Advertisement

Udupi; ಹೊರರಾಜ್ಯದ ಕಾರ್ಮಿಕರ ತಂಡಗಳ ಬೀದಿ ಕಾಳಗ: ಹಲವರು ವಶಕ್ಕೆ

09:01 PM Sep 23, 2024 | Team Udayavani |

ಉಡುಪಿ: ನಗರದಲ್ಲಿ ನೆಲೆಸಿರುವ ಹೊರರಾಜ್ಯದ ಕಾರ್ಮಿಕರ ತಂಡ ಪರಸ್ಪರ ಬಡಿದಾಡಿಕೊಂಡ ಘಟನೆ ನಡೆದಿದೆ. ನಗರದ ಪುತ್ತೂರು ನಯಂಪಳ್ಳಿ ಸ್ವರ್ಣ ನದಿ ಸೇತುವೆ ಸಮೀಪ ಎಪಿಜಿ ಲೇಬರ್ ಕಾಲನಿಯಲ್ಲಿ ಸೋಮವಾರ(ಸೆ23 ) ಬೆಳಗ್ಗೆ ಗಲಾಟೆ ಮಾಡಿಕೊಂಡು ಸಾರ್ವಜನಿಕರಲ್ಲಿ ಭಯದ ವಾತಾವರಣ ಮೂಡಿಸಿದ್ದರು.

Advertisement

ಪೈಪ್‌ಲೈನ್ ಕಾಮಗಾರಿಗಾಗಿ ಉಡುಪಿಗೆ ಬಂದಿರುವ ಇವರು ಯಾವುದೋ ಕಾರಣಕ್ಕೆ ಪರಸ್ಪರ ಬಡಿದಾಡಿಕೊಂಡಿದ್ದಾರೆ. ಇದನ್ನು ಗಮನಿಸಿದ್ದ ಸಾರ್ವಜನಿಕರು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದು, ಪೊಲೀಸರು ಬರುವಷ್ಟರಲ್ಲಿ ಗಲಾಟೆ ನಿಲ್ಲಿಸಿದ್ದಾರೆ.

ಘಟನೆ ಸಂಬಂಧ ಯಾರು ಗಂಭೀರ ಗಾಯಗೊಂಡಿಲ್ಲ. ಕ್ಷುಲ್ಲಕ ಕಾರಣಕ್ಕೆೆ ತಂಡದೊಳಗೆ ಗಲಾಟೆ ಸಂಭವಿಸಿದ್ದು, ಉಡುಪಿ ನಗರ ಠಾಣೆ ಪೊಲೀಸರು ಸುಮೊಟೊ ಪ್ರಕರಣ ದಾಖಲಿಸಿ, ವಿಚಾರಣೆ ನಡೆಸಿದ್ದಾರೆ.

ಆರೋಪಿಗಳಾದ ಮೂಖ್ರಾಮ್, ಸುಭಾಷ್ ಕುಮಾರ್, ಅಶೀಮ್, ವಿಕಾಸ್, ಸ್ಯಾಂಟ್ ಲಾಲ್, ವಿಶಾಲ್, ಮಗೇಶ್, ಅಖಿಲೇಶ್ ಎಂಬವರನ್ನು ವಶಕ್ಕೆ ಪಡೆದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next