Advertisement

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

01:16 AM Dec 23, 2024 | Team Udayavani |

ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀ ಕೃಷ್ಣಮಠದಲ್ಲಿ ರವಿವಾರ ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಯುವ ಗೀತೋತ್ಸವ ನಡೆಯಿತು. ಯುವ ಸಾಹಿತಿ, ಸಂಶೋಧಕರು ಗೀತೆಯ ಮಹತ್ವವನ್ನು ವಿಶ್ಲೇಷಿಸಿದರು.

Advertisement

ಆಧುನಿಕ ಯುಗದ ಒತ್ತಡ- ಸಮಸ್ಯೆಗಳಿಗೆ ಪರಿಹಾರ, ವಿದ್ಯಾ ಭ್ಯಾಸದ ಗೊಂದಲಗಳಿಗೆ ಉತ್ತರ, ಹದಿಹರೆಯದವರ ಮಾನಸಿಕ ತಲ್ಲಣಗಳಿಗೆ ಸಮಾಧಾನ, ಯುವ ಜನರ ಬದುಕಿಗೆ ಭಗವದ್ಗೀತೆಯ ಭರವಸೆಯ ಬೆಳಕಿನ ಆಶಯ ದೊಂದಿಗೆ ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಭಗವದ್ಗೀತೆ ಕುರಿತ ಕಾರ್ಯಾಗಾರ ನಡೆಯಿತು.

ವಿದ್ವಾನ್‌ ಕೃಷ್ಣರಾಜ ಕುತ್ಪಾಡಿ ಅವರು ಮಾತನಾಡಿ ಶಾಸ್ತ್ರಗಳಲ್ಲಿ ಸಾರಭೂತವಾದದ್ದು ಮಹಾಭಾರತ. ಸಮಸ್ತ ಶಾಸ್ತ್ರಗಳ ಸಾರವಾಗಿದೆ. ಅಧ್ಯಯನ ಶೀಲರಿಗೆ ಬೇಕಿರುವ ಹಲವು ಎಚ್ಚರಿಕೆಯನ್ನು ಗೀತೆ ನೀಡುತ್ತದೆ. ಗೀತೆಯ ಅಭ್ಯಾಸದಿಂದ ಹಲವು ಉಪಯೋಗವಿದೆ ಎಂದು ಹೇಳಿದರು.

ಡಾ| ವಿಶ್ವನಾಥ ಸುಂಕಸಾಳ, ನಚಿಕೇತ್‌ ಹೆಗಡೆ, ಡಾ| ನವೀನ್‌ ಗಂಗೋತ್ರಿ ಭಗವದ್ಗೀತೆಯ ಕುರಿತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಕಾರ್ಯಾ ಗಾರ ನಡೆಸಿಕೊಟ್ಟರು. ರೋಹಿತ್‌ ಚಕ್ರತೀರ್ಥ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next