Advertisement
ಕನಕನ ಕಿಂಡಿ ಮೂಲಕ ದರ್ಶನ ಮರಣೋತ್ತರ ಪರೀಕ್ಷೆ ನಡೆಸಿದ ಕಾರಣ ಪಾರ್ಥಿವ ಶರೀರವನ್ನು ಶ್ರೀಕೃಷ್ಣ ಮಠದೊಳಗೆ ಒಯ್ಯದೆ ಕನಕನ ಕಿಂಡಿ ಮೂಲಕ ಕೃಷ್ಣದರ್ಶನ ಮಾಡಿಸಲಾಯಿತು. ಪರ್ಯಾಯ ಶ್ರೀ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಶ್ರೀಕೃಷ್ಣನಿಗೆ ಆರತಿಯೆತ್ತಿ ಶ್ರೀಗಳಿಗೂ ಬೆಳಗಿದರು. ಅನಂತರ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರಿಗೆ ದೇವರಿಗೆ ಸಮರ್ಪಿಸಿದ ತುಳಸಿ ಮಾಲೆಯನ್ನು ಅರ್ಪಿಸಿದರು. ಅಲ್ಲಿಂದ ಚಂದ್ರಮೌಳೀಶ್ವರ, ಅನಂತೇಶ್ವರ ದೇವರ ದರ್ಶನ ಮಾಡಿಸಿ ರಥಬೀದಿಗೆ ಪ್ರದಕ್ಷಿಣೆ ಬಂದು ಹಿರಿಯಡಕ ಸಮೀಪದ ಶೀರೂರು ಮೂಲ ಮಠಕ್ಕೆ ಕರೆದೊಯ್ಯಲಾಯಿತು.
ಬೆಳಗ್ಗೆ 11 ಗಂಟೆ ಸುಮಾರಿಗೆ ಶ್ರೀಗಳ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ ಎಂಬ ಮಾಹಿತಿ
ಯಿದ್ದುದರಿಂದ ಸಾಕಷ್ಟು ಮಂದಿ ಭಕ್ತರು ಸೇರಿದ್ದರು. ಮಧ್ಯಾಹ್ನ ವೇಳೆ ಜನ ಕೊಂಚ ಕಡಿಮೆಯಾದರೂ ಶ್ರೀಗಳ ಶರೀರವನ್ನು ಮಠದ ಬಳಿ ತರುವಷ್ಟರಲ್ಲಿ ಮತ್ತೆ ಅಪಾರ ಸಂಖ್ಯೆಯಲ್ಲಿ ಸೇರಿದ್ದರು. ಹೀಗಾಗಿ ಶೀರೂರು ಮಠಕ್ಕೆ ಶ್ರೀಗಳ ಶರೀರವನ್ನು ಹಿಂಬಾಗಿಲ ಮೂಲಕ ತರಲಾಯಿತು. ಸೋದೆ ಮಠದ ನೇತೃತ್ವ
ಶ್ರೀಗಳ ವೃಂದಾವನ ಸೇರ್ಪಡೆಯ ಎಲ್ಲ ವಿಧಿವಿಧಾನಗಳನ್ನು ಸೋದೆ ಮಠದ ನೇತೃತ್ವದಲ್ಲಿ ನಡೆಸಲಾಯಿತು.
ಶಿಷ್ಯರನ್ನು ಗುರುತಿಸಿದ್ದರೆ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರು ತಮ್ಮ ಪಟ್ಟಶಿಷ್ಯನನ್ನು ಗುರುತಿಸಿದ್ದರು ಎಂದು ಬಲ್ಲ ಮೂಲಗಳು ತಿಳಿಸಿವೆ. ಸೂಕ್ತ ಸಮಯದಲ್ಲಿ ಘೋಷಿಸಲು ಚಿಂತನೆ ನಡೆಸಿದ್ದರೆಂದು ಅವರ ಆಪ್ತ ಮೂಲಗಳು ತಿಳಿಸಿವೆ.
Related Articles
ಅಷ್ಟಮಠಗಳ ಶ್ರೀಗಳು ಅಸ್ತಂಗತರಾದರೆ ಸಂತಾಪ ಸೂಚಕವಾಗಿ 54 ಬಾರಿ ಬೆಡಿ ಸಿಡಿಸಲಾಗುತ್ತದೆ ಮತ್ತು ನಿರಂತರವಾಗಿ ನಗಾರಿ ಬಾರಿಸಲಾಗುತ್ತದೆ. ಹಿಂದೆ ಈ ಬೆಡಿ ಸದ್ದು ಸುಮಾರು 15ರಿಂದ 20 ಕಿ.ಮೀ. ವರೆಗೆ ಕೇಳಿಸುತ್ತಿತ್ತು. ಈ ಮೂಲಕವೇ ಕೃಷ್ಣ ಮಠದಲ್ಲಿ ಶ್ರೀಗಳು ನಿಧನರಾಗಿದ್ದಾರೆ ಎನ್ನುವ ವಾರ್ತೆ ಊರಿ ನವರಿಗೆ ತಿಳಿಯುತ್ತಿತ್ತು. ಗುರುವಾರ ಕೃಷ್ಣ ಮಠದ ನಗಾರಿ ಬಾರಿಸುವ ಸದಾಶಿವ ಮಧ್ಯಾಹ್ನದಿಂದಲೇ ನಗಾರಿ ಬಾರಿಸುತ್ತಿದ್ದರು. ನಗಾರಿ ಚರ್ಮ ಸಡಿಲು ಬಿಟ್ಟು ಬಾರಿಸುವ ಇದನ್ನು ಹಸಿ ನಗಾರಿ ಎನ್ನುತ್ತಾರೆ. ಇದರ ಧ್ವನಿ ಭಿನ್ನವಾಗಿರುತ್ತದೆ.
Advertisement