Advertisement

ಉಡುಪಿ ವಿಶ್ವ ಬಂಟ ಸಮ್ಮಿಲನ-2018 ಬಂಟರ ಭವನದಲ್ಲಿ ಪೂರ್ವಭಾವಿ ಸಭೆ

03:52 PM Aug 12, 2018 | |

ಮುಂಬಯಿ: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಸೆಪ್ಟೆಂಬರ್‌ 9 ರಂದು ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಗೃಹದ ಶ್ರೀಮತಿ ಶಶಿರೇಖಾ ಆನಂದ ಶೆಟ್ಟಿ ವೇದಿಕೆಯಲ್ಲಿ ನಡೆಯಲಿರುವ ಒಂದು ದಿನದ ವಿಶ್ವ  ಬಂಟರ ಸಮ್ಮೇಳನದ ಸಿದ್ಧತೆಗಾಗಿ  ಮುಂಬಯಿ  ಸಮಿತಿಯ ಪೂರ್ವಭಾವಿ ಸಭೆಯು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಆ.  10 ರಂದು  ಸಂಜೆ ಕುರ್ಲಾ ಪೂವ‌ìದ  ಬಂಟರ ಭವನದ ಶ್ರೀಮತಿ ರಂಜನಿ ಸುಧಾಕರ ಎಸ್‌.ಹೆಗ್ಡೆ (ತುಂಗಾ) ಸಂಕೀರ್ಣದ ಶ್ರೀಮತಿ ವಿಜಯಲಕ್ಷ್ಮೀ ಮಹೇಶ್‌ ಶೆಟ್ಟಿ (ಬಾಬಾಸ್‌)  ಹವಾನಿಯಂತ್ರಿತ ಕಿರು ಸಭಾಗೃಹದಲ್ಲಿ ಜರಗಿತು.

