Advertisement
45 ಲಕ್ಷಕ್ಕೂ ಅಧಿಕ ಮಕ್ಕಳ ವ್ಯಾಸಂಗ:ರಾಜ್ಯದಲ್ಲಿ 47,757 ಪ್ರಾಥಮಿಕ ಹಾಗೂ ಪ್ರೌಢಶಾಲೆ, 1229 ಕಾಲೇಜುಗಳಲ್ಲಿ 45 ಲಕ್ಷಕ್ಕೂ ಅಧಿಕ ಮಕ್ಕಳು ಸರಕಾರಿ ವ್ಯವಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಅವಧಿಯಲ್ಲಿ ಕೆಲವೊಂದು ದುರಂತಗಳು ಅಲ್ಲಲ್ಲಿ ನಡೆಯುವುದು ಕಂಡು ಬರುತ್ತದೆ. ಸಾವು-ನೋವು ಪ್ರಕರಣಗಳು ಆಗಾಗ್ಗೆ ದಾಖಲಾಗುತ್ತಲೇ ಇ ರುತ್ತದೆ. ಅವಘಡ, ದುರಂತ ಸಂಭವಿಸದಂತೆ ಎಚ್ಚರ ವಹಿಸಿದರೂ ಮಕ್ಕಳು ಒಂದಲ್ಲ ಒಂದು ದುರಂತಗಳಿಗೆ ಒಳಗಾಗುತ್ತಿ ರುತ್ತಾರೆ. ಶಾಲೆ ಗಳಲ್ಲಿ ನಡೆಯುವ ಇಂತಹ ದುರ್ಘಟನೆ ಗಳಿಗೆ ಕಡಿವಾಣ ಬೀಳುತಿಲ್ಲ. ಮಕ್ಕಳ ರಕ್ಷಣಾ ಆಯೋಗದಿಂದ
ಮಾರ್ಗಸೂಚಿಯನ್ನು ಸಿದ್ಧಪಡಿಸಿಲ್ಲ. ಪರಿಹಾರ ವೆಚ್ಚ ಪರಿಹಾರಕ್ಕೆ ಪರದಾಟ: ಗಂಭೀರ ಪ್ರಕರಣಗಳಲ್ಲಿ ಪರಿಹಾರ, ಮಕ್ಕಳ ಚಿಕಿತ್ಸಾ ವೆಚ್ಚ ಭರಿಸಲು ಹಣಕ್ಕಾಗಿ ಪರದಾಡಬೇಕಾದ ದಯಾನೀಯ ಪರಿಸ್ಥಿತಿ ಶಾಲೆಗಳಲ್ಲಿದೆ.
Related Articles
Advertisement
ದುರಂತ ನಿಧಿ ಸ್ಥಾಪಿಸಿದರೆ ಅನುಕೂಲ: ಶಿಕ್ಷಣ ಇಲಾಖೆಯಲ್ಲಿ ಮಕ್ಕಳ ರಕ್ಷಣೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ, ಅವರ ರಕ್ಷಣೆಗೆ ಒತ್ತು ನೀಡುವುದು ಸರಕಾರ ಬಹುಮುಖ್ಯ ಜವಾಬ್ದಾರಿಯಾಗಿದೆ. ಆದರಿಲ್ಲಿ ನಿರ್ಲಕ್ಷ ವಹಿಸಲಾಗಿದೆ. ಶಾಲೆಗಳಲ್ಲಿ ಮಕ್ಕಳ ರಕ್ಷಣೆಗಾಗಿ ಸರಕಾರ ವಿವಿಧ ಯೋಜನೆಗಳನ್ನು ಪರಿಚಯಿಸುತ್ತಿದೆ. ಅದರಂತೆ ದುರಂತ ಪ್ರತ್ಯೇಕ ಪರಿಹಾರ ನಿಧಿ ಸ್ಥಾಪಿಸಿದರೆ ಅನುಕೂಲವಾಗುತ್ತದೆ ಎನ್ನುವುದು ಪೋಷಕರ ಅಳಲಾಗಿದೆ.
ಏನೇನು ಅವಘಡ ಸಂಭವಿಸುತ್ತದೆ?:ಬಿಸಿಯೂಟದ ಸಂದರ್ಭ ಸಾಂಬಾರು ಪಾತ್ರೆಗೆ ಬಿದ್ದು ಸಾವು, ಗಾಯಗೊಳ್ಳುವುದು, ವಿದ್ಯುತ್ ಸ್ಪರ್ಶಿಸಿ, ಶಾಕ್ ತಗುಲಿ ಸಾವು, ಆಟವಾಡುವಾಗ ಬಿದ್ದು ಕೈಕಾಲು ಮುರಿದುಕೊಳ್ಳುವುದು ಹೀಗೆ ಶಾಲಾ ಅವಧಿಯಲ್ಲಿ ಅವಘಡಗಳು ಸಂಭವಿಸಿದಂತಹ ಸಂದರ್ಭ ಮಕ್ಕಳಿಗೆ ದೊಡ್ಡ ಮೊತ್ತದ ಪರಿಹಾರ ನೀಡುವಲ್ಲಿ ಸಮಸ್ಯೆಗಳಾಗುತ್ತಿದೆ. ಶಿಕ್ಷಕರ ಕಲ್ಯಾಣ ನಿಧಿಯಿಂದ, ಸಾರ್ವಜನಿಕರು, ದಾನಿಗಳಿಂದ ಚಂದ ಎತ್ತಿ ಪೋಷಕರಿಗೆ ನೀಡಬೇಕಾದ ದುಸ್ಥಿತಿಯಿದೆ. ಈ ಮೊತ್ತ ಏನೂ ಅಲ್ಲ !
ಮಕ್ಕಳ ಮತ್ತು ಶಿಕ್ಷಕರ ಕಲ್ಯಾಣ ನಿಧಿ ಅಂತ ಶಿಕ್ಷಕರೇ ಸ್ಥಾಪಿಸಿಕೊಂಡ ನಿಧಿಯಿಂದ 1 ಲಕ್ಷ ರೂ. ವರೆಗೆ ಪರಿಹಾರ ನೀಡುವ ವ್ಯವಸ್ಥೆ ಇದ್ದರೂ ಮಕ್ಕಳ ಸಾವು ಸಹಿತ ದೊಡ್ಡ ಮಟ್ಟದ ಜೀವಹಾನಿ ಆದ ಸಂದರ್ಭ ಈ ಪರಿಹಾರ ಮಕ್ಕಳ ಕುಟುಂಬಕ್ಕೆ, ಚಿಕಿತ್ಸೆಗೆ ಏನೂ ಅಲ್ಲ. ಮೆಸ್ಕಾಂ, ಸಾರಿಗೆ ಇನ್ನಿತರ ಇಲಾಖೆಯಲ್ಲಿ ಮೃತಪಟ್ಟ ಸಂದರ್ಭ 5 ಲಕ್ಷ ರೂ. ವರೆಗೂ ಪರಿಹಾರ ನೀಡಲಾಗುತ್ತದೆ. ಇದೇ ರೀತಿ ಶಿಕ್ಷಣ ಇಲಾಖೆಯೂ ದೊಡ್ಡ ಮೊತ್ತದ ಪರಿಹಾರ ನೀಡುವ ವ್ಯವಸ್ಥೆ ಹೊಂದಬೇಕು. ಅದಕ್ಕೆ ಪ್ರತ್ಯೇಕ ನಿಧಿ ಸ್ಥಾಪಿಸಬೇಕೆನ್ನುವುದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಒತ್ತಾಸೆಯಾಗಿದೆ. ಗಂಭೀರವಾಗಿ ಪರಿಗಣಿಸಬೇಕು
ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಪ್ರತ್ಯೇಕ ನಿಧಿ ಸ್ಥಾಪನೆಯ ಅಗತ್ಯವಿದೆ. ಪ್ರತ್ಯೇಕ ಪರಿಹಾರ ನಿಧಿ ಹಾಗೂ ಮಾರ್ಗಸೂಚಿ ಸಿದ್ಧಪಡಿಸಲು ರಾಜ್ಯ ಸರಕಾರಕ್ಕೆ ಆಯೋಗದಿಂದ ಶಿಫಾರಸು ಕಳುಹಿಸಲಾಗಿದೆ. ಕನಿಷ್ಠ 1 ಕೋಟಿ ರೂ. ಮೀಸಲಿರಿಸಿದರೆ ಅನುಕೂಲವಾಗುತ್ತದೆ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಸ್ಪಂದಿಸಬೇಕು. *ಕೆ.ಟಿ. ತಿಪ್ಪೇಸ್ವಾಮಿ., ಸದಸ್ಯ, ಕರ್ನಾಟಕ
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ *ಬಾಲಕೃಷ್ಣ ಭೀಮಗುಳಿ