ಶಿರ್ವ: ಲೋ ಫ್ಲೋರ್ ಬಸ್‌ಗಳಾಗಿ ಹಿರಿಯ ನಾಗರಿಕರು, ಮಹಿಳೆಯರು, ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಾಗಿದ್ದು ವಿಧಾನ ಸಭೆ ಚುನಾವಣೆ ಬಳಿಕ ಮರೆಯಾಗಿದ್ದ ಉಡುಪಿ-ಶಿರ್ವ ನರ್ಮ್ ಬಸ್ ಸೇವೆಯು ಬುಧವಾರದಿಂದ ಪುನರಾರಂಭಗೊಂಡಿದೆ.
ಪ್ರಯಾಣಿಕರಿಗೆ ಮಾಹಿತಿ ನೀಡಲಿ
ವಿದ್ಯಾರ್ಥಿಗಳಿಗೆ ಮತ್ತು ನಿತ್ಯ ಪ್ರಯಾಣಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಶಿರ್ವದ ವಾರದ ಸಂತೆಯ ದಿನ, ಗ್ರಾ.ಪಂ.ನಲ್ಲಿ ಮತ್ತು ಶಾಲಾ ಕಾಲೇಜುಗಳಲ್ಲಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮಾಹಿತಿ ನೀಡಲಿ. ಉತ್ತಮ ರಸ್ತೆ ಸೌಕರ್ಯವಿರುವುದರಿಂದ ಕಾರು ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುವ ನಾಗರಿಕರು ನರ್ಮ್ ಬಸ್ಸುಗಳಲ್ಲಿ ಪ್ರಯಾಣಿಸುವಂತೆ ಫಾಸ್ಟ್ ಸರ್ವಿಸ್ ಬಸ್ಸುಗಳಸೇವೆ ನೀಡಲಿ. ಅಲ್ಲದೆ ಉಡುಪಿಯಿಂದ ಶಿರ್ವಕ್ಕೆ ಬಸ್ಸಿನ ಪರಿಷ್ಕೃತ ವೇಳಾಪಟ್ಟಿಯ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ರೂಟ್‌ಗಳಲ್ಲಿ ಬಸ್ಸು ನಿರಂತರವಾಗಿ ಸಂಚರಿಸಲಿದೆ ಎಂದು ಪ್ರಯಾಣಿಕರಿಗೆ ಭರವಸೆ ಮೂಡಿಸಲಿ ಎಂಬುದು ನಾಗರಿಕರ ಅಭಿಪ್ರಾಯ.
ಉಡುಪಿ-ಮೂಡುಬೆಳ್ಳೆ-ಶಿರ್ವ ರೂಟ್‌ನ ಬಸ್ ಸಂಚಾರ ಸ್ಥಗಿತಗೊಳಿಸಿದ ಬಗ್ಗೆ ಉದಯವಾಣಿ ವರದಿ ಪ್ರಕಟಿಸಿತ್ತು. ಈ ಬಗ್ಗೆ ಸ್ಪಂದಿಸಿದ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಜನರ ಬೇಡಿಕೆಗನುಗುಣವಾಗಿ ಶಿರ್ವಕ್ಕೆ ನರ್ಮ್ ಬಸ್ ಸೇವೆಯನ್ನು ಬುಧವಾರದಿಂದ ಪುನರಾರಂಭಿಸಿದ್ದಾರೆ. ವಿದ್ಯಾರ್ಥಿಗಳಿಗೆ ಪಾಸ್ ಮತ್ತು ಹಿರಿಯ ನಾಗರಿಕರಿಗೆ ಶೇ. 25 ರಿಯಾಯಿತಿ ಇದ್ದು ನರ್ಮ್ ಬಸ್‌ನ ವೇಳಾಪಟ್ಟಿಯನ್ನು ನೀಡಲಾಗಿದೆ.
ನರ್ಮ್ ಬಸ್‌ಸಂಚಾರ ಸೇವೆ ಆರಂಭಗೊಂಡ ಬಗ್ಗೆ ಮಾಹಿತಿ ದೊರಕಿದೆ. ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಗ್ರಾಮೀಣ ಪ್ರದೇಶದ ಜನರ ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಿರ್ವ ಮತ್ತು ಮೂಡುಬೆಳ್ಳೆ ಗ್ರಾ.ಪಂ.ಆಡಳಿತ, ಶಾಲಾ ಕಾಲೇಜುಗಳ ಮುಖ್ಯಸ್ಥರೊಂದಿಗೆ ಚರ್ಚಿಸಿ ಬಸ್ಸಿನ ವೇಳಾಪಟ್ಟಿ ನಿಗದಿಗೊಳಿಸಿ ಪ್ರಯಾಣಿಕರಿಗೆ ಮಾಹಿತಿ ನೀಡಲಿ.ಈ ಬಗ್ಗೆ ಈಗಾಗಲೇ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.
-ವಿಲ್ಸನ್ ರೊಡ್ರಿಗಸ್, ಜಿ.ಪಂ.ಸದಸ್ಯ, ಶಿರ್ವ