ಉಡುಪಿ: ನೂತನವಾಗಿ ಆರಂಭಗೊಳ್ಳಲಿರುವ ವೇದವಿತ್ ಪ.ಪೂ.ಕಾಲೇಜಿನಲ್ಲಿ “10ನೇ ತರಗತಿ ಬಳಿಕ ವಿದ್ಯಾರ್ಥಿಗಳಿಗೆ ಮುಂದೇನು?’ ಎಂಬುದರ ಆತಂಕ ನಿವಾರಿಸಲು ಅನುಭವಿ ಸಂಪನ್ಮೂಲ ವ್ಯಕ್ತಿಗಳಿಂದ ಶೈಕ್ಷಣಿಕ ಮಾಹಿತಿ ಕಾರ್ಯಾಗಾರ ನಡೆಯಿತು.
ತ್ರಿಶಾ ಕ್ಲಾಸಸ್‌ನ ಸ್ಥಾಪಕ ಸಿ.ಎ. ಗೋಪಾಲಕೃಷ್ಣ ಭಟ್, ಅಕ್ಷರ ಇನ್‌ಸ್ಟಿಟ್ಯೂಟ್‌ನ ಸ್ಥಾಪಕ ಪೃಥ್ವಿರಾಜ್ ಸಾಲ್ಯಾನ್, ಸಂಜನಾ ನಿಂಜೂರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಹನುಮಾನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪಿ. ವಿಲಾಸ್ ನಾಯಕ್, ಪಿ.ಜಿ. ನಾಯಕ್, ವೀಣಾ ಜಿ. ನಾಯಕ್ ಉಪಸ್ಥಿತರಿದ್ದರು.
ಈ ಕಾಲೇಜು ಹನುಮಾನ್ ಸಂಸ್ಥೆಯ ಭಾಗವಾದ ಹನುಮಾನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆಸಲಾಗುತ್ತಿದೆ. 21 ವರ್ಷಗಳಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವ ತ್ರಿಶಾ ಕ್ಲಾಸಸ್‌ನ ಶೈಕ್ಷಣಿಕ ಒಡಬಂಡಿಕೆಯೊಂದಿಗೆ ಸಂಸ್ಥೆ ಮುಂದಿನ ದಿನಗಳಲ್ಲಿ ಶೈಕ್ಷಣಿಕ ಚಟುವಟಿಕೆ ಆರಂಭಿಸಲಿದೆ.
ಕಾಲೇಜು ವಿಜ್ಞಾನ, ವಾಣಿಜ್ಯ ವಿಭಾಗಗಳನ್ನು ಹೊಂದಿದ್ದು ಹವಾನಿಯಂತ್ರಿತ ತರಗತಿ ಕೋಣೆಗಳು, ಸಾಮಾನ್ಯ ಮತ್ತು ಹವಾನಿಯಂತ್ರಿತ ವಸತಿ ನಿಲಯದ ವ್ಯವಸ್ಥೆಗಳಿವೆ.
ಅತ್ಯಾಧುನಿಕ ವ್ಯವಸ್ಥೆಯ ಲ್ಯಾಬೋರೇಟರಿ, ಗ್ರಂಥಾಲಯ, ಸೌಲಭ್ಯ ಹೊಂದಲಿದೆ. 2019-20ರ ಪ್ರವೇಶಾತಿ ಈಗಾಗಲೇ ಆರಂಭಗೊಂಡಿದೆ ಎಂದು ಪ್ರಕಟನೆ ತಿಳಿಸಿದೆ.