Advertisement

Udupi ಮಹಿಳೆಗೆ ಲಕ್ಷಾಂತರ ರೂಪಾಯಿ ವಂಚನೆ

12:04 AM Sep 12, 2023 | Team Udayavani |

ಉಡುಪಿ: ಒಎಲ್‌ಎಕ್ಸ್‌ ಮೂಲಕ ಮಹಿಳೆಯೊಬ್ಬರ ಖಾತೆಯಿಂದ ಲಕ್ಷಾಂತರ ರೂ. ವರ್ಗಾಯಿಸಿಕೊಂಡ ಘಟನೆ ನಡೆದಿದೆ.

Advertisement

ಉಷಾಕಿರಣ್‌ ಅವರು ಒಎಲ್‌ಎಕ್ಸ್‌ನಲ್ಲಿ ಸೊತ್ತುಗಳ ಮಾರಾಟದ ಬಗ್ಗೆ ಮಾಹಿತಿ ಹಾಕಿದ್ದರು. ಈ ವೇಳೆ ವ್ಯಕ್ತಿಯೊಬ್ಬ ಸೊತ್ತುಗಳನ್ನು ಖರೀದಿಸುವುದಾಗಿ ತಿಳಿಸಿ ಮೊಬೈಲ್‌ ನಂಬರ್‌ ಪಡೆದುಕೊಂಡಿದ್ದ. ಬಳಿಕ ಮಹಿಳೆಯೊಬ್ಬರು ಕರೆ ಮಾಡಿ ಸೊತ್ತುಗಳನ್ನು ಖರೀದಿಸಲು ತನ್ನಲ್ಲಿ ನಗದು ಹಣವಿಲ್ಲ. ಗೂಗಲ್‌ ಪೇ ಮೂಲಕ ಪಾವತಿ ಮಾಡುವಂತೆ ತಿಳಿಸಿದ್ದರು.

ಬಳಿಕ ಉಷಾಕಿರಣ್‌ ಅವರ ಮೊಬೈಲ್‌ಗೆ ಕೀಕೋಡ್‌ಗಳನ್ನು ಕಳುಹಿಸಿ ಅದನ್ನು ತೆರೆದಾಗ ಇವರ ಬ್ಯಾಂಕ್‌ ಖಾತೆಯಿಂದ 1,28,496ರೂ. ಬೇರೆ ಖಾತೆಗೆ ವರ್ಗಾವಣೆಯಾಗಿದೆ. ಸೆನ್‌ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next