Advertisement
ಕಳೆದ ವರ್ಷ ಶೇ.88.18 ಫಲಿತಾಂಶ ಸಿಕ್ಕಿದ್ದರೆ ಈ ಬಾರಿ ಶೇ.88.11 ದಾಖಲಿಸಿದೆ.ಅನುತ್ತೀರ್ಣರಾಗಿರುವವರ ಪೈಕಿ ಸಮಾಜ ವಿಜ್ಞಾನ ಮತ್ತು ವಿಜ್ಞಾನಗಳಲ್ಲಿ ಎಡವಿದ ವಿದ್ಯಾರ್ಥಿಗಳು ಹೆಚ್ಚು ಎಂದು ಇಲಾಖೆಯ ಅಧಿಕಾರಿಯೋರ್ವರು ತಿಳಿಸಿದ್ದಾರೆ. ವಿಜ್ಞಾನ ಪಠ್ಯ ಹೊಸದಾಗಿದ್ದು, ಅಧ್ಯಾಪಕರಿಗೂ ಸವಾಲಾಗಿತ್ತು.
Related Articles
Advertisement
ಕನ್ನಡ ಮಾಧ್ಯಮದ 6,784 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅವರಲ್ಲಿ 5,527 (ಶೇ.81.47) ಮತ್ತು ಆಂಗ್ಲಮಾಧ್ಯಮದ 6,219 ಮಂದಿ ವಿದ್ಯಾರ್ಥಿಗಳ ಪೈಕಿ 5,930 (ಶೇ.95.35) ತೇರ್ಗಡೆಯಾಗಿದ್ದಾರೆ.
ಮಂಗಳೂರು: ಎಸೆಸೆಲ್ಸಿ ಪರೀಕ್ಷಾ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಜಿಲ್ಲಾವಾರು ರ್‍ಯಾಂಕ್ ಪಟ್ಟಿಯಲ್ಲಿ ಕಳೆದ ಬಾರಿ ನಾಲ್ಕನೇ ಸ್ಥಾನದಲ್ಲಿದ್ದ ದಕ್ಷಿಣ ಕನ್ನಡ ಈ ಬಾರಿ ಶೇ.86.85 ಫಲಿತಾಂಶದೊಂದಿಗೆ ಏಳನೇ ಸ್ಥಾನಕ್ಕೆ ಕುಸಿದಿದೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾವಾರು ಆಧಾರದಲ್ಲಿ ಶೇ.1.24ರಷ್ಟು ಏರಿಕೆಯಾಗಿದೆ. ಈ ಬಾರಿ ಎರಡು ರೀತಿಯಲ್ಲಿ ಜಿಲ್ಲಾವಾರು ಫಲಿತಾಂಶ ಪ್ರಕಟ ಮಾಡಿದ್ದು, ಫಲಿತಾಂಶದ ಶೇಕಡಾವಾರು ಆಧಾರ ಮತ್ತು ಗುಣಮಟ್ಟ ಫಲಿತಾಂಶ ಎಂಬ ಎರಡು ವಿಭಾಗಗಳನ್ನು ಮಾಡಿ ಜಿಲ್ಲೆಗೆ ಶ್ರೇಯಾಂಕ ನೀಡಲಾಗಿದೆ. ಜಿಲ್ಲೆಗಳ ಶೇಕಡಾವಾರು ಆಧಾರದಲ್ಲಿ ದ.ಕ. ಜಿಲ್ಲೆಯು ಏಳನೇ ಸ್ಥಾನದಲ್ಲಿದ್ದರೆ, ಗುಣಮಟ್ಟದ ಫಲಿತಾಂಶ ಆಧಾರದಲ್ಲಿ ಐದನೇ ಸ್ಥಾನ ಪಡೆದಿದೆ. ಜಿಲ್ಲೆಯ 17 ಸರಕಾರಿ ಶಾಲೆಗಳು ಶೇ.100 ಫಲಿತಾಂಶ ಪಡೆದರೆ, 5 ಅನುದಾನ ಮತ್ತು 62 ಅನುದಾನ ರಹಿತ ಶಾಲೆಗಳು ಶೇ.100ರಷ್ಟು ಫಲಿತಾಂಶ ಪಡೆದಿವೆೆ. ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಜಿಲ್ಲೆಯಲ್ಲಿ ಈ ಬಾರಿ ಹೆಚ್ಚಿನ ಶಾಲೆಗಳಿಗೆ ಶೇ.100 ಫಲಿತಾಂಶ ಬಂದಿದೆ. ಒಟ್ಟಾರೆ 84 ಶಾಲೆಗಳಿಗೆ ಶೇ.100ರಷ್ಟು ಫಲಿತಾಂಶ ಬಂದಿದ್ದು, ಕಳೆದ ಬಾರಿ 66 ಶಾಲೆಗಳಿಗೆ ಬಂದಿತ್ತು. ಈ ಬಾರಿ ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಸಿಂಚನಾ ಲಕ್ಷ್ಮೀ, ಸುಬ್ರಹ್ಮಣ್ಯ ಕುಮಾರಸ್ವಾಮಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಕೃಪಾ ಕೆ.ಆರ್., ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾಮಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಅನುಪಮಾ ಕಾಮತ್ ಮತ್ತು ವಿಟ್ಲದ ವಿಜಯ ಪ್ರೌಢ ಶಾಲೆಯ ಚಿನ್ಮಯಿ 624 ಅಂಕ ಗಳಿಸಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದಾರೆ. ಟಾಪ್ ಟೆನ್ ಶಾಲೆಗಳು
620 ಮತ್ತು ಅದಕ್ಕಿಂತ ಹೆಚ್ಚು ಅಂಕ ಗಳಿಸಿರುವ 12 ವಿದ್ಯಾರ್ಥಿಗಳು ಜಿಲ್ಲೆಯಲ್ಲಿದ್ದಾರೆ. ಕೋಟ ವಿವೇಕ ಆಂಗ್ಲಮಾಧ್ಯಮ ಶಾಲೆಯ ಅನಘಾ ಉಡುಪ 623, ಕಾರ್ಕಳ ಜ್ಞಾನಸುಧಾ ಆಂಗ್ಲಮಾಧ್ಯಮ ಪ್ರೌಢಶಾಲೆಯ ಪೃಥ್ವಿ ವಿ. ಶೆಟ್ಟಿ, ಉಡುಪಿ ಸೈಂಟ್ ಸಿಸಿಲೀಸ್ ಪ್ರೌಢಶಾಲೆಯ ಧನ್ಯಾ ಎಸ್., ಮುದರಂಗಡಿ ಸೈಂಟ್ ಫ್ರಾನ್ಸಿಸ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ಚಂದನಾ ಶೆಣೈ, ಕುಂಜಿಬೆಟ್ಟು ಟಿ.ಎ. ಪೈ ಆಂಗ್ಲಮಾಧ್ಯಮ ಶಾಲೆಯ ಸುಪ್ರೀತಾ ನಾಯಕ್ ಮತ್ತು ಸುಮಂತ್ ಎಸ್. ಕಾರಂತ್ 622 ಅಂಕಗಳನ್ನು ಗಳಿಸಿದ್ದಾರೆ. ಕಾರ್ಕಳ ಎಸ್.ಬಿ. ಹೈಸ್ಕೂಲ್‌ನ ಬಿ. ವಿಭಾ ಶೆಣೈ, ಅಲೆವೂರು ಶಾಂತಿನಿಕೇತನ ಆಂಗ್ಲಮಾಧ್ಯಮ ಪ್ರೌಢಶಾಲೆಯ ಅಂಕಿತಾ ಪಿ. ಆಚಾರ್ಯ ಮತ್ತು ಕಾರ್ಕಳ ಜ್ಞಾನಸುಧಾ ಆಂಗ್ಲಮಾಧ್ಯಮ ಪ್ರೌಢಶಾಲೆಯ ಶೃತಾ 621, ಕಾರ್ಕಳ ಜ್ಞಾನಸುಧಾ ಆಂಗ್ಲಮಾಧ್ಯಮ ಪ್ರೌಢಶಾಲೆಯ ಎಂ. ಮನ್ವಿತ್ ಪ್ರಭು, ಕುಂದಾಪುರ ಶ್ರೀ ವೆಂಕಟರಮಣ ಶಾಲೆಯ ಸಂಜನಾ ಜೆ. ಮತ್ತು ಕುಂದಾಪುರ ವಿಕೆಆರ್ ಆಚಾರ್ಯ ಮೆಮೋರಿಯಲ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ಸೂರಜ್ ಎನ್.ಎಸ್. 620 ಅಂಕಗಳನ್ನು ಗಳಿಸಿದ್ದಾರೆ.