Advertisement

Udupi TMA Pai Hospital; ಮೂಳೆ ತಜ್ಞ ಡಾ. ಅರವಿಂದ್ ಶಾನಭಾಗ್ ಪೂರ್ಣಾವಧಿ ಸಮಾಲೋಚನೆಗೆ ಲಭ್ಯ

04:28 PM Jun 08, 2024 | Team Udayavani |

ಉಡುಪಿ: ಹೆಸರಾಂತ ಮೂಳೆ ಮತ್ತು ಕೀಲು ಶಸ್ತ್ರಚಿಕಿತ್ಸಕ ಡಾ. ಅರವಿಂದ್ ಶಾನಭಾಗ್ ಅವರು ಉಡುಪಿಯ ಡಾ.ಟಿ.ಎಂ.ಎ ಪೈ ಆಸ್ಪತ್ರೆಯಲ್ಲಿ ಎಲ್ಲಾ ಕೆಲಸದ ದಿನಗಳಲ್ಲಿ (ಮೂರನೇ ಶನಿವಾರ ಸೇರಿದಂತೆ) ಪೂರ್ಣ ಸಮಯದ ಸಮಾಲೋಚನೆಗಾಗಿ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಲಭ್ಯವಿರುತ್ತಾರೆ.

Advertisement

ಡಾ. ಅರವಿಂದ್ ಶಾನಭಾಗ್ ಅವರು ಮೂಳೆ ಮತ್ತು ಅಪಘಾತ ಪ್ರಕರಣಗಳನ್ನು ನಿರ್ವಹಿಸುವಲ್ಲಿ 15 ವರ್ಷಗಳ ಅನುಭವವನ್ನು ಹೊಂದಿದ್ದಾರೆ.  ಈ ಮೊದಲು ಅವರು ಕಾರ್ಕಳದಲ್ಲಿ ಪ್ರಮುಖ ಮೂಳೆ ಮತ್ತು ಕೀಲು ಶಸ್ತ್ರಚಿಕಿತ್ಸಕರಾಗಿದ್ದರು. ಅವರ ಪರಿಣತಿಯು ಸಂಧಿವಾತ, ದೀರ್ಘಕಾಲದ ಕುತ್ತಿಗೆ ಮತ್ತು ಬೆನ್ನು ನೋವು, ಮತ್ತು ಕ್ರೀಡಾ ಗಾಯಗಳು ಸೇರಿದಂತೆ ಎಲ್ಲ ರೀತಿಯ ಮೂಳೆ ಮತ್ತು ಕೀಲು ಸಮಸ್ಯೆಗಳಿಗೆ ಚಿಕಿತ್ಸೆ ಪರಿಹಾರ ವ್ಯಾಪಿಸಿದೆ.

ಡಾ. ಟಿಎಂಎ ಪೈ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಶಶಿಕಿರಣ್ ಉಮಾಕಾಂತ್ ಅವರು ಹೊಸ ಸೇರ್ಪಡೆಯ ಬಗ್ಗೆ ಸಂತಸ ವ್ಯಕ್ತಪಡಿಸಿದರು. “ನಮ್ಮ ಗೌರವಾನ್ವಿತ ಆರೋಗ್ಯ ವೃತ್ತಿಪರರ ತಂಡಕ್ಕೆ ಡಾ. ಅರವಿಂದ್ ಶಾನಭಾಗ್ ಅವರನ್ನು ಸ್ವಾಗತಿಸಲು ನಾವು ಸಂತೋಷಪಡುತ್ತೇವೆ. ಅವರ ಪರಿಣತಿಯು ಉಡುಪಿ ಸಮುದಾಯಕ್ಕೆ ಲಭ್ಯವಿರುವ ಮೂಳೆಚಿಕಿತ್ಸೆಯ ಸೇವೆಗಳನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ” ಎಂದು ಹೇಳಿದ್ದಾರೆ.

ಅಪಾಯಿಂಟ್‌ಮೆಂಟ್‌ಗಳು ಅಥವಾ ಹೆಚ್ಚಿನ ಮಾಹಿತಿಗಾಗಿ ಆಸ್ಪತ್ರೆಯನ್ನು (ದೂರವಾಣಿ 7259032864) ಸಂಪರ್ಕಿಸಿ.

Advertisement

Udayavani is now on Telegram. Click here to join our channel and stay updated with the latest news.

Next