Advertisement

ಉಡುಪಿ: ಮನೆಯಿಂದ ಕಳವು; ಇಬ್ಬರು ಆರೋಪಿಗಳ ಬಂಧನ

02:06 AM Jul 20, 2019 | Sriram |

ಉಡುಪಿ: ಈ ತಿಂಗಳ 16ರಂದು ರಾತ್ರಿ ಇಂದಿರಾ ನಗರದ ಮನೆಯಿಂದ ಚಿನ್ನಾಭರಣ ಮತ್ತು ನಗದು ಕಳವು ಮಾಡಿದ್ದ ಆರೋಪದಲ್ಲಿ ನಗರ ಪೊಲೀಸರು ಇಬ್ಬರನ್ನು ಜು.19ರಂದು ಬೆಳಗ್ಗೆ ಕುಕ್ಕಿಕಟ್ಟೆಯಲ್ಲಿ ಬಂಧಿಸಿದ್ದಾರೆ.

Advertisement

ಮೂಲತಃ ಹೊಸನಗರದವ ನಾಗಿದ್ದು, ಪ್ರಸ್ತುತ ಇಂದಿರಾ ನಗರದ ಸಂಬಂಧಿಕರ ಮನೆಯಲ್ಲಿದ್ದ ಮಹಮ್ಮದ್‌ ಫಾರೂಕ್‌ (18) ಹಾಗೂ ಇಂದಿರಾ ನಗರದ ನಿವಾಸಿ ಅಫ‌್ಜಲ್ (19) ಬಂಧಿತರು. ಇವರಿಂದ 66.850 ಗ್ರಾಂ ತೂಕದ ಚಿನ್ನಾಭರಣ, 4,800 ರೂ. ಮೌಲ್ಯದ 3 ಮೊಬೈಲ್ ಫೋನ್‌ಗಳು ಸಹಿತ ಒಟ್ಟು 1, 69,800 ರೂ. ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ನಗರ ಠಾಣಾಧಿಕಾರಿ ಅನಂತ ಪದ್ಮನಾಭ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಜಿಲ್ಲಾ ಪೊಲೀಸ್‌ ಕಚೇರಿಯ ಎಎಸ್‌ಐ ಅಚ್ಯುತ, ನಗರ ಠಾಣೆಯ ಎಎಸ್‌ಐ ಗೋಪಾಲಕೃಷ್ಣ ಜೋಗಿ, ವಿಜಯ, ಜೀವನ್‌ ಕುಮಾರ್‌, ಲೋಕೇಶ್‌, ಬಾಲಕೃಷ್ಣ, ಮಾಲತಿ, ಕಾನ್‌ಸ್ಟೆಬಲ್ಗಳಾದ ಕಿರಣ, ಸಂಗನಗೌಡ, ಇಮ್ರಾನ್‌, ವಿಶ್ವನಾಥ್‌, ಸಂತೋಷ್‌ ರಾಥೋಡ್‌, ಚಾಲಕ ರವೀಂದ್ರ, ಪ್ರಸಾದ್‌, ರಾಘವೇಂದ್ರ ಮೊದಲಾದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next