Advertisement

ಈ ಸಂದರ್ಭದಲ್ಲಿ  ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿಯವರು ಮಾತನಾಡಿ,  ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪುನರ್ಭವಕ್ಕೆ  ನನಗೆ ಎಲ್ಲಾ ರೀತಿಯಲ್ಲಿ ವಿಶೇಷ ಪ್ರೋತ್ಸಾಹ – ಸಹಕಾರ ನೀಡಿದ ಮುಂಬಯಿ ಬಂಟರ ಪ್ರೀತಿ, ವಿಶ್ವಾಸ  ಹಾಗೂ ಹೃದಯ ಶ್ರೀಮಂತಿಕೆಯನ್ನು  ನಾನೆಂದೂ ಮರೆಯುವ ಹಾಗಿಲ್ಲ, ಯಾವುದೇ ಉತ್ತಮ ಕಾರ್ಯ ಯೋಜನೆಗಳಾದಾಗ ದಾನಿಗಳು ಖಂಡಿತಾ ಸಹಕರಿಸುತ್ತಾರೆಂಬುದನ್ನು ಕಳೆದ ಹಲವಾರು ವರ್ಷಗಳ ಅನುಭವದಿಂದ ನಾನು ಕಂಡುಕೊಂಡಿದ್ದೇನೆ. ಬಂಟ ಸಮೂದಾಯದಲ್ಲಿ ಅದರಲ್ಲೂ ಹಳ್ಳಿ ಪ್ರದೇಶನಗಳಲ್ಲಿ ಆರ್ಥಿಕವಾಗಿ ತೀರಾ ಶೋಚನೀಯ ಪರಿಸ್ಥಿತಿಯಲ್ಲಿರುವ  ಸಮಾಜ ಬಾಂಧವರ ಸಂಕಷ್ಟಗಳಿಗೆ ಪರಿಹಾರ ಒದಗಲಿಸುವ ಉದ್ದೇಶದಿಂದ ಒಕ್ಕೂಟವು ಈಗಾಗಲೇ ಸೇವಾ ಕಾರ್ಯಗಳನ್ನು ಆರಂಭಿಸಿದ್ದು, ಬಂಟ ಮಹಾದಾನಿಗಳು  ಮಹಾಪೋಷಕರಾಗಿ, ಪೋಷಕರಾಗಿ  ಒಕ್ಕೂಟ ದೊಂದಿಗೆ ಸಹರಿಸುತ್ತಿದ್ದಾರೆ.  ಒಕ್ಕೂಟದ ಪ್ರತಿಯೊಂದು ಯೋಜನೆಯ ಪಾರದರ್ಶಕವಾಗಿ  ಕಾರ್ಯನಿರ್ವಹಿಸಲು ಪದಾಧಿಕಾರಿಗಳು, ಮಹಾಪೋಷಕರು, ಪೋಷಕರು. ಸದಸ್ಯರು ಹಾಗೂ ಇತರ ಸಮಿತಿಗಳನ್ನೊಳಗೊಂಡು  ಅಪಾರವಾಗಿ ಶ್ರಮಿಸುತ್ತಿದೆ. ಸೆಪ್ಟಂಬರ್‌ 9 ರಂದು ಉಡುಪಿಯಲ್ಲಿ ನಡೆಯಲಿರುವ ವಿಶ್ವ ಬಂಟರ ಸಮ್ಮಿಲನದ ಬಗ್ಗೆ  ಪ್ರಸ್ತಾಪಿಸಿ, ಸಮ್ಮಿಲನದ ಯಶಸ್ಸಿಗೆ ಮುಂಬಯಿ ಬಂಟರು ಒಕ್ಕೂಟ ದೊಂದಿಗೆ ಕೈ ಜೋಡಿಸುವರೆಂಬ ವಿಶ್ವಾಸ ನನಗಿದೆ. ಸುಮಾರು ಇಪ್ಪತ್ತು ಸಾವಿರಕ್ಕೂ ಹೆಚ್ಚು ಬಂಟರು ವಿಶ್ವ ಸಮ್ಮಿಲನದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ದೇಶ ವಿದೇಶ‌ಗಳಿಂದ  ಸಮಾಜದ ನಾಯಕರು, ಹಿರಿಯ – ಕಿರಿಯ ಉದ್ಯಮಿಗಳು, ವಿವಿಧ ಕ್ಷೇತ್ರಗಳಲ್ಲಿನ  ಗಣನೀಯ  ಸಾಧಕ ಬಂಟರು ಆಗಮಿಸಲಿದ್ದಾರೆ. ಬಂಟರ ಈ ವಿಶ್ವ ಸಮ್ಮಿàಲನದಲ್ಲಿ  ಸಮಾಜದ ಸಾಂಘಿಕ  ಶಕ್ತಿಯ ಪ್ರದರ್ಶನವಾಗಬೇಕು. ಬಂಟರಲ್ಲಿರುವ  ಒಗ್ಗಟ್ಟು ಬಂಟರ  ವಿಶ್ವ  ಭಾÅತೃತ್ವಕ್ಕೆ  ಸಮ್ಮೇಳ  ಸಾಕ್ಷಿಯಾ ಗಬೇಕು. ಸಮ್ಮೇಳನದಲ್ಲಿ ಕರ್ನಾಟಕದ  ಮುಖ್ಯ ಮಂತ್ರಿ  ಮಾನ್ಯ ಕುಮಾರಸ್ವಾಮಿ, ಕರ್ನಾಟಕದ ಮಾಜಿ ಲೋಕಾಯುಕ್ತ ಸುಪ್ರೀಂ ಕೋರ್ಟಿನ  ನಿವೃತ್ತ ನ್ಯಾಯಾಧೀಶ  ಸಂತೋಷ್‌ಕುಮಾರ್‌  ಹೆಗ್ಡೆ,  ಬಂಟರ ಸಂಘ ಮಂಗಳೂರು  ಮಾತೃ ಸಂಘದ ಅಧ್ಯಕ್ಷ  ಅಜಿತ್‌ಕುಮಾರ್‌ ರೈ,  ಧಾರ್ಮಿಕ ಕ್ಷೇತ್ರದ ದಿಗ್ಗಜರು, ಚಲನಚಿತ್ರ  ನಟ – ನಟಿಯರು, ಕ್ರೀಡಾ ಸಾಧಕರು ಆಗಮಿಸಲಿರುವ ಈ ಸಮ್ಮೇಲನದಲ್ಲಿ  ಸುಮಾರು 20 ಮಂದಿ ಅತಿ ಹಿರಿಯ ಬಂಟ ಸಾಧಕರನ್ನು ಸಮ್ಮಾನಿಸಲಾಗುವುದು. ಸುಮಾರು  5 ಸಭಾ ಕಾರ್ಯಕ್ರಮ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ ಎಂದು ನುಡಿದು ಎಲ್ಲರ ಸಹಕಾರ ಬಯಸಿದರು.

ಇದೇ ಸಂದರ್ಭದಲ್ಲಿ ವಿಶ್ವ ಬಂಟರ ಸಮ್ಮೇಳನದ ಕಾರ್ಯಕ್ರಮದ ಸಲಹಾ ಸಮಿತಿಯ  ಕಾರ್ಯಾಧ್ಯಕ್ಷರನ್ನಾಗಿ ಕರ್ನಿರೆ ವಿಶ್ವನಾಥ್‌ ಶೆಟ್ಟಿ. ಕಾರ್ಯಕ್ರಮ ಸಮಿತಿ ಕೋಶಾಧಿಕಾರಿಯನ್ನಾಗಿ ಉಳೂ¤ರು ಮೋಹನ್‌ದಾಸ್‌ ಶೆಟ್ಟಿ, ಸಂಘಟ ಕರನ್ನಾಗಿ ರತ್ನಾಕರ ಶೆಟ್ಟಿ ಮುಂಡ್ಕೂರು, ಸ್ವಾಗತ ಸಮಿತಿ ಕಾರ್ಯಾಧ್ಯಕ್ಷರನ್ನಾಗಿ ದಿವಾಕರ ಶೆಟ್ಟಿ ಇಂದ್ರಾಳಿ ಇವರನ್ನು  ಆಯ್ಕೆ ಮಾಡಲಾಯಿತು.

ಅತಿಥಿ ಉಪಚಾರ ಸಮಿತಿಯ ಕಾರ್ಯಾಧ್ಯಕ್ಷರುಗಳಾಗಿ ಗೌತಮ್‌ ಎಸ್‌. ಶೆಟ್ಟಿ, ಶಿವಪ್ರಸಾದ್‌ ಶೆಟ್ಟಿ, ಆಸನ ವ್ಯವಸ್ಥೆಯ ಮುಖ್ಯಸ್ಥರಾಗಿ  ವಿಠuಲ್‌ ಎಸ್‌. ಆಳ್ವ,  ಯುವ ವಿಭಾಗದ ಮುಖ್ಯಸ್ಥರಾಗಿ ಗಿರೀಶ್‌ ಶೆಟ್ಟಿ ತೆಳ್ಳಾರ್‌, ಮಹಿಳಾ ವಿಭಾಗದ ಮುಖ್ಯಸ್ಥೆಯಾಗಿ ರಂಜನಿ ಎಸ್‌. ಹೆಗ್ಡೆ, ಕಾರ್ಯಕ್ರಮ ನಿರ್ವಹಣೆಯ ಮುಖ್ಯಸ್ಥರಾಗಿ ಅಶೋಕ್‌ ಪಕ್ಕಳ,  ಸಹಾಯಕರಾಗಿ ಕರ್ನೂರು ಮೋಹನ್‌ ರೈ, ದಯಾಸಾಗರ ಚೌಟ, ಪತ್ರಿಕಾ ಪ್ರಚಾರದ ಮುಖ್ಯಸ್ಥರಾಗಿ  ಪ್ರೇಮ್‌ನಾಥ್‌ ಮುಂಡ್ಕೂರು, ಗುರುದತ್ತ್ ಪೂಂಜ ಮುಂಡ್ಕೂರು ಅವರು ನೇಮಕಗೊಂಡರು.

