ಉಡುಪಿ : ವಾಹನದ ಬಾಕಿ ತೆರಿಗೆಯನ್ನು ಪಾವತಿಸದೆ/ವಿನಾಯಿತಿ ಯನ್ನು ಪಡೆಯದೆ ಹಾಗೂ ಪೂರ್ವನುಮತಿಯಿಲ್ಲದೆ ವಾಹನವನ್ನು ಸಾರ್ವ ಜನಿಕರ ಉಪಯೋಗಕ್ಕಾಗಿ ಬಳಸಿದ ಬಸ್ಸನ್ನು ಸಾರಿಗೆ ಇಲಾಖೆ ಮುಟ್ಟುಗೋಲು ಹಾಕಿದೆ.
ಉಡುಪಿಯಿಂದ ಹೆಬ್ರಿ ಕಡೆಗೆ ವಾಹನ ತೆರಿಗೆ ಪಾವತಿಸದೆ, ಅಧ್ಯರ್ಪಣದಿಂದ ಬಿಡುಗಡೆಗೊಳಿಸಿಕೊಳ್ಳದೆ ಖಾಸಗಿ ಕಂಪನಿಯ ನೌಕರರನ್ನು ಸಾರ್ವಜನಿಕ ರಸ್ತೆಯ ಮೇಲೆ ಕೊಂಡೊಯ್ಯುತ್ತಿದ್ದುದನ್ನು ಕಂಡು ಕಚೇರಿಯ ಮೋಟಾರು ವಾಹನ ನಿರೀಕ್ಷಕರು ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ತಪಾಸಣೆ ನಡೆಸಿ, ವಾಹನವನ್ನು ಮುಟ್ಟುಗೋಲು ಹಾಕಿ, ವಾಹನದಲ್ಲಿದ್ದ ಪ್ರಯಾಣಿಕರನ್ನು ಅವರವರ ನಿವಾಸಕ್ಕೆ ಬಿಟ್ಟು ತದನಂತರ ಕಚೇರಿಯ ಆವರಣದಲ್ಲಿ ನಿಲ್ಲಿಸಿ, ಕಾನೂನುರೀತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಮಾಡೆರ್ನಾ ಕೋವಿಡ್ ಲಸಿಕೆ ಶೇ. 94.1 ರಷ್ಟು ಪರಿಣಾಮಕಾರಿ : ವಿಶ್ವ ಆರೋಗ್ಯ ಸಂಸ್ಥೆ
ಕೋವಿಡ್ ನಿಯಮ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಯಾಣಿಕ ವಾಹನಗಳು(ಬಸ್, ಮ್ಯಾಕ್ಸಿಕ್ಯಾಬ್ ಮತ್ತು ಟ್ಯಾಕ್ಸಿ) ಅನು ಪಯುಕ್ತತೆಗಾಗಿ ವಾಹನದ ಮೂಲ ದಾಖಲಾತಿಗಳೊಂದಿಗೆ ಪ್ರಾದೇಶಿಕ ಸಾರಿಗೆ ಕಚೇರಿಗೆ ಅತ್ಯರ್ಪಣ (ಸರೆಂಡರ್) ಮಾಡಿದ್ದರೆ, ಕಚೇರಿಗೆ ಅರ್ಜಿಯನ್ನು ಸಲ್ಲಿಸಿದ ನಂತರ ಮಾತ್ರ ವಾಹನವನ್ನು ಉಪಯೋಗಿಸಲು ಸಾಧ್ಯ ಆದ್ದರಿಂದ ಇನ್ನು ಮುಂದೆ ಅನಾವಶ್ಯಕವಾಗಿ ಈ ರೀತಿಯ ತೊಂದರೆಗಳನ್ನು ಸಾರ್ವಜನಿಕರಿಗೆ ನೀಡದೆ, ಮುಂಗಡ ತೆರಿಗೆ ಪಾವತಿಯೊಂದಿಗೆ ಅದ್ಯಾರ್ಪಣದಿಂದ ಬಿಡುಗಡೆಗೊಳಿಸಿದ ನಂತರಮಾತ್ರ ವಾಹನವನ್ನು ಸಾರ್ವಜನಿಕ ರಸ್ತೆಯಲ್ಲಿ ಓಡಿಸಬೇಕಾಗಿ ಉಡುಪಿಯ ಕಾರ್ಯದರ್ಶಿ, ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಡ್ರೋನ್ ದಾಳಿ; ಗೃಹ ಸಚಿವ ಶಾ, ಸಿಂಗ್, ದೋವಲ್ ಜತೆ ಪ್ರಧಾನಿ ಮೋದಿ ಮಹತ್ವದ ಸಭೆ