Advertisement
ಭಕ್ತರ ಸಹಕಾರದಿಂದ 100 ಕೆಜಿಗೂ ಮಿಕ್ಕಿ ಸುವರ್ಣ, 800ರಿಂದ 900 ಕೆಜಿ ಬೆಳ್ಳಿ, 300 ಕೆಜಿ ತಾಮ್ರದ ಫಲಕಗಳಿಂದ ಗೋಪುರ ನಿರ್ಮಾಣಗೊಂಡಿದೆ.
ಈ ಮಹೋತ್ಸವವು ಅನೇಕ ಅಂಶಗಳಿಂದ ಅತ್ಯಪೂರ್ವವಾಗಿದೆ. ದೇಗುಲಗಳಲ್ಲಿ 12 ವರ್ಷಗಳಿಗೊಮ್ಮೆ ಬ್ರಹ್ಮಕಲಶೋತ್ಸವ ನಡೆಯುತ್ತದೆ. ಆದರೆ ಉಡುಪಿಯ ಶ್ರೀ ಕೃಷ್ಣ ದೇವರ ಸನ್ನಿಧಿಯು ಮಠವಾಗಿರುವುದರಿಂದ ಇಲ್ಲಿಯ ಪ್ರಕ್ರಿಯೆಗಳು ವಿಭಿನ್ನ ವಾದವು. ಶ್ರೀ ಮಧ್ವಾಚಾರ್ಯರು ಪ್ರತಿಷ್ಠಾಪಿಸಿದ ವಿಗ್ರಹದಲ್ಲಿ ಶ್ರೀಕೃಷ್ಣ ದೇವರು ಸ್ವಯಂಸನ್ನಿಹಿತರಾಗಿದ್ದಾರೆ. ಈ ನೆಲೆಯಲ್ಲಿ ಪ್ರಸ್ತುತ ನಡೆಯಲಿರುವ ಬ್ರಹ್ಮಕಲಶೋತ್ಸವ, ಶಿಖರ ಪ್ರತಿಷ್ಠೆ ಮೊದಲಾದ ಪ್ರಕ್ರಿಯೆಗಳು ಅತ್ಯಪೂರ್ವ. ಈ ಸುವರ್ಣ ಗೋಪುರವು ಜಗದ್ಗುರು ಶ್ರೀ ಮನ್ಮಧ್ವಾಚಾರ್ಯರು ರಚಿಸಿದ ಸರ್ವಮೂಲ ಗ್ರಂಥಗಳು, 21,600 ಹಂಸ ಮಂತ್ರ ಲೇಖನದಿಂದ ಕೂಡಿದ್ದು ಅನ್ವರ್ಥ ಸು-ವರ್ಣಗೋಪುರವಾಗಿ ವಿಜೃಂಭಿಸಲಿದೆ.
Related Articles
Advertisement
ವೈಭವದ ಶೋಭಾಯಾತ್ರೆಶ್ರೀಕೃಷ್ಣ ಮಠದಲ್ಲಿ ಜೂ. 6ರಂದು ಶಿಖರ ಪ್ರತಿಷ್ಠೆ, ಜೂ. 9ರಂದು ಶ್ರೀಕೃಷ್ಣ ದೇವರಿಗೆ ಬ್ರಹ್ಮಕಲಶಾಭಿಷೇಕ ಮಹೋತ್ಸವಗಳು ನಡೆಯಲಿವೆ. ಜೂ. 1ರಂದು ಜೋಡುಕಟ್ಟೆ
ಯಿಂದ ಶ್ರೀಕೃಷ್ಣ ಮಠದ ವರೆಗೆ ಮೆರವಣಿಗೆ ನಡೆಯಲಿದ್ದು, ಶೋಭಾಯಾತ್ರೆಯಲ್ಲಿ ಶತಮಾನದ ಇತಿಹಾಸವಿರುವ ದೇವರ ಸನ್ನಿಧಿ ಯುಕ್ತವಾದ 3 ಸುವರ್ಣ ಕಲಶಗಳನ್ನು ತರಲಾಗುವುದು. ದೇಶದ ಮೂಲೆ ಮೂಲೆಗಳಿಂದ ವಿವಿಧ ಕಲಾವಿದರ ತಂಡಗಳು, ಭಜನ ಮಂಡಳಿಗಳು, ವಾದ್ಯ ವೃಂದಗಳು, ಗಣ್ಯರು, ಭಕ್ತರು ಪಾಲ್ಗೊಳ್ಳಲಿದ್ದಾರೆ. ದೇಶದ ಪ್ರಸಿದ್ಧ ಕಲಾವಿದ ಮಹಾಭಾರತ ಧಾರಾವಾಹಿಯ ಶ್ರೀಕೃಷ್ಣ ಪಾತ್ರಧಾರಿ, ಅರ್ಜುನ ಪಾತ್ರಧಾರಿಗಳೊಂದಿಗೆ ಭಾರತಾಂಬೆಯ ವೀರಪುತ್ರ ಅಭಿನಂದನ್ ವರ್ಧಮಾನ್ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ. ಪ್ರಸಾದ ರೂಪದಲ್ಲಿ ರಜತ ಕಲಶ
ಬ್ರಹ್ಮಕಲಶೋತ್ಸವಕ್ಕೆ ವಿನಿಯೋಗಿಸಲಾಗುವ ಸಾವಿರ ರಜತ ಕಲಶಗಳನ್ನು ಶೋಭಾಯಾತ್ರೆಯಲ್ಲಿ ತರಲಾಗುವುದು. ಭಕ್ತರಿಗೆ ಈ ಕಲಶಗಳನ್ನು ಪಡೆಯುವ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ಶ್ರೀ ಕೃಷ್ಣ ದೇವರಿಗೆ ಅಭಿಷೇಕ ಮಾಡಿದ ರಜತ ಕಲಶವನ್ನು ಬ್ರಹ್ಮಕಲಶಾಭಿಷೇಕಕ್ಕಾಗಿ ನಿರ್ದಿಷ್ಟ ಮೊತ್ತದ ಕಾಣಿಕೆ ನೀಡಿದ ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡಲಾಗುವುದು.