Advertisement

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

03:22 AM Nov 18, 2024 | Team Udayavani |

ಉಡುಪಿ: ಯಕ್ಷಗಾನ ಕೇವಲ ಕಲೆಯಾಗಿ ಉಳಿದಿಲ್ಲ. ಸಮಾಜವನ್ನು ತಿದ್ದಿ, ಕಟ್ಟಿ, ಬೆಳೆಸುವಲ್ಲಿ ಯಕ್ಷಗಾನದ ಪ್ರಭಾವ ಅಪರಿಮಿತ. ಆಚಾರ-ವಿಚಾರ, ನಡೆ-ನುಡಿ ಹೇಗೆ ಬಾಳಬೇಕೆಂಬುದನ್ನು ಯಕ್ಷಗಾನ ಕಲಿಸುತ್ತದೆ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ನುಡಿದರು.

Advertisement

ಯಕ್ಷಗಾನ ಕಲಾರಂಗದ ಇನ್ಫೋಸಿಸ್‌ ಫೌಂಡೇಶನ್‌ ಯಕ್ಷಗಾನ ಡೆವಲಪ್‌ಮೆಂಟ್‌, ಟ್ರೈನಿಂಗ್‌ ರಿಸರ್ಚ್‌ ಸೆಂಟರ್‌ನಲ್ಲಿ ನಡೆದ ಸಮಾರಂಭದಲ್ಲಿ ಅವರು 23 ಕಲಾವಿದರಿಗೆ ಪ್ರಶಸ್ತಿ ಪ್ರದಾನ ಮಾಡಿ ಅನುಗ್ರಹ ಸಂದೇಶ ನೀಡಿದರು. ಆರ್‌.ಎಲ್‌. ಭಟ್‌, ವಾರಿಜಾಕ್ಷಿ ಆರ್‌. ಭಟ್‌ ಗೌರವಾರ್ಥ ನಿರ್ಮಿಸಿದ ಪ್ರಸಾಧನ ಕೊಠಡಿಯನ್ನು ಶ್ರೀಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್‌ ಉದ್ಘಾಟಿಸಿದರು.

ಶಾಸಕ ಯಶ್‌ಪಾಲ್‌ ಎ. ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಯಕ್ಷ ವಿದ್ಯಾಪೋಷಕ್‌ 75 ವಿದ್ಯಾರ್ಥಿಗಳಿಗೆ 6,42,000 ರೂ. ಸಹಾಯಧನವನ್ನು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ| ತಲ್ಲೂರು ಶಿವರಾಮ ಶೆಟ್ಟಿ ವಿತರಿಸಿದರು. ಬೆಂಗಳೂರು ಟೆಕ್ಸೆಲ್‌ ಪ್ರೈ. ಲಿ. ಆಡಳಿತ ನಿರ್ದೇಶಕ ಹರೀಶ್‌ ರಾಯರ್‌, ಉದ್ಯಮಿ ಕೆ. ಸದಾಶಿವ ಭಟ್‌, ಪೆನ್‌ಟಾಯರ್‌ ಯುಎಸ್‌ಎ ಜಿಎಂ ಹರಿಪ್ರಸಾದ್‌ ಭಟ್‌, ಮಟಪಾಡಿಯ ಎಂ.ಸಿ. ಕಲ್ಕೂರ, ತೆಕ್ಕಟ್ಟೆ ಯಶಸ್ವಿ ಕಲಾವೃಂದ ಅಧ್ಯಕ್ಷ ಸೀತಾರಾಮ ಶೆಟ್ಟಿ ಉಪಸ್ಥಿತರಿದ್ದರು. ಎಂ. ಗಂಗಾಧರ ರಾವ್‌ ಸ್ವಾಗತಿಸಿದರು. ನಾರಾಯಣ ಹೆಗ್ಗಡೆ ಪ್ರಶಸ್ತಿ ಪುರಸ್ಕೃತರ ಪಟ್ಟಿ ವಾಚಿಸಿದರು. ಮುರಲಿ ಕಡೆಕಾರ್‌ ನಿರೂಪಿಸಿದರು.

ಕಲಾವಿದರಿಗೆ ಪ್ರಶಸ್ತಿ ಪ್ರದಾನ
ಶ್ರೀ ವಿಶ್ವೇಶ ತೀರ್ಥ ಕಲಾರಂಗ ಪ್ರಶಸ್ತಿಯನ್ನು ತೆಕ್ಕಟ್ಟೆ ಕೊಮೆಯ ಯಶಸ್ವಿ ಕಲಾವೃಂದ, ಕೆ.ಗಣೇಶ್‌ ರಾವ್‌ಗೆ ಯಕ್ಷಚೇತನ ಪ್ರಶಸ್ತಿ ಪ್ರದಾನಿಸಲಾಯಿತು. ಯಕ್ಷಗಾನ ಕಲಾರಂಗ-2024ರ ಪ್ರಶಸ್ತಿಯನ್ನು ಹಿರಿಯ ಯಕ್ಷಗಾನ ಕಲಾವಿದರಾದ ಎಚ್‌. ನಾರಾಯಣ ಶೆಟ್ಟಿ ಕೊಳ್ಕೆಬೈಲು, ದೇವದಾಸ್‌ ರಾವ್‌ ಕೂಡ್ಲಿ, ಸುರೇಶ್‌ ಕುಪ್ಪೆಪದವು, ಪುರಂದರ ಹೆಗಡೆ ನಾಗರಕೊಡಿಗೆ, ಗುಂಡಿಬೈಲು ನಾರಾಯಣ ಭಟ್‌ ಕೆಕ್ಯಾರ್‌, ಸರಪಾಡಿ ಅಶೋಕ ಶೆಟ್ಟಿ, ಕಿಗ್ಗ ಹಿರಿಯಣ್ಣ ಆಚಾರ್ಯ ಚಿಟ್‌ಗುಳಿ, ಥಂಡಿಮನೆ ಶ್ರೀಪಾದ ಭಟ್‌, ಮೊಗೆಬೆಟ್ಟು ಹೆರಿಯ ನಾಯ್ಕ, ತೊಡಿಕ್ಕಾನ ಕೆ. ಬಾಬು ಗೌಡ. ಹಾಲಾಡಿ ಕೃಷ್ಣ ಮರಕಾಲ, ಚಕ್ರ ಮೈದಾನ ಕೃಷ್ಣ ಪೂಜಾರಿ, ಹಾವಂಜೆ ಮಂಜುನಾಥ ರಾವ್‌, ಹೆರಂಜಾಲು ಗೋಪಾಲ ಗಾಣಿಗ, ಚೇರ್ಕಾಡಿ ರಾಧಾಕೃಷ್ಣ ನಾಯ್ಕ, ಶೇಣಿ ಸುಬ್ರಹ್ಮಣ್ಯ ಭಟ್‌, ಸರಪಾಡಿ ಶಂಕರನಾರಾಯಣ ಕಾರಂತ, ಹೊಡಬಟ್ಟೆ ವೆಂಕಟರಾವ್‌ ಸೊರಬ, ಕಟೀಲು ರಮಾನಂದ ರಾವ್‌, ನರಸಿಂಹ ಮಡಿವಾಳ, ಅಂಬಾಪ್ರಸಾದ ಪಾತಾಳ, ಗಜಾನನ ಸತ್ಯನಾರಾಯಣ ಭಂಡಾರಿ ಇವರಿಗೆ ನೀಡಿ ಪುರಸ್ಕರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next