Advertisement
ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿರುವ ಹರೀಶ್ ಎಸ್. ಅವರು ಉಡುಪಿಯ ಎಸ್.ಬಿ.ಐ. ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದರು. ಅವರ ಇಲಾಖೆಯ ಕೆ.ಜಿ.ಐ.ಡಿ. ಹಣ ಬ್ಯಾಂಕ್‌ಗೆ ಜಮೆಗೊಂಡಿರುವುದನ್ನು ಗಮನಿಸಿದ ಅಪರಿಚಿತ ವ್ಯಕ್ತಿಗಳು ಫೆ. 11ರಂದು ಅವರ ಮೊಬೈಲ್‌ಗೆ ಲಿಂಕ್ ಕಳುಹಿಸಿ ಬ್ಯಾಂಕ್ ವಿವರ ಪಡೆದು ಖಾತೆಯಿಂದ 1,499 ರೂ., 98,500 ರೂ.ಸಹಿತ ಒಟ್ಟು 99,999 ರೂ.ಗಳನ್ನು ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು ನಷ್ಟ ಉಂಟು ಮಾಡಿದ್ದಾರೆ. ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ: ಬೀಜಾಡಿ ಗ್ರಾಮದ ಹಳೆ ಅಳಿವೆ ಜಂಕ್ಷನ್ ಬಳಿ ಸಾರ್ವಜನಿಕ ಪ್ರದೇಶದಲ್ಲಿ ಮದ್ಯಪಾನ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ ಸುಮಂತ್ ಮೋಗವೀರನನ್ನು ವಶಕ್ಕೆ ಪಡೆಯಲಾಗಿದೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಂದಾಪುರ: ಅಸ್ವಸ್ಥ ವ್ಯಕ್ತಿ ಆತ್ಮಹತ್ಯೆ
ಕುಂದಾಪುರ: ಇಲ್ಲಿನ ಚಿಕ್ಕನ್‌ಸಾಲ್ ರಸ್ತೆ ನಿವಾಸಿ ರಘುನಾಥ ಶೇರೆಗಾರ್ (60) ಅವರು ಅನಾ ರೋಗ್ಯದಿಂದ ಬಳಲುತ್ತಿದ್ದು, ಅದೇ ಕಾರಣದಿಂದ ಫೆ.10ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Related Articles
ಪಡುಬಿದ್ರಿ: ಎರ್ಮಾಳು ಬಡಾ ಕಲ್ಯಾಣಿ ಬಾರ್ ಬಳಿ ರಾ.ಹೆ. 66ರಲ್ಲಿ ಫೆ. 11ರ ರಾತ್ರಿಯ ವೇಳೆ ರಸ್ತೆ ಬದಿ ನಿಂತಿದ್ದ ಅದಮಾರು ನಿವಾಸಿ ದಯಾನಂದ (45) ಅವರಿಗೆ ಯಾವುದೋ ಅಪರಿಚಿತ ವಾಹನ ಢಿಕ್ಕಿಯಾಗಿದೆ. ಅವರನ್ನು ಉಡುಪಿಯ ಸರಕಾರಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಪಡು ಬಿದ್ರಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
Advertisement