ಸಮ್ಮೇಳನದ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಇಂದ್ರಾಳಿ ದಿವಾಕರ ಶೆಟ್ಟಿ ಅವರು ಮಾತನಾಡಿ, ಈ ಹಿಂದೆ ಐಕಳ ಹರೀಶ್‌ ಶೆಟ್ಟಿ ಅವರ ನೇತೃತ್ವದಲ್ಲಿ ಮುಂಬಯಿಯಲ್ಲಿ ಬಂಟ ವಿಶ್ವ ಸಮ್ಮಿಲನ ಆದಾಗಲೂ ಸ್ವಾಗತ ಸಮಿತಿಯ ಜವಾಬ್ದಾರಿಯನ್ನು ನನಗೆ ವಹಿಸಿದ್ದರು. ಆಗಲೂ ನಾನು ಆತ್ಮ ವಿಶ್ವಾಸದಿಂದ ಕಾರ್ಯನಿರ್ವಹಿಸಿದ್ದೇನೆ ಎಂಬ ತೃಪ್ತಿ ನನ್ನಲ್ಲಿದೆ. ಈಗಲೂ ಆ ಹೊಣೆ ನನ್ನ ಮೇಲೆ ಹೊರಿಸಿದ್ದಾರೆ. ಇದನ್ನು ಯಶಸ್ವಿಯಾಗಿ ನಿರ್ವಹಿಸುತ್ತೇನೆ ಎಂದು ಭರವಸೆ ನೀಡುತ್ತೇನೆ. ಉಡುಪಿಯವೇ ಆಗಿರುವುದರಿಂದ ಈ ಜವಾಬ್ದಾರಿ ನನಗೆ ಸಂತಸ ತಂದಿದೆ. ಸ್ವಾಗತ ಸಮಿತಿಯಲ್ಲಿ ಸುಮಾರು 100 ಮಂದಿಯನ್ನು ಸೇರಿಸಿಕೊಂಡು ಕಾರ್ಯಪ್ರವೃತ್ತನಾಗುತ್ತೇನೆ ಎಂದರು.

Advertisement

ಯುವ ವಿಭಾಗದ ಸಮನ್ವಯಕ ಗಿರೀಶ್‌ ಶೆಟ್ಟಿ ತೆಳ್ಳಾರ್‌ ಅವರು ಮಾತನಾಡಿ, ಪ್ರತಿಯೊಬ್ಬ ಬಂಟರು ಸಮ್ಮಿಲನದಲ್ಲಿ ಭಾಗವಹಿಸುವ ಮೂಲಕ ತಮ್ಮ ಜವಾಬ್ದಾರಿ ಹಾಗೂ ಕರ್ತವ್ಯದ ಪಾಲನೆ ಮಾಡಬೇಕು. ವಿಶ್ವ ಬಂಟರ ಸಮ್ಮಿಲನದಲ್ಲಿ ಬಂಟ ಯುವಶಕ್ತಿಯನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಪ್ರಯತ್ನಿಸುವುದಾಗಿ ತಿಳಿಸಿದರು. ಸಭಿಕರ ಪರವಾಗಿ ವಸಂತ್‌ ಶೆಟ್ಟಿ ಪಲಿಮಾರು ಮಾತನಾಡಿ, ಮುಂಬಯಿ ಬಂಟರಿಗೆ ತಮ್ಮ ಶಕ್ತಿಯನ್ನು ತೋರಿಸುವ ಒಂದು ಅವಕಾಶ ದೊರೆತಿದೆ. ಸಮ್ಮಿಲನವನ್ನು ಯಶಸ್ವಿಯಾಗಿಸಲು ಊರಿನಲ್ಲೆಡೆ ಬ್ಯಾನರ್‌ ಹಾಕಿ ಪ್ರಚಾರ ಮಾಡೋಣ ಎಂದರು.ಸಿಎ ಸದಾಶಿವ ಶೆಟ್ಟಿ ಅವರು ಮಾತನಾಡಿ, ಐಕಳ ಹರೀಶ್‌ ಶೆಟ್ಟಿ ಅವರು ಯಾವುದೇ ಕಾರ್ಯಕ್ಕೆ ಇಳಿದರೂ ಅದು ಯಶಸ್ವಿಯಾಗುತ್ತದೆ ಎಂಬ ವಿಶ್ವಾಸವಿದೆ. ಅವರ ಈ ಕಾರ್ಯಕ್ಕೆ ಹೆಚ್ಚಿನ ನಿಧಿ ಸಂಗ್ರಹಿಸಲು ನಾವೆಲ್ಲರು ಪ್ರಯತ್ನಿಸೋಣ ಎಂದು ವಿನಂತಿಸಿದರು.

