Advertisement

Udupi; ಮುಂಬಯಿಯ ಮಾನಸಿಕ ಅಸ್ವಸ್ಥ ಯುವತಿಯ ತಾಯಿ ಪತ್ತೆ

12:27 AM Nov 28, 2023 | Team Udayavani |

ಉಡುಪಿ: ವಾರದ ಹಿಂದೆ ರಕ್ಷಣೆಗೊಳಪಟ್ಟ ಮುಂಬಯಿಯ ಮಾನಸಿಕ ಅಸ್ವಸ್ಥ ಯುವತಿಯನ್ನು ಸಮಾಜಸೇವಕ ವಿಶು ಶೆಟ್ಟಿ ಅವರು ಬಾಳಿಗಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ತಾಯಿಗೆ ಹಸ್ತಾಂತರಿಸಿದ್ದಾರೆ.

Advertisement

ಯುವತಿ ಮುಂಬಯಿ ಮೂಲದವಳಾಗಿದ್ದು, ಮಾಹಿತಿ ಪಡೆದ ಉಡುಪಿಯ ಶ್ರೀನಿವಾಸ್‌ ರಾವ್‌ ಅವರು ಮುಂಬಯಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಯುವತಿಯ ತಾಯಿಗೆ ತಿಳಿಸಿ ಅವರು ಬಾಳಿಗ ಆಸ್ಪತ್ರೆಗೆ ಬಂದು ಪೊಲೀಸರ ಸಹಕಾರದಲ್ಲಿ ಸಖೀ ಸೆಂಟರ್‌ನ ಸಮಾಲೋಚಕಿ ನೀತಾ ಅವರು ಕಾನೂನು ಪ್ರಕ್ರಿಯೆ ನಡೆಸಿದ್ದಾರೆ. ಆಸ್ಪತ್ರೆ ವೈದ್ಯರು ಹಾಗೂ ಸಿಬಂದಿ ಸಹಕಾರ ನೀಡಿದ್ದರು. ಯುವತಿಯ ತಾಯಿ ಕೂಡ ಕ್ಯಾನ್ಸರ್‌ಗೆ ತುತ್ತಾಗಿದ್ದು, ಈ ಕಾರಣಕ್ಕೆ ವಿಶು ಶೆಟ್ಟಿ ಅವರು ಆರ್ಥಿಕ ಶುಲ್ಕವನ್ನು ಭರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next