೆಯಲ್ಲಿ 37ನೇ ರ್‍ಯಾಂಕ್‌ (ಕರ್ನಾಟಕಕ್ಕೆ 3ನೇ ಸ್ಥಾನ) ಗಳಿಸಿದ್ದರು. ಹಾಸನದ ಉಪ ವಿಭಾಗಾಧಿಕಾರಿ ಆಗಿದ್ದರು. ಈಗ ಮೊದಲ ಬಾರಿಗೆ ಜಿ.ಪಂ. ಸಿಇಒ ಆಗಿ ಪದೋನ್ನತಿಯ ವರ್ಗಾವಣೆ ಪಡೆದಿದ್ದಾರೆ.

ಅವರು ಮೂಡುಬಿದಿರೆ, ಮೊಡಂ ಕಾಪು ಶಾಲೆಗಳಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಅಳಿಕೆಯಲ್ಲಿ ಪಿಯುಸಿ, ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್‌ ಪದವಿ ಪಡೆದರು. ಸಿಇಟಿ ಎಂಜಿನಿಯರಿಂಗ್‌ ವಿಭಾಗದಲ್ಲಿ ಮೊದಲ ರ್‍ಯಾಂಕ್‌, ವೈದ್ಯಕೀಯದಲ್ಲಿ 26ನೇ ರ್‍ಯಾಂಕ್‌ ಗಳಿಸಿದ ಪ್ರತಿಭಾವಂತರು.

ಇದನ್ನೂ ಓದಿ:ಡಿಕೆಶಿ ಅಕ್ರಮ ಹಣ ಗಳಿಕೆಯಲ್ಲಿ ಕಾಂಗ್ರೆಸ್ ನಾಯಕರಿಗೂ ಪಾಲು ಇದೆಯಾ? ನಳಿನ್ ಕಟೀಲ್ ಪ್ರಶ್ನೆ

Advertisement

Udayavani is now on Telegram. Click here to join our channel and stay updated with the latest news.

Next