Advertisement
ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಪರ್ಯಾಯ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಕಿರಿಯ ಶ್ರೀ ಸುಶೀಂದ್ರತೀರ್ಥ ಶ್ರೀಪಾದರು ಪುಸ್ತಕ ಬಿಡುಗಡೆಗೊಳಿಸುವರು.
Related Articles
ಮಠದ ದಿವಾನರಾದ ನಾಗರಾಜ ಆಚಾರ್ಯ ಮಾತನಾಡಿ, ಬೃಹತ್ ಗೀತೋ ತ್ಸವದ ಪ್ರಯುಕ್ತ ಡಿ.18ರಿಂದ 31ರ ವರೆಗೆ ರಾಜಾಂಗಣದಲ್ಲಿ ಕೈಮಗ್ಗ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದೆ ಎಂದರು.ಮಠದ ಪ್ರಮುಖರಾದ ಪ್ರಮೋದ್ ಸಾಗರ್ ಮಾತ ನಾಡಿ, ಡಿ.22ರಂದು ಬೆಳಗ್ಗೆ 9.30ರಿಂದ ಸಂಜೆ 5ರವರೆಗೆ ರಾಜಾಂಗಣದಲ್ಲಿ ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿ ಗಳಿಗೆ ಕಾರ್ಯಾಗಾರ “ಯುವ ಗೀತೋತ್ಸವ’ ನಡೆಯಲಿದೆ.
Advertisement
ಖ್ಯಾತ ವಿದ್ವಾಂಸರಾದ ವಿದ್ವಾನ್ ಕೃಷ್ಣರಾಜ ಕುತ್ಪಾಡಿ, ಡಾ| ವಿಶ್ವನಾಥ ಸುಂಕಸಾಳ, ರೋಹಿತ್ ಚಕ್ರತೀರ್ಥ, ಸಚಿಕೇತ್ ಹೆಗಡೆ, ಡಾ| ನವೀನ್ ಗಂಗೋತ್ರಿ ಭಾಗವಹಿಸುವರು ಎಂದರು. ಎಂಜಿಎಂ ಕಾಲೇಜು ನಿವೃತ್ತ ಪ್ರಾಂಶುಪಾಲ ಡಾ| ಎಂ.ಜಿ.ವಿಜಯ್, ಮಠದ ಪ್ರಮುಖರಾದ ರಮೇಶ್ ಭಟ್ ಉಪಸ್ಥಿತರಿದ್ದರು.