Advertisement

Udupi; ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ : ಆಟಿಡೊಂಜಿ ದಿನ ಆಚರಣೆ

07:30 PM Aug 02, 2024 | Team Udayavani |

ಉಡುಪಿ: ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಶೂನ್ಯ ಮಾಸದ ವಿಶೇಷ ಸಂತರ್ಪಣೆಯಾಗಿ ಆಟಿಡೊಂಜಿ ದಿನವನ್ನು ಆಚರಿಸಲಾಯಿತು.

Advertisement

ಅನ್ನಸಂತರ್ಪಣೆಗೆ ಹೆಸರುವಾಸಿಯಾದ ಶ್ರೀ ಕ್ಷೇತ್ರದಲ್ಲಿ ಶುಕ್ರವಾರ (ಆಗಸ್ಟ್ 2)ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಅವರ ಅಪೇಕ್ಷೆಯಂತೆ 700ಕ್ಕೂ ಅಧಿಕ ಭಕ್ತರಿಗೆ ಮಹಾಪ್ರಸಾದವಾಗಿ ಆಟಿ ತಿಂಗಳಿನ ವಿಶೇಷ 36ಕ್ಕೂ ಅಧಿಕ ಬಗೆಯ ಖಾದ್ಯವನ್ನು ಬಾಳೆ ಎಲೆಯಲ್ಲಿ ಬಡಿಸಿ ಸಂತರ್ಪಣೆ ನೆರವೇರಿಸಲಾಯಿತು.

ಸಾಂಪ್ರದಾಯಿಕವಾಗಿ ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದ ಬಳಿಕ ಕಣಿಲೆ ಉಪ್ಪಿನಕಾಯಿ, ಎಲೆ ಸೊಪ್ಪು ಕೋಸಂಬರಿ, ಕೆಸುವಿನ ಎಲೆ ಚಟ್ನಿ, ಹುರುಳಿ ಚಟ್ನಿ, ಮಾವಿನಕಾಯಿ ಚಟ್ನಿ, ಪಂಚಪತ್ರೆ ಕಡ್ಲೆ ಪಲ್ಯ, ಹುರುಳಿಕಾಳು ಸೊಪ್ಪು ಪಲ್ಯ, ಪುದಿನ ಕೋಸಂಬರಿ, ಸಾಂಬಾರ ಸೊಪ್ಪು ಚಿತ್ರಾನ್ನ, ಪತ್ರೊಡೆ ಗಶಿ, ಪತ್ರೊಡೆ ಒಗ್ಗರಣೆ, ಪತ್ರೊಡೆ ಕಾಯಿರವೆ, ಅರಶಿನ ಎಲೆ ಗಟ್ಟಿ, ಹಲಸಿನ ಗಟ್ಟಿ, ಮೆಂತ್ಯ ಗಂಜಿ, ತೊಜಂಕ ವಡೆ, ನುಗ್ಗೆ ಸೊಪ್ಪಿನ ಗಟ್ಟಿಬಜ್ಜೆ, ಸಬ್ಬಾಸಿಗೆ ಸೊಪ್ಪಿನ ವಡೆ, ಪುಂಡಿ ಕಡ್ಲೆ ಗಸಿ, ಬೆಳ್ತಿಗೆ ಅನ್ನ ಆರಿದ್ರ ಸೊಪ್ಪಿನ ತಂಬುಳಿ, ತಿಮರೆ ತಂಬುಳಿ, ಹುರುಳಿ ಸಾರು, ಕೆಸುವಿನ ಎಲೆ ದಂಟಿನ ಬೋಳು ಹುಳಿ, ಸೌತೆಕಾಯಿ ಹಲಸಿನ ಬೀಜ ಅಮಟೆಕಾಯಿ ತೆಟ್ಲಾ ಸೇರಿಸಿ ಕೊದ್ದಿಲ್,ಮಾವಿನ ಕಾಯಿ ಭರತ, ಕಾಯಿ ಹುಳಿ, ಮಜ್ಜಿಗೆ ಹುಳಿ, ಗೆಣಸು ಪಾಯಸ , ಉಂಡುಳ್ಕ, ಮಸಾಲೆ ಮಜ್ಜಿಗೆ ಸೇರಿ ವಿವಿಧ ಕಾದ್ಯಗಳ ರುಚಿಕಟ್ಟಾದ ಸಂತರ್ಪಣೆ ನೆರವೇರಿತು.

ಸಂತರ್ಪಣೆಯ ಸಂದರ್ಭದಲ್ಲಿ ನೆರೆದ ಭಕ್ತರುಗಳಿಗೆ ನಿವೃತ್ತ ಉಪನ್ಯಾಸಕಿ ಕೊರಂಗ್ರಪಾಡಿ ಚಂದ್ರಕಲಾ ಶರ್ಮ ಅವರು ಆಟಿಯ ವಿಶೇಷತೆ ಬಗ್ಗೆ ತಿಳಿ ಹೇಳಿದರು. ನಾಗಶಯನ ಆಟಿಯ ವಿಶೇಷತೆಯನ್ನು ತಿಳಿಸುವ ಹಾಡನ್ನು ಹಾಡಿ ರಂಜಿಸಿದರು.

Advertisement

ಮುಂದಿನ ಪೀಳಿಗೆಗೆ ಮಾದರಿಯಾಗುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ರಚನೆ ಯಾದಂದಿನಿಂದಲೂ ದಲೂ ಕೂಡ ಸಾಂಪ್ರದಾಯಿಕ ಆಚರಣೆಗೆ ಪ್ರಾಮುಖ್ಯತೆ ನೀಡುತ್ತಾ ಬಂದಿದ್ದು ಅದರಲ್ಲಿ ಆಟಿ ಆಚರಣೆಯು ಒಂದಾಗಿದೆ.. ಆಟಿಯ ಸಂತರ್ಪಣೆಯಲ್ಲಿ ಖಾದ್ಯವನ್ನು ತಯಾರಿಸಲು ಬೇಕಾದ ಸೊಪ್ಪು,ಪತ್ರೆ ಗಳನ್ನು ನೀಡಿ ಸಹಕರಿಸಿದ ಎಲ್ಲರಿಗೂ ಕ್ಷೇತ್ರ ಉಸ್ತುವಾರಿ ಕುಸುಮಾ ನಾಗರಾಜ್ ಕೃತಜ್ಞತೆಯನ್ನು ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next