Advertisement

Udupi:ಶ್ರೀ ಕ್ಷೇತ್ರ ದೊಡ್ಡಣಗುಡ್ಡೆ:ನವರಾತ್ರಿ ಉತ್ಸವ:ಅತ್ತಿರಸ ಮಹಾಪ್ರಸಾದ ತಯಾರಿಗೆ ಚಾಲನೆ

12:13 AM Oct 03, 2024 | Team Udayavani |

ಉಡುಪಿ: ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ನವರಾತ್ರಿಯಪರ್ವಕಾಲದಲ್ಲಿ ಕ್ಷೇತ್ರದ ನಿತ್ಯ ಪ್ರಸಾದ ವಾಗಿ “ಅತ್ತಿರಸ’ ಭಕ್ತರಿಗೆ ಲಭಿಸುವಂತೆ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಸಂಕಲ್ಪಿಸಿದ್ದರು.

Advertisement

ಶ್ರೀಚಕ್ರಪೀಠ ಸುರಪೂಜಿತೆ ರಾಜ ರಾಜೇಶ್ವರಿಗೆ ಅತಿ ಪ್ರಿಯವೆನಿಸಿದ ಸಿಹಿಭಕ್ಷ್ಯ ತಯಾರಿಕೆಗೆ ಅನ್ನಪೂರ್ಣ ಭೋಜನಾಲಯದಲ್ಲಿ ಪಾಕತಜ್ಞ ಪ್ರಸಾದ್‌ ಸೋಮಯಾಜಿ ನೇತೃತ್ವದಲ್ಲಿ ಅರ್ಚಕ ಅನೀಶ್‌ ಆಚಾರ್ಯರ ಪೌರೋಹಿತ್ಯದಲ್ಲಿ ಪೂಜಾ ವಿಧಿವಿಧಾನ ನೆರವೇರಿಸಿದ ಬಳಿಕ ಶ್ರೀ ರಮಾನಂದ ಗುರೂಜಿ ಸಾಂಕೇತಿಕವಾಗಿ ಚಾಲನೆ ನೀಡಿದರು.

ಅನಂತರ ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್‌ ಅಗ್ನಿ ಪ್ರಜ್ವಲಿಸಿ ದರು. ಉಷಾ ರಮಾನಂದ, ಆನಂದ ಬಾಯರಿ, ಸ್ವಸ್ತಿಕ್‌ ಆಚಾರ್ಯ, ಚಂದ್ರ ಕಲಾ ಶರ್ಮ, ಪ್ರತಿಮಾ ಭಟ್‌, ಗಣೇಶ್‌ ದೇವಾಡಿಗ, ಭಕ್ತರು ಉಪಸ್ಥಿತರಿದ್ದರು.

ಹೊರೆ ಕಾಣಿಕೆಗೆ ಚಾಲನೆ
ಕ್ಷೇತ್ರದಲ್ಲಿ 10 ದಿನಗಳ ಕಾಲ ನೆರವೇರಲಿರುವ ನವರಾತ್ರಿ ಮಹೋತ್ಸವ ದ ನಿರಂತರ ಅನ್ನಸಂತರ್ಪಣೆಗೆ ಊರಹಾಗೂ ಪರವೂರ ಭಕ್ತರಿಂದ ಬಂದ ಹೊರೆಕಾಣಿಕೆಯನ್ನು ಕ್ಷೇತ್ರಕ್ಕೆ ಸಮರ್ಪಿಸುವ ಮೂಲಕ ಚಾಲನೆ ನೀಡಲಾಯಿತು. ಶ್ರೀ ರಮಾನಂದ ಗುರೂಜಿ ಉಪಸ್ಥಿತಿಯಲ್ಲಿ ದಾನಿಗಳಾದ ಶಿವ ಮೊಗ್ಗದ ವಿಶ್ವನಾಥ್‌, ಲಲಿತಾ ದಂಪತಿ, ಉಡುಪಿಯ ವಿವೇಕ್‌ ರಾವ್‌, ನಳಿನಿ ದಂಪತಿ ಹೊರೆಕಾಣಿಕೆಯ ನೇತೃತ್ವ ವಹಿಸಿದ್ದರು. ಸಮರ್ಪಣೆಗೆ ಬೇಕಾದ ದಿನಸಿ ಸಾಮಗ್ರಿಗಳು, ತರಕಾರಿಗಳನ್ನು ಪೂಜಿಸಿ ಅನ್ನಪೂರ್ಣೆಯನ್ನು ಪ್ರಾರ್ಥಿಸಲಾಯಿತು.

ನವರಾತ್ರಿ ಪೂರ್ವಭಾವಿ ಕಾರ್ಯಕ್ರಮ
ಕ್ಷೇತ್ರದಲ್ಲಿ ಬುಧವಾರ ಸಂಜೆ ಗಣೇಶ್‌ ಸರಳಾಯರ ನೇತೃತ್ವದಲ್ಲಿ ವೇ| ಮೂ| ಕೊಲಕಾಡಿ ವಾದಿರಾಜ ಉಪಾಧ್ಯಾಯರು ಸಾಮೂಹಿಕ ದೇವತಾ ಪ್ರಾರ್ಥನೆಯೊಂದಿಗೆ ತೋರಣ ಮಹೂರ್ತ ಉಗ್ರಾಣ ಮುಹೂರ್ತ, ತರಕಾರಿ ಮುಹೂರ್ತಗಳನ್ನು ನೆರವೇರಿಸಿದರು. ಕ್ಷೇತ್ರ ಹಾಗೂ ಯಾಗ ಮಂಟಪದಲ್ಲಿ ವಾಸ್ತು ಹೋಮ, ಪ್ರಾಕಾರ ಬಲಿ, ಪ್ರಸಾದ ಶುದ್ಧಿ, ಮಂಟಪ ಸಂಸ್ಕಾರ ಪ್ರಕ್ರಿಯೆ ಹಾಗೂ ರಾಕ್ಷೊಘ್ನಾದಿ ಪ್ರಕ್ರಿಯೆಗಳು ನೆರವೇರಿತು. ನಿರಂತರ ಹತ್ತು ದಿನಗಳ ಕಾಲ ಜೋಡಿ ಚಂಡಿಕಾಯಾಗ, ದುರ್ಗಾ ನಮಸ್ಕಾರ ಪೂಜೆ, ಶ್ರೀ ಲಲಿತಾ ಸಹಸ್ರ ಕದಳೀಯಾಗ, ತ್ರಿಲೋಕೇಶ್ವರಿ ಮಹಾಯಾಗ, ಲಕ್ಷ್ಮೀ ಸಹಸ್ರನಾಮ ಯಾಗ, ಗಾಯತ್ರಿ ಮಂತ್ರ ಮಹಾಯಾಗ, ನಿರಂತರ ಅನ್ನಸಂತರ್ಪಣೆಯೊಂದಿಗೆ ನೆರವೇರಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next