Advertisement
ಕಾಪು: 10 ವಿದ್ಯಾರ್ಥಿನಿಯರು ವಾಪಸ್ಕಾಪು: ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಅವಕಾಶವಿಲ್ಲದ ಕಾರಣ ಕಾಪು ಸ.ಪ್ರ.ದ. ಕಾಲೇಜಿನ 10 ವಿದ್ಯಾರ್ಥಿನಿಯರು ಬುಧವಾರ ಮನೆಗೆ ಹಿಂದಿರುಗಿದರು.
ಹಳೆಯಂಗಡಿ: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ತರಗತಿ ಆರಂಭಗೊಂಡಾಗ 15 ಮಂದಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ಕಾಲೇಜು ಪ್ರಾಂಶುಪಾಲರು ನ್ಯಾಯಾ ಲಯದ ಆದೇಶದ ಬಗ್ಗೆ ಮನವರಿಕೆ ಮಾಡಿದರೂ ಪಟ್ಟು ಬಿಡದವರೊಂದಿಗೆ ಮೂಲ್ಕಿ ಪೊಲೀಸ್ ಠಾಣೆಯ ಎಎಸ್‌ಐ ಚಂದ್ರಶೇಖರ ಕೂಡ ಮಾತುಕತೆ ನಡೆಸಿದರು. ಆದರೆ ಮಾತುಕತೆ ಫಲ ಕಾರಿಯಾಗದೆ 15 ವಿದ್ಯಾರ್ಥಿನಿಯರು ತರಗತಿಗೆ ಹಾಜರಾಗದೆ ಮನೆಗೆ ತೆರಳಿದರು. ಮೂಲ್ಕಿ ಪೊಲೀಸರು ಕಾಲೇಜಿನಲ್ಲಿ ಭದ್ರತೆ ಒದಗಿಸಿದ್ದರು.
Related Articles
ಬ್ರಹ್ಮಾವರ: ಬಾರಕೂರು ಸರಕಾರಿ ಕಾಲೇಜಿನ ಪ್ರಥಮ ಪದವಿಯ ಓರ್ವ ವಿದ್ಯಾರ್ಥಿನಿ ಹಿಜಾಬ್ ಧರಿಸಿ ಆಗಮಿ ಸಿದ್ದು, ಪ್ರಾಂಶುಪಾಲರು ಕೋರ್ಟ್ ಆದೇಶದ ಬಗ್ಗೆ ಮನವರಿಕೆ ಮಾಡಿದರು. ಪರೀಕ್ಷೆ ತಯಾರಿಗಾಗಿ ಆಕೆ ಮನೆಗೆ ಮರಳಿರುವುದಾಗಿ ತಿಳಿದು ಬಂದಿದೆ.
Advertisement
ಮೂಡುಬಿದಿರೆ: 6 ಮಂದಿ ಮನೆಗೆಮೂಡುಬಿದಿರೆ: ಶ್ರೀ ಮಹಾವೀರ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಬಂದ 6 ವಿದ್ಯಾರ್ಥಿಗಳಿಗೆ ತರಗತಿ ಪ್ರವೇಶಕ್ಕೆ ಅವಕಾಶ ನಿರಾಕರಿಸಲಾಯಿತು. ಅವರು ಮನೆಗೆ ವಾಪಸಾದರು. ಇಲ್ಲಿನ 10 ಮುಸ್ಲಿಂ ವಿದ್ಯಾರ್ಥಿನಿಯರಲ್ಲಿ 6 ಮಂದಿ ಹಿಜಾಬ್ ಧರಿಸಿ ಬಂದಿದ್ದರು. ವಿಟ್ಲ: 11 ವಿದ್ಯಾರ್ಥಿನಿಯರು ವಾಪಸ್
ವಿಟ್ಲ: ಇಲ್ಲಿ ಸ.ಪ್ರ.ದ. ಕಾಲೇಜಿನಲ್ಲಿ 11 ಮಂದಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದು, ತರಗತಿಗೆ ಹಾಜರಾಗದೆ ಮನೆಗೆ ಹಿಂದಿರುಗಿದರು. ಮಹಿಳಾ ಕೋಣೆಯಲ್ಲಿ ಹಿಜಾಬ್ ಕಳಚಿ ತರಗತಿಗೆ ತೆರಳಿ ಎಂದು ಪ್ರಾಂಶುಪಾಲರು ವಿನಂತಿಸಿದ್ದರೂ ವಿದ್ಯಾರ್ಥಿಗಳು ಮನೆಗೆ ಮರಳಿದರು. 23 ವಿದ್ಯಾರ್ಥಿನಿಯರು ಹಿಂದಕ್ಕೆ
ಕಿನ್ನಿಗೋಳಿ: ಪಾಂಪೈ ಪದವಿ ಕಾಲೇಜಿ ನಲ್ಲಿ ಹಿಜಾಬ್ ಧರಿಸಿ ಬಂದ 23 ವಿದ್ಯಾರ್ಥಿನಿಯರಲ್ಲಿ ಪ್ರಾಂಶುಪಾಲರು ಕೋರ್ಟ್ ಆದೇಶ ಪಾಲಿಸುವಂತೆ ತಿಳಿಸಿದ್ದು, ಒಪ್ಪದ ಕಾರಣ ಮನೆಗೆ ವಾಪಾಸಾಗಿದ್ದಾರೆ. ಸುಳ್ಯ: 7 ಮಂದಿ ವಾಪಸ್
ಸುಳ್ಯದ ನೆಹರೂ ಮೆಮೋರಿಯಲ್ ಪದವಿ ಕಾಲೇಜಿನಲ್ಲಿ 13 ವಿದ್ಯಾರ್ಥಿನಿ ಯರು ಹಿಜಬ್ ಧರಿಸಿ ಬಂದಿದ್ದರು. ಇದರಲ್ಲಿ ನಾಲ್ವರು ಹಿಜಬ್ ತೆಗೆದು ತರಗತಿಗೆ ಹಾಜರಾದರು. ಉಳಿದವರು ವಾಪಸಾಗಿದ್ದಾರೆ ಎಂದು ಎಸ್‌ಪಿ ಋಷಿಕೇಶ್ ಸೋನಾವಣೆ ತಿಳಿಸಿದ್ದಾರೆ. ಮಂಗಳೂರು ಕಮಿಷನರೆಟ್
28 ಮಂದಿ ವಾಪಸ್
ಬುಧವಾರ ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯ 6 ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದು, ಈ ಪೈಕಿ 2 ಕಾಲೇಜುಗಳ ಒಟ್ಟು 28 ವಿದ್ಯಾರ್ಥಿಗಳ ವಿನಾ ಉಳಿದವರು ಹಿಜಾಬ್ ತೆಗೆದು ತರಗತಿಗೆ ಹಾಜರಾಗಿದ್ದಾರೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.