Advertisement

ಉಡುಪಿ ಶ್ರೀಕೃಷ್ಣ ಮಠ: ಸ್ವರ್ಣಗೋಪುರ ದರ್ಶನಕ್ಕೆ ಲಿಫ್ಟ್ ವ್ಯವಸ್ಥೆ

01:04 AM Oct 15, 2019 | mahesh |

ಉಡುಪಿ: ಶ್ರೀಕೃಷ್ಣ ಮಠದ ಗರ್ಭಗುಡಿಗೆ ನಿರ್ಮಿಸಲಾಗಿರುವ ಸ್ವರ್ಣಗೋಪುರವನ್ನು ಭಕ್ತರು ದರ್ಶನ ಮಾಡುವುದಕ್ಕಾಗಿ ಲಿಫ್ಟ್ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ.

Advertisement

ದೇವರ ದರ್ಶನ ಮಾಡಿ ಹೊರಬರುವ ಸ್ಥಳದಲ್ಲಿ ಇದಕ್ಕಾಗಿ ಕಾಮಗಾರಿ ನಡೆಯುತ್ತಿದೆ. ಇದು ಭೋಜನ ಶಾಲೆಗೆ ಪಕ್ಕಕ್ಕಿರುವ ಒಳಕೊಠಾರದಲ್ಲಿ ನಿರ್ಮಾಣವಾಗುತ್ತಿದೆ. ಇದರ ಇನ್ನೊಂದು ಬದಿ ಮಧ್ವಸರೋವರದ ಎಡಭಾಗದ ಕೆಳಗಿನ ಭಾಗವಿದೆ. ಕೆಳಗೆ ಸರೋವರದಲ್ಲಿ ಸ್ನಾನ ಮಾಡುವ ಸ್ತ್ರೀಯರಿಗೆ ಬಟ್ಟೆ ಬದಲಾಯಿಸುವ ಒಂದು ಕೋಣೆಯನ್ನು ನಿರ್ಮಿಸಲಾಗುತ್ತದೆ. ಅದರ ಮೇಲಿನಿಂದ ಎರಡು ಸ್ಲಾಬ್‌ ನಿರ್ಮಾಣ ಆಗುತ್ತದೆ. ಲಿಫ್ಟ್ ಅಳವಡಿಸಿದ ಬಳಿಕ ಮೇಲೆ ಹೋಗಿ ಗೋಪುರವನ್ನು ವೀಕ್ಷಿಸಲು ಸಾಧ್ಯವಾಗುತ್ತದೆ.

ಪ್ರಸ್ತುತ ಕೃಷ್ಣ ಮಠದ ಒಳಗಿನ ಸುತ್ತಿನಲ್ಲಿ ಗೋಪುರ ಸರಿಯಾಗಿ ಕಾಣುತ್ತಿಲ್ಲ. ಒಳಗಿನ ಸುತ್ತಿನಲ್ಲಿ ಮೇಲೆ ಹೋಗಿ ನೋಡಲು ಸಾಧ್ಯವಿದೆ. ಆದರೆ ಎಲ್ಲರಿಗೂ ಇದು ಕಷ್ಟಸಾಧ್ಯ. ಹೀಗಾಗಿ ಹೊರಭಾಗದಲ್ಲಿ ಲಿಫ್ಟ್ ನಲ್ಲಿ ಹೋಗಿ ನೋಡಿ ಅಲ್ಲಿಂದ ಎರಡು ಕಡೆ ಹೊರಹೋಗಲು ಅವಕಾಶ ನೀಡಲಾಗುತ್ತದೆ. ಒಂದು ಕೃಷ್ಣ ಮಠದ ಹೊರಗೆ ರಥಬೀದಿಗೆ ಹೋಗಲು, ಇನ್ನೊಂದು ಭೋಜನಶಾಲೆಗೆ ಹೋಗಲು ಅನುಕೂಲವಾಗುವಂತೆ ನಿರ್ಮಿಸಲಾಗುತ್ತದೆ.

ಲಿಫ್ಟ್ ವೆಚ್ಚ ಹೊರತುಪಡಿಸಿ ಒಟ್ಟು 80 ಲ.ರೂ. ವೆಚ್ಚದಲ್ಲಿ ಈ ಕಾಮಗಾರಿ ನಡೆಯಲಿದೆ. ಜ. 17ರಂದು ಪಲಿಮಾರು ಮಠದ ಪರ್ಯಾಯ ಅವಧಿ ಮುಗಿಯುತ್ತಿದ್ದು, ಅಷ್ಟರೊಳಗೆ ಕಾಮಗಾರಿಗಳನ್ನು ಮುಕ್ತಾಯಗೊಳಿಸಲು ನಿರ್ಧರಿಸಲಾಗಿದೆ.

ಮಧ್ವಸರೋವರದಲ್ಲಿ ಸ್ನಾನ ಮಾಡಿದ ಮಹಿಳೆಯರಿಗೆ ಬಟ್ಟೆ ಬದಲಾಯಿಸಲು ಒಂದು ಸುಸಜ್ಜಿತ ಕೋಣೆಯನ್ನು ನಿರ್ಮಿಸುವುದರ ಜತೆಗೆ ಸ್ವರ್ಣಗೋಪುರ ವೀಕ್ಷಿಸಲು ಅನುಕೂಲವಾಗುವಂತೆ ಲಿಫ್ಟ್ ಅಳವಡಿಸಲಾ ಗುವುದು. ಇದನ್ನು ಪರ್ಯಾಯದ ಅವಧಿಯೊಳಗೆ ಮುಕ್ತಾಯಗೊಳಿಸಲು ಶ್ರೀ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ನಿರ್ಧರಿಸಿದ್ದಾರೆ.
– ಪ್ರಹ್ಲಾದ ರಾವ್‌ ಆಡಳಿತಾಧಿಕಾರಿ, ಪರ್ಯಾಯ ಶ್ರೀ ಪಲಿಮಾರು ಮಠ, ಉಡುಪಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next