Advertisement

ಉಡುಪಿ ತಾಲೂಕು ಮಳೆಗಾಲ ನಿರ್ವಹಿಸಲು ಸನ್ನದ್ಧ

11:14 PM Jun 22, 2019 | sudhir |

ಉಡುಪಿ: ಪ್ರಸ್ತುತ ಸಾಲಿನ ಮಳೆಗಾಲದಲ್ಲಿ ಸಂಭಾವ್ಯ ತುರ್ತು ಪರಿಸ್ಥಿತಿ ಎದುರಿಸಲು ಉಡುಪಿ ತಾಲೂಕು ಸನ್ನದ್ಧಗೊಂಡಿದೆ.

Advertisement

ಏನೆಲ್ಲ ಸಿದ್ಧತೆ?

ಉಡುಪಿ ತಹಶೀಲ್ದಾರ್‌ ಪ್ರದೀಪ್‌ ಕುರ್ಡೇಕರ್‌ ನೇತೃತ್ವದಲ್ಲಿ ಮುಂಗಾರು ಪ್ರಾಕೃತಿಕ ವಿಕೋಪ ಎದುರಿಸಲು ತಾ. ಮಟ್ಟದ ಅಧಿಕಾರಿಗಳ ಸಭೆ ಕರೆದು ಅಗತ್ಯವಿರುವ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ಗ್ರಾಮಸ್ಥರು ಹಾಗೂ ಪಿಡಿಒಗಳ ಜಂಟಿ ಸಭೆ ನಡೆಸಲಾಗಿದೆ. ತುರ್ತು ಸ್ಪಂದನೆಗಾಗಿ ಗ್ರಾ.ಪಂ. ಮಟ್ಟದಲ್ಲಿ ಈಜುಗಾರರು, ದೋಣಿ, ಜೆಸಿಬಿ ಮಾಲಕರು, ಟಿಪ್ಪರ್‌, ಕ್ರೇನ್ಸ್‌, ಸರಕು ಸಾಗಾಟದ ವಾಹನ, ಮರ ಕತ್ತರಿಸುವವರು ಸೇರಿ ಎಲ್ಲರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಅಗ್ನಿಶಾಮಕ ಘಟಕ, ಗೃಹ ರಕ್ಷಕದಳ ಘಟಕ, ಪ್ರಾಥಮಿಕ ಆರೋಗ್ಯ ಕೇಂದ್ರ, ಪೊಲೀಸ್‌ ಠಾಣೆ, ಮೆಸ್ಕಾಂ ಸಿಬಂದಿಗೆ ಮಾಹಿತಿಯನ್ನು ನೀಡಲಾಗಿದೆ.

ಅಧಿಕಾರಿಗಳಿಗೆ ಮಾಹಿತಿ

Advertisement

ಪ್ರವಾಹ, ಭೂ ಕುಸಿತ ಮೊದಲಾದ ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗ ಸಂತ್ರಸ್ತರನ್ನು ಸ್ಥಳಾಂತರಿಸಲು, ಪರಿಹಾರ ಸಾಮಗ್ರಿಗಳು, ತುರ್ತು ವೈದ್ಯಕೀಯ ಸೇವೆಗಳು, ಸಂಪರ್ಕ, ಕುಡಿಯುವ ನೀರಿನ ವ್ಯವಸ್ಥೆ, ಗಂಜಿ ಕೇಂದ್ರ ಹಾಗೂ ಸಾಂಕ್ರಾಮಿಕ ರೋಗ ತಡೆಗೆ ಕ್ರಮ ಕೈಗೊಳ್ಳುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

1.40 ಕೋ. ಪರಿಹಾರ ವಿತರಣೆ

ಪ್ರಾಕೃತಿಕ ವಿಕೋಪದಡಿಯಲ್ಲಿ 2018- 19ನೇ ಸಾಲಿನಲ್ಲಿ 1.40 ಕೋ.ಟಿ ಪರಿಹಾರ ವಿತರಿಸಲಾಗಿದೆ.

ನೆರೆ ಪೀಡಿತ ಪ್ರದೇಶ

2018-19ನೇ ಸಾಲಿನಲ್ಲಿ ಉಡುಪಿ ತಾಲೂಕು ವ್ಯಾಪ್ತಿಯಲ್ಲಿ ಉದ್ಯಾವರ, ಪಡುಕರೆ, ಮರ್ಣೆ, ಮಣಿಪುರ, ಕರ್ಡೆಕಾರ್‌, ಪಡು ತೋನ್ಸೆ ಸೇರಿದಂತೆ ವಿವಿಧ ಕಡೆ ನೆರೆ ಹಾಗೂ ಕಡಲಕೊರೆತದಿಂದ ಲಕ್ಷಾಂತರ ರೂ. ಮೌಲ್ಯದ ಹಾನಿಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next