Advertisement
ನವೆಂಬರ್ 16ರಂದು ಆದಿ ಉಡುಪಿಯಲ್ಲಿ ಹೆಬ್ಟಾವೊಂದು ಹುಲ್ಲು ಕೊಯ್ಯುವ ಯಂತ್ರಕ್ಕೆ ಸಿಲುಕಿ ಗಾಯಗೊಂಡಿತ್ತು. ಸಾರ್ವಜನಿಕರ ಮಾಹಿತಿ ಮೇರೆಗೆ ಉಚ್ಚು ಟ್ರಸ್ಟ್ನ ಅಕ್ಷಯ್ ಶೇಟ್ ಅವರ ನೇತೃತ್ವ ತಂಡವು ಹಾವನ್ನು ರಕ್ಷಿಸಿತ್ತು. ಹಾವಿನ ದೇಹಕ್ಕೆ 15 ಸೆ.ಮೀ ಉದ್ದವಾದ ಗಾಯವಾಗಿತ್ತು. ಆಳದ ಗಾಯಗಳೂ ಇದ್ದವು. ಇದನ್ನು ಗಮನಿಸಿದ ಸದಸ್ಯರು ಅರಣ್ಯ ಇಲಾಖೆಯ ಸಹಕಾರದೊಂದಿಗೆ ಹಾವನ್ನು ಉಡುಪಿಯ ಸಮನ್ವಯಾ ಕ್ಲಿನಿಕ್ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ.
ವೈದ್ಯರನ್ನೂ ಒಳಗೊಂಡಂತೆ ಹತ್ತು ಜನ ಸಮಾನ ಮನಸ್ಕ ಉರಗ ಪ್ರೇಮಿಗಳ ತಂಡವಾದ ಉಚ್ಚು ಟ್ರಸ್ಟ್ ಎರಡು ವರ್ಷಗಳ ಹಿಂದೆ ಆರಂಭಗೊಂಡಿದೆ. ಎರಡೇ ವರ್ಷದಲ್ಲಿ 1000ಕ್ಕೂ ಅಧಿಕ ಹಾವುಗಳನ್ನು ರಕ್ಷಣೆ ಮಾಡಿದೆ. ರಸ್ತೆ ಅಪಘಾತ, ಬಾವಿ, ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಪ್ಲಾಸ್ಟಿಕ್ ನುಂಗಿ ತೊಂದರೆಕ್ಕೀಡಾಗುವ ಹಾವುಗಳನ್ನು ಆಸ್ಪತ್ರೆಗೆ ಕರೆತಂದು ಕರೆತಂದು ಅವುಗಳಿಗೆ ಚಿಕಿತ್ಸೆ ಕೊಡಿಸಿದೆ.
Related Articles
Advertisement
ವೃತ್ತಿಗಿಂತ ಪ್ರವೃತ್ತಿಯಲ್ಲಿ ಹೆಚ್ಚು ಖುಷಿ ಸಾಫ್ಟ್ವೇರ್ಎಂಜಿನಿಯರ್ ಆಗಿರುವ ನಾನು ಚಿಕ್ಕಂದಿನಿಂಲೂ ಪ್ರಾಣಿ ಮತ್ತು ಹಾವುಗಳ ಮೇಲೆ ಆಸಕ್ತಿಯಿತ್ತು. ತೊಂದರೆಯಲ್ಲಿ ಹಾವುಗಳನ್ನು ರಕ್ಷಿಸಬೇಕು ಎಂಬ ಉದ್ದೇಶದಿಂದ ಸಮಾನ ಮನಸ್ಕರ ತಂಡದೊಂದಿಗೆ ಉಚುf ಟ್ರಸ್ಟ್ ಪ್ರಾರಂಭಿಸಿದೆ. ಸ್ವಂತ ಖರ್ಚಿನಲ್ಲಿ ಇದೀಗ ಜಿಲ್ಲೆಯಾದ್ಯಂತ ಸಂಚಾರ ಮಾಡಿ ಹಾವು ರಕ್ಷಣಾ ಕಾರ್ಯದಲ್ಲಿ ನಮ್ಮ ತಂಡವು ಕೆಲಸ ಮಾಡುತ್ತಿದೆ. ಇದೊಂದು ದೇಶ ಸೇವೆ ಎಂದು ಭಾವಿಸಿ ಕೆಲಸ ಮಾಡುತ್ತಿದ್ದೇವೆ.
-ಅಕ್ಷಯ್ ಶೇಟ್, ಟ್ರಸ್ಟಿ., ಉಚ್ಫು ಟ್ರಸ್ಟ್ ಉಡುಪಿ – ವಿಜಯಕುಮಾರ ಹಿರೇಮಠ