ನಗರಸಭೆ -ಉದಯವಾಣಿ ಸ್ವಚ್ಛ ನಾಗರ ಪಂಚಮಿ ಅಭಿಯಾನ ಆರಂಭಿಸಿದ್ದು, ನಾಗರಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
Advertisement
ಸಾಮಾನ್ಯವಾಗಿ ನಾಗರ ಪಂಚಮಿ ಪೂಜೆ ಅನಂತರ ಎಳನೀರು, ಊದು ಬತ್ತಿಗಳ ಪ್ಲಾಸ್ಟಿಕ್ ಪೊಟ್ಟಣಗಳು ಅಲ್ಲಲ್ಲಿ ಬಿದ್ದಿರುತ್ತದೆ. ಇದು ಸೊಳ್ಳೆ ಉತ್ಪಾದನೆ ತಾಣಕ್ಕೂ ಕಾರಣವಾಗಬಹುದು ಎಂಬ ನಿಟ್ಟಿನಲ್ಲಿ ಅಭಿಯಾನ ಕೈಗೊಂಡಿದ್ದು, ಎಳನೀರು ಸಹಿತ ಇನ್ನಿತರ ತ್ಯಾಜ್ಯ ಸಂಗ್ರಹಕ್ಕೆ ನಗರಸಭೆ ವತಿಯಿಂದಲೇ ಸೂಕ್ತ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಈಗಾಗಲೇ ನಾಗಬನಗಳಪ್ರಮುಖರಿಂದ ನಗರಸಭೆ ಅಧಿಕಾರಿಗಳಿಗೆ, ಕಚೇರಿಗೆ ಸಾಕಷ್ಟು ಕರೆಗಳು ಬಂದಿವೆ. ಕಚೇರಿಗೆ ಖುದ್ದು ಆಗಮಿಸಿಯೂ ಮಾಹಿತಿ
ಪಡೆಯುತ್ತಿದ್ದಾರೆ.
ಗುರುತಿಸಲಾಗಿದೆ ಎಂದು ಪರಿಸರ ಎಂಜಿನಿಯರ್ ಸ್ನೇಹಾ ತಿಳಿಸಿದ್ದಾರೆ. ಈಗಾಗಲೆ ಒಟ್ಟು 68 ನಾಗಬನಗಳು ಗುರುತಿಸಲಾಗಿದ್ದು, ನಾಗಬನ ಪ್ರಮುಖರಿಂದ ಮತ್ತಷ್ಟು ಕರೆಗಳು ಬರುತ್ತಿವೆ. ಹಿಂದಿನ ದಿನವೇ ನಾಗಬನಗಳಲ್ಲಿ ಡಸ್ಟ್‌ಬಿನ್, ಮತ್ತು ಚೀಲಗಳನ್ನು ಪೂರೈಸಲಾಗುತ್ತದೆ. ಈ ಬಗ್ಗೆ ಮೂರು ವಲಯದ ಆರೋಗ್ಯ ನಿರೀಕ್ಷಕರಿಗೆ, ಸ್ವಚ್ಛತಾ ಸಿಬಂದಿಗೆ ಅಗತ್ಯ ಸೂಚನೆಗಳನ್ನು ನೀಡಲಾಗಿದೆ ಎಂದು ಪೌರಾಯುಕ್ತ ರಾಯಪ್ಪ ತಿಳಿಸಿದ್ದಾರೆ. ಸಾಲಿಗ್ರಾಮ ಪ.ಪಂ.: ಹೆಚ್ಚು ಭಕ್ತರು ಸೇರುವಲ್ಲಿ ಡ್ರಮ್, ಚೀಲ
ಕೋಟ: ನಾಗರ ಪಂಚಮಿ ಹಬ್ಬವನ್ನು ಶುಚಿತ್ವ ಕೇಂದ್ರವಾಗಿಸಿಕೊಂಡು ಸ್ವತ್ಛ ಪಂಚಮಿ ಹಬ್ಬವಾಗಿ ಆಚರಿಸಲು ಉದಯವಾಣಿ ನೀಡಿದ ನಾಗರ ಪಂಚಮಿ ಸ್ವತ್ಛ ಪಂಚಮಿ ಅಭಿಯಾನಕ್ಕೆ ಸಾಲಿಗ್ರಾಮ ಪಟ್ಟಣ ಪಂಚಾಯತ್ ಸಾಥ್ ನೀಡಿದೆ.
Related Articles
ನಾಗಬನಗಳಲ್ಲಿ ಭಕ್ತಿಯ ಜತೆಗೆ ಸ್ವಚ್ಛತೆಗೂ ಆದ್ಯತೆ ಬೇಕು. ಪ.ಪಂ. ವತಿಯಿಂದ ಅತೀ ಹೆಚ್ಚು ಭಕ್ತರು ಸೇರುವ ಒಂದಷ್ಟು ನಾಗಬನಗಳನ್ನು ಗುರುತಿಸಲಾಗಿದ್ದು, ಆ.8ರಂದು ಸಂಜೆಯೊಳಗೆ ಅವುಗಳಲ್ಲಿ ತ್ಯಾಜ್ಯ ಸಂಗ್ರಹಕ್ಕೆ ಡ್ರಮ್, ಚೀಲ ಇಡುವ ವ್ಯವಸ್ಥೆ ಮಾಡಲಾಗುತ್ತದೆ. ಇದನ್ನು ಹೊರತುಪಡಿಸಿ ಬೇರೆ ನಾಗಬನಗಳಲ್ಲಿ ಬೇಡಿಕೆ ಇದ್ದರೆ ಪ.ಪಂ. ಸಂಪರ್ಕಿಸಬಹುದು. ಅಲ್ಲದೆ ಕಸ
ಸಂಗ್ರಹಕ್ಕೆ ವ್ಯವಸ್ಥೆ ಮಾಡಿದರೆ ವಿಲೇವಾರಿಗೆ ಪ.ಪಂ. ಸಹಕಾರ ನೀಡಲಿದೆ ಎಂದು ಸಾಲಿಗ್ರಾಮ ಪ.ಪಂ. ಮುಖ್ಯಾಧಿಕಾರಿ ಶಿವ ನಾಯ್ಕ ತಿಳಿಸಿದ್ದಾರೆ.
Advertisement
ಸಂಪರ್ಕ*ಶಿವ ನಾಯ್ಕ, ಮುಖ್ಯಾಧಿಕಾರಿಗಳು-9945871473 *ಮಮತಾ, ಆರೋಗ್ಯಾಧಿಕಾರಿ- 9035627273