Advertisement

ಉಡುಪಿ  ಶೈಲಿಯ ಕಾಳು ಲಾಡು, ಅಕ್ಕಿ ವಡೆ

10:46 PM Jan 03, 2020 | mahesh |

ಉಡುಪಿ ಶ್ರೀಕೃಷ್ಣಮಠದಲ್ಲಿ ಮಕರಸಂಕ್ರಾಂತಿ ಮರುದಿನ ಚೂರ್ಣೋತ್ಸವಕ್ಕೆ ಕೆಲವೊಂದು ಭಕ್ಷ್ಯಗಳು ವಿಶೇಷ. ಭೋಜನದ ವೇಳೆ ಅಶ್ವತ್ಥಾಮಾಚಾರ್ಯರು ಬರುತ್ತಾರೆಂಬ ನಂಬಿಕೆ ಇದಕ್ಕಿದೆ. ಬೆಲ್ಲದಿಂದ ಮಾಡಿದ ಕಾಳುಲಾಡು (ಬೂಂದಿ ಲಾಡು), ಅಕ್ಕಿ ಹಿಟ್ಟಿನ ವಡೆ ಮಾಡುತ್ತಾರೆ. ಸಂಕ್ರಾಂತಿ ಹಬ್ಬದ ಸಂಭ್ರಮಕ್ಕೆ ನಾವೂ ಇದನ್ನು ತಯಾರಿಸಬಹುದು.

Advertisement

ಬೂಂದಿ ಲಾಡು
ಕಡಲೆ ಹಿಟ್ಟನ್ನು ಕಾಳು ಮಾಡಿ ಹುರಿಯುತ್ತಾರೆ. ಅದಕ್ಕೆ ಲವಂಗ, ಏಲಕ್ಕಿ, ಪಚ್ಚಕರ್ಪೂರ, ಗೇರು ಬೀಜಗಳನ್ನು ಹಾಕಿ ಬೆಲ್ಲದ ಪಾಕದಲ್ಲಿ ಉಂಡೆ ಕಟ್ಟುತ್ತಾರೆ.

ಅಕ್ಕಿ ವಡೆ
ಅಕ್ಕಿಹಿಟ್ಟಿನ ಜತೆ ಉದ್ದಿನ ಹಿಟ್ಟನ್ನೂ ಸೇರಿಸಿ ಇಂಗು, ಖಾರದ ಪುಡಿ, ಉಪ್ಪು, ಹಸಿಮೆಣಸು ಮಿಶ್ರಣ ಮಾಡಿ ಎಣ್ಣೆಯಲ್ಲಿ ಕರಿಯುತ್ತಾರೆ.

ಇನ್ನು ಪಲಿಮಾರು ಪರ್ಯಾಯದ ಕೊನೆಗೆ ಅಂದರೆ ಜ.17ರಂದು ರವೆ ವಡೆ, ಎಳ್ಳು ಸಹಿತ ವಿವಿಧ ಧಾನ್ಯಗಳ ಉಂಡೆ, ಪಂಚರತ್ನ ಲಾಡು, ಪಾಯಸ ವಿಶೇಷ. ಹುರಿದ ರವೆಗೆ ಹಸಿಮೆಣಸು, ಶುಂಠಿ, ತುರಿದ ತೆಂಗಿನ ಕಾಯಿ, ಜೀರಿಗೆ ಮಿಶ್ರಣ ಮಾಡಿ ಬಿಸಿ ಎಣ್ಣೆಯಲ್ಲಿ ಹುರಿದು ರವೆ ವಡೆ ತಯಾರಿಸುತ್ತಾರೆ. ಎಳ್ಳು, ಕಡಲೆ, ಹುರಿಗಡಲೆಯನ್ನು ಹುರಿದು ಪುಡಿ ಮಾಡಿ ಬೆಲ್ಲದ ಪಾಕದೊಂದಿಗೆ ತಯಾರಿಸುತ್ತಾರೆ ಉಂಡೆಯನ್ನು. ತುರಿದ ತೆಂಗಿನ ಕಾಯಿ, ಬೆಲ್ಲ, ದ್ರಾಕ್ಷಿ, ಖರ್ಜೂರ, ಸಣ್ಣ ಗೇರುಬೀಜವನ್ನು ಸೇರಿಸಿ ತಯಾರಿಸುವುದು ಪಂಚರತ್ನದ ವೈಶಿಷ್ಟ್ಯ.

Advertisement

Udayavani is now on Telegram. Click here to join our channel and stay updated with the latest news.

Next