Advertisement
ಕ್ಷೇತ್ರದ ಪ್ರಧಾನ ತಂತ್ರಿ ವೇ| ಮೂ| ರಾಘವೇಂದ್ರ ತಂತ್ರಿ ಕೊರಂಗ್ರಪಾಡಿ ಮತ್ತು ಪ್ರಧಾನ ಅರ್ಚಕ ವೇ| ಮೂ| ರಾಘವೇಂದ್ರ ಉಪಾ ಧ್ಯಾಯರ ನೇತೃತ್ವದಲ್ಲಿ ವೈದಿಕರ ಪಾಲ್ಗೊಳ್ಳುವಿಕೆಯೊಂದಿಗೆ ಮಹಾಚಂಡಿಕಾ ಯಾಗದ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು. ಐವತ್ತು ಸಾವಿರಕ್ಕೂ ಅಧಿಕ ಮಂದಿ ಅನ್ನಪ್ರಸಾದ ಸ್ವೀಕರಿಸಿದ್ದು, ಉದ್ಯಮಿ ಭುವನೇಂದ್ರ ಕಿದಿಯೂರು ಸೇವಾರ್ಥವಾಗಿ ಹಾಲು ಪಾಯಸ ವಿತರಿಸಲಾಯಿತು.
ನವರಾತ್ರಿ ಮತ್ತು ದಸರಾ ಉತ್ಸವದ ಪ್ರಯುಕ್ತ ಉಚ್ಚಿಲದಲ್ಲಿ ಹತ್ತು ದಿನಗಳ ಅವಧಿಯಲ್ಲಿ ಮಹಾಚಂಡಿಕಾಯಾಗ ಸಹಿತ 150ಕ್ಕೂ ಅಧಿಕ ಚಂಡಿಕಾಯಾಗ ನಡೆದಿದೆ. ಸಾಮೂಹಿಕ ಮಹಾಚಂಡಿಕಾಯಾಗದಲ್ಲಿ ಸಾವಿರಾರು ಮಂದಿ ಸೇವಾರ್ಥಿಗಳಾಗಿ ಪಾಲ್ಗೊಂಡಿದ್ದರು. ಒಂಭತ್ತು ದಿನಗಳ ಸಹಸ್ರ ಕುಂಕುಮಾರ್ಚನೆ ಸೇವೆಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಕುಂಕುಮಾರ್ಚನೆ ಸಮರ್ಪಿಸಲಾಯಿತು. ಈವರೆಗೆ ಮೂರು ಲಕ್ಷಕ್ಕೂ ಅಧಿಕ ಮಂದಿ ಅನ್ನಪ್ರಸಾದ ಮತ್ತು ಸಂಜೆ ಉಪಾಹಾರ ಪ್ರಸಾದ ಸ್ವೀಕರಿಸಿದ್ದಾರೆ. ಉಚ್ಚಿಲ ದಸರಾ ರೂವಾರಿ ಡಾ| ಜಿ. ಶಂಕರ್, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ, ದಸರ ಸಮಿತಿ ಅಧ್ಯಕ್ಷ ವಿನಯ ಕರ್ಕೇರ ಮತ್ತಿತರರು ಭಾಗವಹಿಸಿದ್ದರು.