Advertisement
ಮುಂಗಾರಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಸುಮಾರು 35 ಸಾವಿರ ಹೆಕ್ಟೇರ್ ಹಾಗೂ ದಕ್ಷಿಣ ಕನ್ನಡದಲ್ಲಿ 9500 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಇದೀಗ ಭತ್ತದ ತೆನೆ ಬೆಳೆದು ಕಟಾವಿಗೆ ಸಿದ್ಧವಾಗುತ್ತಿದೆ. ದೀಪಾವಳಿಗೂ ಪೂರ್ವದಲ್ಲಿ ಹಲವೆಡೆ ಕಟಾವು ಆರಂಭವಾಗಲಿದೆ. ಉಭಯ ಜಿಲ್ಲೆಯ ಕೆಲವು ಕಡೆ ಎರಡು ಮೂರು ದಿನದಿಂದ ಏಕಾಏಕಿ ಮಳೆ ಕಾಣಿಸಿಕೊಳ್ಳುತ್ತಿರುವುದು ರೈತರಲ್ಲಿ ಭಯ ತಂದಿದೆ.
ಭತ್ತದ ಗಿಡಗಳು ತೆನೆ ಬಿಡುವ ಸಮಯದಲ್ಲಿ ಮಳೆ ಹೆಚ್ಚಾದರೆ ಇಳುವರಿ ಮೇಲೆ ನೇರ ಪರಿಣಾಮ ಬೀರಿ ಬೆಳವಣಿಗೆ ಕಡಿಮೆಯಾಗಿ ಜಳ್ಳು ಹೆಚ್ಚಾಗುತ್ತದೆ. ತೆನೆ ಬಿಟ್ಟ ಅನಂತರ ಗಾಳಿ ಮಳೆ ಬಂದರೆ ಗಿಡಗಳು ಬೀಳುವ ಸಾಧ್ಯತೆ ಇರುತ್ತದೆ. ಹೀಗಾದರೆ ಕಟಾವು ಕಷ್ಟ. ಗದ್ದೆಯಲ್ಲಿ ನೀರು ತುಂಬಿಕೊಂಡಿದ್ದು, ಭತ್ತ ಮೊಳಕೆ ಬರುವ ಸಾಧ್ಯತೆಯೂ ಹೆಚ್ಚಿದೆ. ಕಟಾವು ಮಾಡಿದ ಭತ್ತವನ್ನು ಸಂಗ್ರಹಿಸಿಡುವುದು ಕಷ್ಟ. ಮನೆಯ ಅಂಗಳದಲ್ಲಿ ಒಣಗಿಸಲು ಆಗುವುದಿಲ್ಲ. ಇದರಿಂದ ರೈತರಿಗೆ ನಷ್ಟವಾಗುವ ಸಂಭವವಿದೆ. ಸ್ಥಳೀಯ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಬೇಕಿದೆ ಎಂದು ಸಾರ್ವಜನಿಕರ ಆಗ್ರಹ.
Related Articles
ಭತ್ತದ ಕಟಾವಿಗೆ ಎಲ್ಲರೂ ಯಂತ್ರಗಳನ್ನೆ ಅವಲಂಬಿಸಿದ್ದರೂ ಸಾಕಷ್ಟು ಯಂತ್ರಗಳಿಲ್ಲ. ಉಡುಪಿಯಲ್ಲಿ 35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದು, 8 ಯಂತ್ರಗಳೇ ನಿರ್ವಹಿಸ ಬೇಕಿದೆ. ಕಟಾವು ಆರಂಭವಾದ ಅನಂತರ ಎರಡು ಅಥವಾ ಮೂರು ಯಂತ್ರ ಸೇರ್ಪಡೆಯಾಗಬಹುದು. 9500 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ಯ 11 ಯಂತ್ರವಿದೆ. ಇನ್ನೂ ಮೂರು ಅಥವಾ ನಾಲ್ಕು ಸೇರ್ಪಡೆಯಾಗಲಿದೆ. ಪ್ರತಿ ತಾಲೂಕಿಗೂ ಕನಿಷ್ಠ 4-5 ಯಂತ್ರಗಳ ಅಗತ್ಯವಿದೆ. ಯಂತ್ರಗಳ ಕೊರತೆಯಾದಂತೆೆ ಖಾಸಗಿ ಯಂತ್ರದ ದರವೂ ಏರಿಕೆಯಾಗಲಿದೆ. ಗಂಟೆ ಲೆಕ್ಕಾಚಾರದಲ್ಲಿ ದರ ವಿಧಿಸಲಾಗುತ್ತದೆ.
Advertisement
ಕೃಷಿ ವಿಜ್ಞಾನಿಗಳು ಭೇಟಿಜಿಲ್ಲೆಯ ವಿವಿಧ ಗದ್ದೆಗಳಲ್ಲಿ ಬೆಳೆದಿರುವ ಎಂಒ4 ತಳಿಯ ಇಳುವರಿ ಹೇಗಿದೆ ಮತ್ತು ಇದಕ್ಕೆ ಪರ್ಯಾಯವಾಗಿ ಯಾವ ತಳಿ ಅಭಿವೃದ್ಧಿ ಮಾಡಬಹುದು ಎಂಬುದನ್ನು ಪರಿಶೀಲಿಸಲು ಶಿವಮೊಗ್ಗದಲ್ಲಿರುವ ರಾಜ್ಯ ಬೀಜ ನಿಗಮದ ಅಧಿಕಾರಿಗಳು ಹಾಗೂ ಕೃಷಿ ಸಂಶೋಧನ ವಿಜ್ಞಾನಿಗಳು ಗದ್ದೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಟಾವು ಯಂತ್ರಗಳು ಸದ್ಯ ತಾಲೂಕುಗಳಲ್ಲಿ ಒಂದರಂತೆ ಲಭ್ಯವಿದೆ. ಕೆಲವೆಡೆ ಹೆಚ್ಚಿದೆ. ಇನ್ನಷ್ಟು ಯಂತ್ರಗಳು ಬರಲಿವೆ. ಕಟಾವು ಆರಂಭವಾಗುವುದರೊಳಗೆ ರೈತರಿಗೆ ಯಂತ್ರದ ಲಭ್ಯತೆ ಇರಲಿದೆ.
ಡಾ| ಸೀತಾ ಎಂ.ಸಿ., ಹೊನ್ನಪ್ಪಗೌಡ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ಉಡುಪಿ, ದ.ಕ., – ರಾಜು ಖಾರ್ವಿ ಕೊಡೇರಿ