Advertisement

ಉಡುಪಿ: ಗುರುವಾರ; 226 ಕೋವಿಡ್ ಪಾಸಿಟಿವ್‌, 4 ಸಾವು

12:10 AM Sep 04, 2020 | mahesh |

ಉಡುಪಿ: ಜಿಲ್ಲೆಯಲ್ಲಿ ಗುರುವಾರ 226 ಜನರಿಗೆ ಪಾಸಿಟಿವ್‌, 893 ಜನರಿಗೆ ನೆಗೆಟಿವ್‌ ವರದಿಯಾಗಿದೆ. ಮೃತಪಟ್ಟಿರುವ ನಾಲ್ವರನ್ನು ಕೋವಿಡ್ ಬಾಧಿಸಿರುವುದು ದೃಢಪಟ್ಟಿದೆ. ಉಡುಪಿ ತಾಲೂಕಿನ 65 ವರ್ಷದ ಪುರುಷ, 45 ವರ್ಷದ ಮಹಿಳೆ, ಕಾರ್ಕಳದ 84 ವರ್ಷ, ಕುಂದಾಪುರದ 46 ವರ್ಷದ ಪುರುಷರು ಮೃತಪಟ್ಟವರು. ಅವರಿಗೆ ಉಸಿರಾಟದ ಸಮಸ್ಯೆ, ಕಿಡ್ನಿ, ರಕ್ತದೊತ್ತಡ ಮೊದಲಾದ ಸಮಸ್ಯೆಗಳಿದ್ದವು. ಜಿಲ್ಲೆಯಲ್ಲಿ ಮೃತಪಟ್ಟವರ ಒಟ್ಟು ಸಂಖ್ಯೆ 106ಕ್ಕೇರಿದೆ.

Advertisement

ಸೋಂಕಿತರಲ್ಲಿ ರೋಗ ಲಕ್ಷಣವಿರುವ 68 ಪುರುಷರು, 50 ಮಹಿಳೆಯರು, ರೋಗ ಲಕ್ಷಣವಿರದ 60 ಪುರುಷರು, 48 ಮಹಿಳೆ ಯರು ಇದ್ದಾರೆ. ಉಡುಪಿ ತಾಲೂಕಿನ 137 ಜನರು, ಕುಂದಾಪುರದ 59, ಕಾರ್ಕಳದ 25, ಇತರ ಜಿಲ್ಲೆಗಳ ಐವರು ಇದ್ದಾರೆ. 93 ಜನರನ್ನು ಆಸ್ಪತ್ರೆಗಳಿಗೂ 133 ಜನರನ್ನು ಮನೆಗಳ ಐಸೊಲೇಶನ್‌ಗೂ ದಾಖಲಿಸಲಾಗಿದೆ.ಕೋವಿಡ್, Covid, Udupi

1,028 ಮಾದರಿ ಸಂಗ್ರಹ
ಗುರುವಾರ 1,028 ಜನರ ಗಂಟಲ ದ್ರವ ಮಾದರಿ ಸಂಗ್ರಹಿಸಲಾಗಿದೆ. 266 ಜನರ ವರದಿ ಬರಬೇಕಿದೆ. 134 ಮಂದಿ ಆಸ್ಪತ್ರೆಗಳಿಂದಲೂ 194 ಮಂದಿ ಮನೆಗಳ ಐಸೊಲೇಶನ್‌ನಿಂದಲೂ ಒಟ್ಟು 328 ಜನರು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಪ್ರಸ್ತುತ 1,045 ಮಂದಿ ಆಸ್ಪತ್ರೆಗಳಲ್ಲೂ 1,070 ಮಂದಿ ಮನೆಗಳ ಐಸೊಲೇಶನ್‌ನಲ್ಲಿಯೂ ಶುಶ್ರೂಷೆ ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next