ಕರುಣಾಕರ ಶೆಟ್ಟಿ ಕಲ್ಲಡ್ಕ ಡೊಂಬಿವಲಿ ಇವರು ಮಾತನಾಡಿ, ಊರಿನಲ್ಲಿರುವ ಧಾರ್ಮಿಕ ಸ್ಥಳಗಳಲ್ಲಿ ಬ್ಯಾನರ್‌ ಹಾಕಲು ಮುಂದಾಗೋಣ. ಐಕಳ ಹರೀಶ್‌ ಶೆಟ್ಟಿ ಅವರ ನೇತೃತ್ವದ ವಿಶ್ವ ಬಂಟರ ಸಮ್ಮಿಲನ ಅಭೂತಪೂರ್ವ ಯಶಸ್ಸು ಕಾಣಲಿ ಎಂದು ಹಾರೈಸಿದರು. ಬಂಟರವಾಣಿಯ ಗೌರವ ಸಂಪಾದಕ ಅಶೋಕ್‌ ಪಕ್ಕಳ ಕಾರ್ಯಕ್ರಮ ನಿರ್ವಹಿಸಿದರು. ಕೋಶಾಧಿಕಾರಿ ಉಳೂ¤ರು ಮೋಹನ್‌ದಾಸ್‌ ಶೆಟ್ಟಿ ವಂದಿಸಿದರು. 

ಜಾಗತಿಕ ಬಂಟರ ಸಂಘಗಳ  ಒಕ್ಕೂಟದ ಕಾರ್ಯ ಯೋಜನೆಗೆ ನೀಡುವ ದೇಣಿಗೆ ಆದಾಯ ತೆರಿಗೆಯ 80 ಜಿ ಸೌಲಭ್ಯವನ್ನು ಹೊಂದಿ ದ್ದೇವೆ. ಐಕಳ ಹರೀಶ್‌ ಶೆಟ್ಟಿಯವರು ಜನತಾ ಸೇವೆಯೇ ಜನಾರ್ಧನ ಸೇವೆ ಎಂದು ನಂಬಿದವರು. ಅವರೊಂದಿಗೆ ಸೇವೆ ಮಾಡು ವುದೆಂದರೆ  ಒಂದು ರೀತಿಯ ಉಲ್ಲಾಸ, ತೃಪ್ತಿ ಸಿಗುತ್ತದೆ. ಬಂಟರ ವಿಶ್ವ ಸಮ್ಮೇಳನದಿಂದ  ಐತಿಹಾಸಿಕ ದಾಖಲೆ ನಿರ್ಮಾಣವಾಗಲಿ
-ಉಳೂ¤ರು ಮೋಹನ್‌ದಾಸ್‌ ಶೆಟ್ಟಿ, 
ಕೋಶಾಧಿಕಾರಿ: ಸಮ್ಮಿಲನ ಕಾರ್ಯಕ್ರಮ ಸಮಿತಿ

