Advertisement
ಉಡುಪಿ : ಕೆಲವು ವರ್ಷಗಳ ಹಿಂದೆ ತೆರೆಯ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಮಾದಕ ವಸ್ತುಗಳ ದಂಧೆಯ ಜಾಲ ಈಗ ರಾಜಾರೋಷವಾಗಿ ಕಾರ್ಯ ನಿರ್ವ ಹಿಸುತ್ತಿದ್ದು, ಶಿಕ್ಷಣ ಕಾಶಿಯೆಂಬ ಕರಾವಳಿಯ ಖ್ಯಾತಿಗೆ ಕಪ್ಪುಚುಕ್ಕೆಯಾಗಿ ಪರಿಣಮಿಸತೊಡಗಿದೆ.
ದಲ್ಲಿ ಮಂಗಳೂರಿನಲ್ಲಿ ಎಂಬಿಬಿಎಸ್ ವಿದ್ಯಾರ್ಥಿಗಳು ಸೇರಿ 10 ಮಂದಿ ಯನ್ನು ಪೊಲೀಸರು ಬಂಧಿಸಿರುವುದು ಈ ಕರಾಳ ದಂಧೆಯ ಬೇರು ಇಳಿ ಯುತ್ತಿರುವ ಆಳವನ್ನು ಬಹಿರಂಗ ಗೊಳಿಸಿದೆ.
Related Articles
ಉಡುಪಿ ಜಿಲ್ಲೆಯಲ್ಲಿಯೂ ಮಾದಕ ವಸ್ತುಗಳ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದ್ದು, ಇತ್ತೀಚೆಗಷ್ಟೇ ಕಾಲೇಜೊಂದರ ಇಬ್ಬರು ವಿದ್ಯಾರ್ಥಿ ಗಳನ್ನು ಅಮಾನತು ಮಾಡಲಾಗಿದೆ. ಅವಿಭಜಿತ ದ.ಕ. ಜಿಲ್ಲೆಯಲ್ಲಿ 5 ವರ್ಷಗಳಲ್ಲಿ ಮಾದಕ ವಸ್ತು ವಿರೋಧಿ ನಿಯಮದಡಿ (ಎನ್‌ಡಿಪಿಎಸ್) ಅಡಿ ಮಾದಕ ವಸ್ತು ಸಾಗಣೆಗೆ ಸಂಬಂಧಿಸಿ 151 ಪ್ರಕರಣಗಳು ದಾಖಲಾಗಿವೆ. ಒಟ್ಟು 270 ಮಂದಿಯನ್ನು ಬಂಧಿಸಲಾಗಿದೆ. ವಶಪಡಿಸಿಕೊಂಡಿರುವ ನಿಷೇಧಿತ ವಸ್ತುಗಳ ಮೌಲ್ಯ 20,049,035 ರೂ.! ಆದರೆ ಇದು ಇಡೀ ಕರಾಳ ದಂಧೆಯ ಒಂದು ಹಿಡಿಯಷ್ಟೇ !
Advertisement
ಉಭಯ ಜಿಲ್ಲೆಗಳ ಪ್ರಮುಖ ನಗರಗಳಲ್ಲಿ ರಾತ್ರಿ ವೇಳೆ ನಡೆಯುವ ಮೋಜು ಮಸ್ತಿ, ಪಾರ್ಟಿಗಳು, ಪಬ್‌ಗಳೂ ಹೆಚ್ಚಾಗಿವೆ. ಇಲ್ಲೆಲ್ಲ ಮಾದಕ ವಸ್ತು ಪೂರೈಕೆ ಹಾಗೂ ಸೇವನೆ ಎಗ್ಗಿಲ್ಲದೇ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ವೀಕೆಂಡ್, ರಜಾದಿನಗಳಲ್ಲಿ ಪಬ್‌ಗಳು, ಪಾರ್ಟಿಗಳು ಮಧ್ಯರಾತ್ರಿ 2 ರವರೆಗೂ ನಿರಾತಂಕವಿಲ್ಲದೇ ನಡೆಯುತ್ತಿವೆ.
ಡ್ರಗ್ಸ್ ಬಳಕೆ: ಉಡುಪಿಗೆ 5ನೇ ಸ್ಥಾನ !ರಾಜ್ಯದ ಎನ್‌ಜಿಒ ಸಂಸ್ಥೆಯೊಂದು ಇತ್ತೀಚೆಗೆ ನಡೆಸಿದ ಸರ್ವೆಯ ಪ್ರಕಾರ ಡ್ರಗ್ಸ್ ಬಳಯಲ್ಲಿ ಉಡುಪಿ ಜಿಲ್ಲೆ 5ನೇ ಸ್ಥಾನ ಪಡೆದಿದೆ. ಬೆಂಗಳೂರು, ಕೋಲಾರ, ಮೈಸೂರು, ಕೊಡಗು, ಉಡುಪಿ, ರಾಮನಗರ ಕ್ರಮವಾಗಿ 1ರಿಂದ 6ರ ವರೆಗಿನ ಸ್ಥಾನ ಪಡೆದಿದೆ. ಜನರು ಎಚ್ಚೆತ್ತುಕೊಳ್ಳದಿದ್ದರೆ ಮತ್ತಷ್ಟು ಅನಾಹುತಗಳು ಸಂಭವಿಸುವ ಆತಂಕವಿದೆ.