ಬಂಟರ ವಿಶ್ವ ಸಮ್ಮಿಲನಕ್ಕೆ  ಮುಂಬಯಿಯ ಪ್ರತಿಯೊಂದು  ಬಂಟ ನಾಯಕರ‌  ಅಗತ್ಯವಿದ್ದು, ನಾಯಕತ್ವ ವಹಿಸಲಿಚ್ಚಿಸುವವರು ಕಡಿಮೆ ಎಂದರೂ ಸುಮಾರು 100 ಬಂಟ ತಂಡದ  ನೇತೃತ್ವ  ವಹಿಸಬೇಕು.  ಸಂಘಟಕ, ಸಮಾಜ ಸೇವಕ  ಐಕಳ  ಹರೀಶ್‌ ಶೆಟ್ಟಿ  ಅವರೊಂದಿಗೆ  ಹಿಂದಿನಿಂದಲೂ ಸೇವೆ ಮಾಡಿ ಅನುಭವ ಪಡೆದಿದ್ದೇನೆ. ಅವರೊಂದಿಗೆ  ಕಾರ್ಯ ನಿರ್ವಹಿಸುವುದೆಂದರೆ ಒಂದು ಕಡೆ ಸಂತಸ, ಇನ್ನೊಂದೆಡೆ  ಭಯವೂ ಆವರಿಸುತ್ತದೆ. ಸಮಾಜ ಸೇವೆಗಾಗಿ ತನ್ನ ಉದ್ಯಮವನ್ನೇ ಬದಿಗಿಟ್ಟು ಸೇವೆ ಮಾಡುವ  ಅವರೂಪದ ವ್ಯಕ್ತಿ ಐಕಳರಾಗಿದ್ದಾರೆ. ಅವರ ಉದಾರತೆ,  ಸೇವಾ ಕುಶಲತೆ ಇತರರಿಗೆ ಮಾದರಿಯಾಗಿದೆ
-ರತ್ನಾಕರ ಶೆಟ್ಟಿ ಮುಂಡ್ಕೂರು , 
ಸಂಘಟಕರು:ವಿಶ್ವ ಬಂಟ ಸಮ್ಮಿಲನ ಉಡುಪಿ

ಸುಮಾರು 16 ವರ್ಷಗಳ ಬಳಿಕ ಇದೀಗ  ಬೃಹತ್‌ ಮಟ್ಟದ ವಿಶ್ವ ಬಂಟರ ಸಮ್ಮೇಳನ – 2018 ರ ಸಂಭ್ರಮ ವೇದಿಕೆ ಸಜ್ಜಾಗುತ್ತಿದೆ. ಐಕಳರು ಒಕ್ಕೂಟದ  ಅಧ್ಯಕ್ಷರಾದ  ಬಳಿಕ ಇದೇ ಮೊದಲ ಬಾರಿಗೆ ವಿಶ್ವದ ಬಂಟರನ್ನು  ಸಂಘಟಿಸುವ  ಜೊತೆಗೆ ಬಂಟರ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಅದಕ್ಕೆ  ನಾವೆಲ್ಲರೂ ಅವರೊಂದಿಗೆ  ಕೈಜೋಡಿಸಬೇಕು. ಊರಿನಲ್ಲಿಯೂ ಜನತಾ ಸೇವೆ ಮಾಡುಲಿಚ್ಚಿಸುವ  ಯುವಕರಿದ್ದಾರೆ. ಆದರೆ ಅವರಿಗೆ ಅಲ್ಲಿ ನಿರ್ದಿಷ್ಟವಾದ  ಅಡಿಪಾಯವಿಲ್ಲ. ಒಕ್ಕೂಟದ ಧ್ವಜದಡಿಯಲ್ಲಿ  ಸೇವೆಗೆ  ಅವಕಾಶ ಕಲ್ಪಿಸಿಕೊಡಬೇಕು.  ವಿಶ್ವಬಂಟರ ಸಮ್ಮಿಲನಕ್ಕೆ ಮುಂಬಯಿಯಿಂದ ಸುಮಾರು ಒಂದು ಸಾವಿರ  ಬಂಟರು ಸೇರುವ ನಿರೀಕ್ಷೆಯಿದೆೆ
-ಕರ್ನಿರೆ ವಿಶ್ವನಾಥ್‌ ಶೆಟ್ಟಿ , 
ಕಾರ್ಯಾಧ್ಯಕ್ಷರು : ಸಲಹಾ ಸಮಿತಿ ವಿಶ್ವ ಬಂಟರ ಸಮ್ಮಿಲನ ಉಡುಪಿ

ಚಿತ್ರ-ವರದಿ : ಪ್ರೇಮನಾಥ್‌ ಶೆಟ್ಟಿ ಮುಂಡ್ಕೂರು.

Advertisement

Udayavani is now on Telegram. Click here to join our channel and stay updated with the latest news.

Next